ಉತ್ತಮ ಆರೋಗ್ಯಕ್ಕಾಗಿ ಸೈಕ್ಲೋಥಾನ್

ಬೆಕ್ಕೇರಿ ಗ್ರಾಮದಲ್ಲಿ ಲಕ್ಕವ್ವದೇವಿ ಜಾತ್ರಾಮಹೋತ್ಸವ ಅಂಗವಾಗಿ ಆಯೋಜಿಸಿದ್ದ ಸೈಕ್ಲೋಥಾನ್ ಸ್ಪರ್ಧೆಗೆ ವಿವೇಕರಾವ ಪಾಟೀಲ ಚಾಲನೆ ನೀಡಿದರು. ರಾಜು ಅಳಾಜ, ವಿಶ್ವನಾಥ ಅಳಾಜ ಇತರರಿದ್ದರು.
ಬೆಕ್ಕೇರಿ ಗ್ರಾಮದಲ್ಲಿ ಲಕ್ಕವ್ವದೇವಿ ಜಾತ್ರಾಮಹೋತ್ಸವ ಅಂಗವಾಗಿ ಆಯೋಜಿಸಿದ್ದ ಸೈಕ್ಲೋಥಾನ್ ಸ್ಪರ್ಧೆಗೆ ವಿವೇಕರಾವ ಪಾಟೀಲ ಚಾಲನೆ ನೀಡಿದರು. ರಾಜು ಅಳಾಜ, ವಿಶ್ವನಾಥ ಅಳಾಜ ಇತರರಿದ್ದರು.
Published on
ರಾಯಬಾಗ: ಸೈಕಲ್ ಸವಾರಿ ದೇಹದಾಢ್ಯತೆ ಹಾಗೂ ರೋಗನಿರೋಧಕ ಶಕ್ತಿ ಹೆಚ್ಚಿಸಲು ಸಹಕಾರಿ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ವಿವೇಕರಾವ ಪಾಟೀಲ ಹೇಳಿದರು.
ತಾಲೂಕಿನ ಬೆಕ್ಕೇರಿ ಗ್ರಾಮದಲ್ಲಿ ಲಕ್ಕವ್ವದೇವಿ ಜಾತ್ರಾ ಮಹೋತ್ಸವ ಅಂಗವಾಗಿ ಭಾನುವಾರ ರಾಯಬಾಗ ಸೈಕ್ಲಿಂಗ್ ಕ್ಲಬ್ ಹಾಗೂ ಬಾಗಿ ಸೋಷಿಯಲ್ ಕ್ಲಬ್ ಆಶ್ರಯದಲ್ಲಿ ಆಯೋಜಿಸಿದ್ದ ಸೈಕ್ಲೋಥಾನ್ ಸ್ಪರ್ಧೆಗೆ ಚಾಲನೆ ನೀಡಿ ಮಾತನಾಡಿ, ಇಂದಿನ ಯುವ ಜನಾಂಗ ಮತ್ತೆ ಸೈಕ್ಲಿಂಗ್ ಮಾಡುತ್ತಿರುವುದು ಶ್ಲಾಘನೀಯ ಎಂದರು. ಸೈಕ್ಲೋಥಾನನಲ್ಲಿ 50ಕ್ಕೂ ಹೆಚ್ಚು ಸವಾರರು ಭಾಗವಹಿಸಿದ್ದರು. ವಿಜೇತರಿಗೆ ಬಹುಮಾನ ನೀಡಲಾಯಿತು. ಬಾಗಿ ಸೋಷಿಯಲ್ ಕ್ಲಬ್ ಅಧ್ಯಕ್ಷ ರಾಜು ಅಳಾಜ, ವಿಶ್ವನಾಥ ಅಳಾಜ, ಹನುಮಂತ ಟಕ್ಕನವರ, ಜಿತೇಂದ್ರ ಶೆಟ್ಟಿ, ಬಸಪ್ಪ ನಾಗೌಡರ, ಬಸು ನನದಿ, ಮನೋಹರ ನಾನಾಪ್ಪಗೋಳ, ಭೀಮು ನಾನಾಪಗೋಳ, ರಮೇಶ ಕುಲಕರ್ಣಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net