ಬೆಳಗಾವಿ ನಗರದ ಕೆಎಲ್ಎಸ್ ರಾಜಾ ಲಖಮಗೌಡ ಕಾನೂನು ಕಾಲೇಜಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮವನ್ನು ಸಂಜೀವ ಕುಲಕರ್ಣಿ ಉದ್ಘಾಟಿಸಿದರು. ಆರ್.ಎಸ್.ಮುತಾಲಿಕ, ಡಾ.ಎ.ಎಚ್.ಹವಾಲ್ದಾರ್, ಪ್ರೊ.ಮಾಧುರಿ ಕುಲಕರ್ಣಿ ಇತರರಿದ್ದರು.
ಬೆಳಗಾವಿ: ವಿದ್ಯಾರ್ಥಿಗಳಲ್ಲಿ ಧೈರ್ಯ ಮತ್ತು ಆತ್ಮವಿಶ್ವಾಸ ಹೆಚ್ಚಿಸುವಲ್ಲಿ ಚರ್ಚಾ ಸ್ಪರ್ಧೆ, ಕಾರ್ಯಾಗಾರ ಮತ್ತು ಉಪನ್ಯಾಸ ಕಾರ್ಯಕ್ರಮ ಸಹಕಾರಿಯಾಗಿವೆ ಎಂದು ಜಿಲ್ಲಾ ಗ್ರಾಹಕ ವ್ಯಾಜ್ಯ ಪರಿಹಾರ ಆಯೋಗದ ಅಧ್ಯ ಸಂಜೀವ ಕುಲಕರ್ಣಿ ಹೇಳಿದರು.
ಇಲ್ಲಿನ ಕೆಎಲ್ಎಸ್ ರಾಜಾ ಲಖಮಗೌಡ ಕಾನೂನು ಕಾಲೇಜಿನಲ್ಲಿ 86ನೇ ಮಜಲಿ (ಇಂಗ್ಲಿಷ್) ಮತ್ತು ಬೆಂಬಳಗಿ (ಕನ್ನಡ) ಸ್ಮರಣಾರ್ಥ ಆಯೋಜಿಸಿದ್ದ ಚರ್ಚಾ ಸ್ಪರ್ಧೆ ಕಾರ್ಯಕ್ರಮದಲ್ಲಿ ಮಾತನಾಡಿ, ಕಾನೂನು ವಿದ್ಯಾರ್ಥಿಗಳು ಚರ್ಚಾಕೂಟದಲ್ಲಿ ಭಾಗಿಯಾಗುವುದರಿಂದ ಜ್ಞಾನ ವೃದ್ಧಿಯಾಗುತ್ತದೆ ಎಂದರು.
ಅಧ್ಯತೆ ವಹಿಸಿದ್ದ ಕಾಲೇಜಿನ ಆಡಳಿತ ಮಂಡಳಿ ಅಧ್ಯ ಆರ್.ಎಸ್.ಮುತಾಲಿಕ ಮಾತನಾಡಿದರು.
ಮಜಲಿ ಸ್ಮಾರಕ ರೋಲಿಂಗ್ ಶೀಲ್ಡ್ ಪ್ರಶಸ್ತಿಯನ್ನು ಕೆಎಲ್ಎಸ್ ಸಿಬಿಎಎಲ್ಸಿ ಕಾಲೇಜು, ಬೆಂಬಳಗಿ ಸ್ಮಾರಕ ರೋಲಿಂಗ್ ಶೀಲ್ಡ್ನ್ನು ಚಿಕ್ಕೋಡಿಯ ಕೆಎಲ್ಇ ಕಾನೂನು ಕಾಲೇಜು ಗೆದ್ದುಕೊಂಡಿದೆ. ಪ್ರಾಂಶುಪಾಲ ಡಾ.ಎ.ಎಚ್.ಹವಾಲ್ದಾರ್, ಸಾಹಿತ್ಯ ಕ್ಲಬ್ ಅಧ್ಯೆ ಪ್ರೊ.ಮಾಧುರಿ ಕುಲಕರ್ಣಿ ಇತರರಿದ್ದರು.