ರೈತರ, ಗ್ರಾಹಕರ ಸ್ನೇಹಿಯಾಗಿರುವ ಜಿಲ್ಲಾ ಸಹಕಾರಿ ಬ್ಯಾಂಕವು ವರ್ಷದಿಂದ ವರ್ಷಕ್ಕೆ ತನ್ನ ಆರ್ಥಿಕ ವಹಿವಾಟಿನ ಕ್ಷೇತ್ರವನ್ನ ವಿಸ್ತರಿಸಿಕೊಳ್ಳುತ್ತಿದೆ.ಪ್ರಸಕ್ತ ಸಾಲಿನಲ್ಲಿ 9,776 ಕೋಟಿ ರೂ.ದುಡಿಯುವ ಬಂಡವಾಳ, 6,703.35 ಕೋಟಿ ರೂ. ಠೇವಣಿ ಹೊಂದಿದೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ 616.30 ಕೋಟಿ ರೂ. ಠೇವಣಿ ಹೆಚ್ಚಳವಾಗಿದೆ. 165ಸಂಘಗಳಿಗೆ 22.89 ಕೋಟಿ ರೂ. ಗೋಡಾವುನ ಸಾಲ,ದ್ವಿಚಕ್ರ, ಕಾರ,ಜೆಸಿಬಿ, ಟ್ರಕ್,ವಾಣಿಜ್ಯ ಬಾಡಿಗೆ ವಾಹನ, ಮನೆ ಕಟ್ಟಲು, ವೈಯಕ್ತಿಕ ಸಾಲ ಸೇರಿ ಕೃಷಿಯೇತರ 160.28 ಕೋಟಿ ರೂ.ಸಾಲ ಹಾಗೂ ಚಿನ್ನಾಭರಣ ಅಡುವಿನ ಮೇಲೆ 173.36 ಕೋಟಿ ರೂ. ಸಾಲ ಸೇರಿ ಒಟ್ಟು 6,738.19 ಕೋಟಿ ರೂ. ಸಾಲ ನೀಡಲಾಗಿದೆ. 335 ಕೋಟಿ ರೂ. ಷೇರು ಬಂಡವಾಳ ಹೊಂದಿದೆ. ಒಟ್ಟಿನಲ್ಲಿ ಬ್ಯಾಂಕವು 2025-26ನೇ ಸಾಲಿನಲ್ಲಿ 13,441 ಕೋಟಿ ರೂ. ಆರ್ಥಿಕ ವಹಿವಾಟು ನಡೆಸಿದೆ ಎಂದು ವಿವರಿಸಿದರು.