ಮೂರ್ತಿ ಪ್ರತಿಷ್ಠಾಪನೆಯ 41ನೇ ವಾರ್ಷಿಕೋತ್ಸವ

ದಾನಮ್ಮ ದೇವಿ
ದಾನಮ್ಮ ದೇವಿ
Published on
ಬೆಳಗಾವಿ: ಶಹಾಪುರ ಮಹಾತ್ಮಪುಲೆ ರಸ್ತೆಯ ದಾನಮ್ಮ ದೇವಿ ಮಂದಿರದಲ್ಲಿನ ದಾನಮ್ಮ ದೇವಿ ಮೂರ್ತಿ ಪ್ರತಿಷ್ಠಾಪನೆಯ 41ನೇ ವಾರ್ಷಿಕೋತ್ಸವ ಪ್ರಯುಕ್ತ ವಿವಿಧ ಕಾರ್ಯಕ್ರಮ ಆಯೋಜಿಸಲಾಗಿದೆ.
ಜ. 25ರಂದು ಬೆಳಗ್ಗೆ 10.15ಕ್ಕೆ ಜಗಜ್ಯೋತಿ ಬಸವೇಶ್ವರ ಕಲ್ಯಾಣ ಮಂದಿರ ಟ್ರಸ್ಟ್ ಮತ್ತು ಕೆಎಲ್ಇ ಆಸ್ಪತ್ರೆ ಸಹಯೋಗದಲ್ಲಿ ರಕ್ತದಾನ ಶಿಬಿರ ಆಯೋಜಿಸಲಾಗಿದ್ದು, ವಡಗಾವಿ ಸಾಯಿ ಆಸ್ಪತ್ರೆಯ ಎಸ್.ಎಂ.ದೊಡ್ಡಮನಿ ಉದ್ಘಾಟಿಸುವರು.
ಜ.31ರಂದು ಬೆಳಗ್ಗೆ 9ಕ್ಕೆ ಜಂಗಮ ದಂಪತಿಗಳ ಪೂಜೆ, ಮಧ್ಯಾಹ್ನ 12ರಿಂದ ಮಹಾಪ್ರಸಾದ, ಸಂಜೆ 5.30ಕ್ಕೆ ಪಲ್ಲಕ್ಕಿ ಉತ್ಸವವನ್ನು ಉದ್ಯಮಿ ಅಮರ ಹತ್ತರಕಿ ಉದ್ಘಾಟಿಸುವರು. ನಂತರ ಜರುಗುವ ವಾರ್ಷಿಕೋತ್ಸವದ ಮುಖ್ಯ ಸಮಾರಂಭದಲ್ಲಿ ಕಾರಂಜಿ ಮಠದ ಗುರುಸಿದ್ಧ ಸ್ವಾಮೀಜಿ, ಉದ್ಯಮಿ ಜಯಂತ ಹುಂಬರವಾಡಿ, ಲಿಂಗರಾಜ ಕಾಲೇಜ್ ನಿವೃತ್ತ ಪ್ರಾಚಾರ್ಯ ಡಾ.ಬಸವರಾಜ ಜಗಜಂಪಿ, ಕೆಎಲ್ಇ ಪ್ರಸಾರಂಗ ವಿಭಾಗದ ನಿರ್ದೇಶಕ ಬಿ.ಎಸ್.ಗವಿಮಠ, ಜಿಎ ಮಹಾವಿದ್ಯಾಲಯದ ನಿವೃತ್ತ ಪ್ರಾಚಾರ್ಯ ಡಾ.ಎಂ.ಎಸ್.ಇಂಚಲ ಪಾಲ್ಗೊಳ್ಳುವರು ಎಂದು ಪ್ರಕಟಣೆ ತಿಳಿಸಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net