ಬೆಳಗಾವಿ: ನಗರದಲ್ಲಿರುವ ಬೆಳಗಾವಿ ಒನ್ ಕೇಂದ್ರಗಳಲ್ಲಿ ಹೆಸ್ಕಾಂ ವಿದ್ಯುತ್ ಬಿಲ್ ಪಾವತಿಸುವ ಕೌಂಟರ್‌ಗಳನ್ನು ಪುನಃ ಆರಂಭಿಸುವ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ತರಲಾಗಿದ್ದು, ಅನುಮೋದನೆ ಸಿಕ್ಕ ತಕ್ಷಣವೇ ಕೌಂಟರ್ ಸ್ಥಾಪಿಸಲಾಗುವುದು ಎಂದು ಹೆಸ್ಕಾಂ ನಗರ ಉಪವಿಭಾಗ 3ರ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಎ.ಎಂ.ಶಿಂಧೆ ತಿಳಿಸಿದರು.
ನಗರ ಉಪವಿಭಾಗ 3ರ ಕಚೇರಿಯಲ್ಲಿ ಶನಿವಾರ ಜರುಗಿದ ವಿದ್ಯುತ್ ಗ್ರಾಹಕರ ಕುಂದುಕೊರತೆ ಸಭೆಯಲ್ಲಿ ಗ್ರಾಹಕರಿಂದ ಕೇಳಿಬಂದ ಆಗ್ರಹಗಳಿಗೆ ಪ್ರತಿಕ್ರಿಯೆಸಿದ ಮಾತನಾಡಿದ ಅವರು, ಗ್ರಾಹಕರಿಗೆ ಪಿಎಂ ಸೂರ್ಯಘರ್ ಯೋಜನೆಯಡಿಯಲ್ಲಿ ಸೌರ ಮೇಲ್ಛಾವಣಿಗ ಹಾಕಿಕೊಳ್ಳಲು ಮನವೋಲಿಸಿದರು.
ಮಾಪಕದಲ್ಲಿನ ಸಮಸ್ಯೆ, ಕೆಲ ಬಡಾವಣೆಗಳಲ್ಲಿನ ವಿದ್ಯುತ್ ಸ್ಥಾವರ ಸಮಸ್ಯೆ, ಮಾಸಿಕ ಬಿಲ್ ತಾಂತ್ರಿಕ ದೋಷಗಳು, ರಸ್ತೆ ಅಗಲೀಕರಣಕ್ಕೆ ಅಡ್ಡವಾಗಿರುವ ವಿದ್ಯುತ್ ಕಂಬಗಳ ಸ್ಥಳಾಂತರ, ಸ್ಥಾವರದ ಹೆಸರು ಬದಲಾವಣೆ ಸೇರಿದಂತೆ ಗ್ರಾಹಕರಿಂದ ವಿವಿಧ ಕುಂದುಕೊರತೆಗಳು ಕೇಳಿಬಂದವು.
ವಿವಿಧ ಹಂತದ ಇಂಜಿನಿಯರುಗಳಾದ ಹೇಮಲತಾ ಹಿರೇಮಠ, ಬಿ.ಆರ್.ಸರಸ್ವತಿ, ಶಂಕರ ಕದಮ್, ಶೀತಲ ಸನದಿ, ರಾಜು ಜುಟ್ಟಿ, ವೈ.ಎಸ್.ನೇಜಕರ, ಕಲ್ಲಪ್ಪ ಗೋಕಾವಿ, ಕವಿತಾ ಕಾಮತ ಸಭೆಯಲ್ಲಿದ್ದರು.