ಸರ್ಕಾರಿ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಕುಸಿತ

ಅಥಣಿಯಲ್ಲಿ ಸರ್ಕಾರಿ ಪ್ರಾಥಮಿಕ ಶಿಕ್ಷಕರ ಸಂಘದ ಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು. ಮರುಳಸಿದ್ಧ ಸ್ವಾಮೀಜಿ, ಚಂದ್ರಶೇಖರ ನುಗ್ಗಲಿ, ಜಿ.ಎಂ.ಹಿರೇಮಠ, ಪಂಡಿತ ಮಾಳಿ ಇತರರಿದ್ದರು.
ಅಥಣಿಯಲ್ಲಿ ಸರ್ಕಾರಿ ಪ್ರಾಥಮಿಕ ಶಿಕ್ಷಕರ ಸಂಘದ ಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು. ಮರುಳಸಿದ್ಧ ಸ್ವಾಮೀಜಿ, ಚಂದ್ರಶೇಖರ ನುಗ್ಗಲಿ, ಜಿ.ಎಂ.ಹಿರೇಮಠ, ಪಂಡಿತ ಮಾಳಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಅಧ್ಯಕ್ಷ ಚಂದ್ರಶೇಖರ ನುಗ್ಗಲಿ ಆತಂಕ
  • ಪದಾಧಿಕಾರಿಗಳ ಪದಗ್ರಹಣ ಸಮಾರಂಭ
ಅಥಣಿ:

ವಾರದಲ್ಲಿ ಸರ್ಕಾರದಿಂದ ೧೫ ಸಾವಿರ ಶಿಕ್ಷಕರ ನೇಮಕಾತಿ, ಗುತ್ತಿಗೆ ಆಧಾರದ ಮೇಲೆ ೨,೫೦೦ ಡೇಟಾ ಎಂಟ್ರಿ ಆಪರೇಟರ್ ನೇಮಕ ನಡೆಯಲಿದೆ ಎಂದು ರಾಜ್ಯ ಸರ್ಕಾರಿ ಶಿಕ್ಷಕರ ಸಂಘದ ಅಧ್ಯಕ್ಷ ಚಂದ್ರಶೇಖರ ನುಗ್ಗಲಿ ಹೇಳಿದರು.

ಪಟ್ಟಣದ ರಾಯಲ್ ಹಾಲ್‌ನಲ್ಲಿ ಶನಿವಾರ ಹಮ್ಮಿಕೊಂಡಿದ್ದ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಥಣಿ ತಾಲೂಕಿನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದ ಅವರು, ಹೊಸ ಪಿಂಚಣಿ ರದ್ದುಮಾಡಿ ಹಳೆಯ ಪಿಂಚಣಿ ಜಾರಿಗೊಳಿಸಲು ಸರ್ಕಾರಕ್ಕೆ ಒತ್ತಡ ಹೇರಲಾಗುವುದು. ಅನ್ಯಕೆಲಸಕ್ಕೆ ಶಿಕ್ಷಕರನ್ನು ಬಳಸುವಂತಿಲ್ಲ. ೫೫ ವರ್ಷ ದಾಟಿದ ಶಿಕ್ಷಕರನ್ನು ಬಿಎಲ್‌ಒ ಕೆಲಸಕ್ಕೆ ನಿಯೋಜಿಸಿದ ಸಂದರ್ಭದಲ್ಲಿ ಮೃತರಾದರೆ ೧ ಕೋಟಿ ರೂ. ಪರಿಹಾರ ನೀಡಬೇಕು ಎಂಬ ಆದೇಶ ಅಧಿವೇಶನದಲ್ಲಿ ಜಾರಿಯಾಗಲಿದೆ. ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕುಸಿಯುತ್ತಿರುವ ಬಗ್ಗೆ ಶಿಕ್ಷಕರು, ಪಾಲಕರು ಚಿಂತನೆ ನಡೆಸಬೇಕಿದೆ ಎಂದರು.
ಚಿಕ್ಕೋಡಿ ಶಿಕ್ಷಕರ ಸಂಘಧ ಜಿಲ್ಲಾಧ್ಯಕ್ಷ ಜಿ.ಎಂ.ಹಿರೇಮಠ ಮಾತನಾಡಿ, ಶಿಕ್ಷಕರ ಸಮಸ್ಯೆ ನಿವಾರಿಸುವ ಜತೆಗೆ ಬೇಡಿಕೆಗಳನ್ನೂ ಈಡೆರಿಸಬೇಕು ಎಂದು ಹೇಳಿದರು.
ಪದಗ್ರಹಣ: ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕಾಧ್ಯರಾಗಿ ಪಂಡಿತ ಮಾಳಿ, ಉಪಾಧ್ಯಕ್ಷರಾಗಿ ಮೀನಾಕ್ಷಿ ಮಿರ್ಜಿ, ಭರತ ಕಾಂಬಳೆ, ಪ್ರಧಾನ ಕಾರ್ಯದರ್ಶಿಯಾಗಿ ಬಾಬಾಸಾಬ ಗುರುವ, ಖಜಾಂಚಿಯಾಗಿ ರವೀಂದ್ರ ಹಳ್ಳೊಳ್ಳಿ, ಸಹ ಕಾರ್ಯದರ್ಶಿಯಾಗಿ ಶೋಭಾ ಢವಳೆ, ಶಿವಬಸಪ್ಪ ಮುಗಳಖೋಡ, ಸಂಘಟನಾ ಕಾರ್ಯದರ್ಶಿಯಾಗಿ ಪರಿಮಳಾ ದಳವಾಯಿ, ಅಣ್ಣಪ್ಪ ತಳವಾರ ಪದಗ್ರಹಣ ಮಾಡಿದರು.
ತಾಲೂಕಾಧ್ಯಕ್ಷ ಪಂಡಿತ ಮಾಳಿ, ನಿಕಟಪೂರ್ವ ಜಿಲ್ಲಾಧ್ಯಕ್ಷ ಸಿದ್ದರಾಮ ಲೋಕನ್ನವರ, ಶೆಟ್ಟರಮಠದ ಮರುಳಸಿದ್ದ ಸ್ವಾಮೀಜಿ, ರಫಿಕ್ ಡಾಂಗೆ, ಎಂ.ಆರ್.ಮುಂಜೆ, ಜಿ.ಎ.ಖೋತ, ಬಿ.ಎಸ್.ಗುರವ, ಬಿ.ಎಲ್. ಪೂಜಾರಿ, ಮುರಿಗೆಪ್ಪ ಜಮಖಂಡಿ, ಬಿ.ಎಲ್.ಮೂಲಿಮನಿ, ಅಸ್ಲಂ ಮುಲ್ಲಾ, ಕೆ.ಆರ್.ಬಡಿಗೇರ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net