ಶಿಕ್ಷಣದೊಂದಿಗೆ ಸಂಸ್ಕಾರ ಅಗತ್ಯ

ಖನಗಾಂವ ಗ್ರಾಮದ ಸರ್ಕಾರಿ ಆದರ್ಶ ವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಸ್ನೇಹಸಮ್ಮೇಳನದಲ್ಲಿ ಆದರ್ಶ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರಮಾಣ ಪತ್ರ ವಿತರಿಸಲಾಯಿತು. ಮಹೇಶ ಕಂಬಾರ, ನಂದವ್ವ ಮಾಳಗಿ, ಸಿದ್ದಗೌಡ ಪಾಟೀಲ, ಬಸಪ್ಪ ಹಮ್ಮಿಣಿ ಇತರರಿದ್ದರು.
ಖನಗಾಂವ ಗ್ರಾಮದ ಸರ್ಕಾರಿ ಆದರ್ಶ ವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಸ್ನೇಹಸಮ್ಮೇಳನದಲ್ಲಿ ಆದರ್ಶ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರಮಾಣ ಪತ್ರ ವಿತರಿಸಲಾಯಿತು. ಮಹೇಶ ಕಂಬಾರ, ನಂದವ್ವ ಮಾಳಗಿ, ಸಿದ್ದಗೌಡ ಪಾಟೀಲ, ಬಸಪ್ಪ ಹಮ್ಮಿಣಿ ಇತರರಿದ್ದರು.
Published on
ಸಮೀಪದ ಖನಗಾಂವ ಗ್ರಾಮದ ಸರ್ಕಾರಿ ಆದರ್ಶ ವಿದ್ಯಾಲಯ (ಆರ್‌ಎಸ್‌ಎಂಎ)ದಲ್ಲಿ ಶನಿವಾರ ಹಮ್ಮಿಕೊಂಡಿದ್ದ ವಾರ್ಷಿಕ ಸ್ನೇಹಸಮ್ಮೇಳನದಲ್ಲಿ ಮಾತನಾಡಿ, ವಿದ್ಯಾರ್ಥಿಗಳು ಶಿಕ್ಷಣದೊಂದಿಗೆ ಸಂಸ್ಕಾರ ಕಲಿಯಬೇಕು ಎಂದರು.
ಚಿಕ್ಕೋಡಿ ವಲಯ ಅರಣ್ಯಾಧಿಕಾರಿ ಕೆ.ಎನ್.ವಣ್ಣೂರ ಮಾತನಾಡಿ, ವಿದ್ಯಾರ್ಥಿಗಳು ಓದಿನತ್ತ ಗಮನಹರಿಸಿ ಧನಾತ್ಮಕ ಆಲೋಚನೆಯೊಂದಿಗೆ ಸಾಧನೆಯತ್ತ ಸಾಗಬೇಕು ಎಂದರು. ಸ್ಪರ್ಧೆಗಳಲ್ಲಿ ವಿಜೇತರಿಗೆ ಪ್ರಶಸ್ತಿ ವಿತರಿಸಲಾಯಿತು.
ಗ್ರಾಪಂ ಅಧ್ಯಕ್ಷೆ ನಂದವ್ವ ಮಾಳಗಿ, ಮುಖಂಡರಾದ ಸಿದ್ದಗೌಡ ಪಾಟೀಲ, ಬಸಪ್ಪ ಹಮ್ಮಿಣಿ, ಆನಂದ ಜಗಜಂಪಿ, ವಿವೇಕ ಕರಡಿ, ಚಂದ್ರಪ್ಪ ಘಸ್ತಿ, ಸಿಆರ್‌ಪಿ ನಾಗೇಶ ತಳವಾರ, ಎಸ್‌ಡಿಎಂಸಿ ಅಧ್ಯಕ್ಷ ಶಿವಾನಂದ ಪಾಟೀಲ, ಮುಖ್ಯಶಿಕ್ಷಕ ಎಂ.ಬಿ.ಪಾಟೀಲ ಇತರರಿದ್ದರು. ಶಿಕ್ಷಕ ಇಸ್ಮಾಯಿಲ್ ತಳಕಲ್ ಸ್ವಾಗತಿಸಿದರು. ಬಿ.ಜಿ.ಕೊಪ್ಪದ ನಿರೂಪಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net