ಶಿಕ್ಷಣದಿಂದ ಸಂಸ್ಕಾರ ವೃದ್ಧಿ

ಗುರುದೇವ ಜಂಬಗಿ ಶಿಕ್ಷಣ ಸಂಸ್ಥೆಯ ವಿಜ್ಞಾನ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮವನ್ನು ನಾರಾಯಣ ಬರಮನಿ ಉದ್ಘಾಟಿಸಿದರು. ಲಕ್ಷ್ಮಣ ಜಂಬಗಿ, ಅಖಿಲಕುಮಾರ ಹಲಗತ್ತಿ, ಎಂ.ಎಂ.ಕಾಂಬಳೆ, ಡಾ.ವರ್ಷಾ ಜಂಬಗಿ ಇತರರಿದ್ದರು.
ಗುರುದೇವ ಜಂಬಗಿ ಶಿಕ್ಷಣ ಸಂಸ್ಥೆಯ ವಿಜ್ಞಾನ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮವನ್ನು ನಾರಾಯಣ ಬರಮನಿ ಉದ್ಘಾಟಿಸಿದರು. ಲಕ್ಷ್ಮಣ ಜಂಬಗಿ, ಅಖಿಲಕುಮಾರ ಹಲಗತ್ತಿ, ಎಂ.ಎಂ.ಕಾಂಬಳೆ, ಡಾ.ವರ್ಷಾ ಜಂಬಗಿ ಇತರರಿದ್ದರು.
Published on
ಬೆಳಗಾವಿ: ತಂತ್ರಜ್ಞಾನ ಯುಗದಲ್ಲಿ ಶಿಕ್ಷಣ ಅತ್ಯಂತ ಮುಖ್ಯ. ಸಂಸ್ಕಾರಯುತ ಶಿಕ್ಷಣ ಕೇವಲ ಅಂಕಗಳಿಕೆಯಲ್ಲ, ಅದು ಮನುಷ್ಯನಲ್ಲಿ ಸಂಸ್ಕಾರ, ನಡೆನುಡಿ ಮತ್ತು ಆಚಾರ ಬೆಳೆಸುತ್ತದೆ ಎಂದು ಡಿಸಿಪಿ ನಾರಾಯಣ ಬರಮನಿ ಹೇಳಿದರು.
ತಾಲೂಕಿನ ಹೊನಗಾದಲ್ಲಿರುವ ಗುರುದೇವ ಜಂಬಗಿ ಶಿಕ್ಷಣ ಸಂಸ್ಥೆಗಳ ಸಹಯೋಗದೊಂದಿಗೆ ವಿಜ್ಞಾನ ಪದವಿಪೂರ್ವ ಕಾಲೇಜಿನಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಸ್ವಾಗತೋತ್ಸವ ಹಾಗೂ ವಿದ್ಯಾರ್ಥಿಗಳ ಸಂಕಲ್ಪ ಕಾರ್ಯಕ್ರಮದಲ್ಲಿ ಮಾತನಾಡಿ, ವೈದ್ಯಕೀಯ ಮತ್ತು ಇಂಜಿನಿಯರಿಂಗ್ ವಿದ್ಯಾರ್ಥಿಗಳು ಮಾದಕ ವಸ್ತುಗಳ ಜಾಲಕ್ಕೆ ಬಲಿಯಾಗುತ್ತಿರುವುದು ಆತಂಕಕಾರಿ. ವಿದ್ಯಾರ್ಥಿಗಳು ದುಶ್ಚಟಗಳಿಂದ ದೂರವಿರಬೇಕು ಎಂದರು.
ಜಂಬಗಿ ಶಿಕ್ಷಣ ಸಮೂಹ ಸಂಸ್ಥೆಗಳ ನಿರ್ದೇಶಕ ಲಕ್ಷ್ಮಣ ಜಂಬಗಿ ಮಾತನಾಡಿ, 13ರಿಂದ 19 ವರ್ಷದಲ್ಲಿ ವಿದ್ಯಾರ್ಥಿಗಳ ಮನಸ್ಸು ಚಂಚಲವಾಗಿರುತ್ತದೆ. ಈ ಹಂತದಲ್ಲಿ ಪಾಲಕರು ಮಕ್ಕಳ ಬಗ್ಗೆ ಹೆಚ್ಚಿನ ನಿಗಾವಹಿಸಬೇಕು ಎಂದರು.
ಗುರುದೇವ ಶಿಕ್ಷಣ ಸಮೂಹ ಸಂಸ್ಥೆಗಳ ಸಂಸ್ಥಾಪಕ ಅಖಿಲಕುಮಾರ ಹಲಗತ್ತಿ ಮಾತನಾಡಿ, ಹಿಂದುಳಿದಿರುವ ವಿದ್ಯಾರ್ಥಿಗಳಿಗೆ ವಿಶೇಷ ಕಾಳಜಿ ವಹಿಸಿ, ಅವರ ಬುದ್ಧಿಮಟ್ಟ ಉತ್ತಮಪಡಿಸಿ ಯಶಸ್ಸು ತಂದುಕೊಡುವುದೇ ಶಿಕ್ಷಣ ಸಂಸ್ಥೆಯ ಕರ್ತವ್ಯ ಎಂದರು.
ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 625ಕ್ಕೆ 625 ಅಂಕ ಗಳಿಸಿದ ದಿವ್ಯಾ ದೇಸಾಯಿ ಅವರನ್ನು ಸನ್ಮಾನಿಸಲಾಯಿತು.
ಶಾಲಾ ಶಿಕ್ಷಣ ಇಲಾಖೆ ನಿರ್ದೇಶಕ ಎಂ.ಎಂ.ಕಾಂಬಳೆ, ಜಂಬಗಿ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ.ವರ್ಷಾ ಜಂಬಗಿ,ಡಾ.ಅಮೋಘ ಜಂಬಗಿ, ಗುರುದೇವ ಸಮೂಹ ಸಂಸ್ಥೆಗಳ ವಲಯ ಅಧಿಕಾರಿ ಮಹಾಲಿಂಗ ಕಮತಗಿ, ಪ್ರಾಂಶುಪಾಲ ಪ್ರವೀಣ ಚಾಂಡಿಲಕರ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net