ಗೋಕಾಕನಲ್ಲಿ ಹಮ್ಮಿಕೊಂಡಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ 112ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಬಾಳೇಶ ಕೀರಪ್ಪನವರ ಮಾತನಾಡಿದರು. ಭಾರತಿ ಮದಭಾವಿ, ಮಹಾಂತೇಶ ತಾವಂಶಿ, ಚಂದ್ರಶೇಖರ ಅಕ್ಕಿ ಇದ್ದರು.
Published on:
Copied
Follow Us
ಗೋಕಾಕ: ನಾವೆಲ್ಲರೂ ಕನ್ನಡ ನಾಡು, ನುಡಿ, ಸಂಸ್ಕೃತಿ ಗೌರವಿಸಬೇಕು ಎಂದು ಗೋಸಬಾಳಿನ ಸರ್ಕಾರಿ ಶಾಲೆಯ ಶಿಕ್ಷಕ ಬಾಳೇಶ ಕೀರಪ್ಪನವರ ಹೇಳಿದರು.
ನಗರದ ಬಸವ ಮಂದಿರದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಗೋಕಾಕ ತಾಲೂಕು ಘಟಕ ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ 112ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಇಂದಿನ ಯುವ ಪೀಳಿಗೆಯಲ್ಲಿ ಕನ್ನಡಾಭಿಮಾನ ಬೆಳೆಸಬೇಕಿದೆ.
ನಾವೆಲ್ಲರೂ ಒಗ್ಗಟ್ಟಾಗಿ ಕನ್ನಡ ನಾಡಿನ ಸಂಸ್ಕೃತಿ ಹಾಗೂ ಭಾಷೆ ಶ್ರೀಮಂತಗೊಳಿಸೋಣ ಎಂದರು. ವೇದಿಕೆಯಲ್ಲಿ ಕಸಾಪ ತಾಲೂಕು ಅಧ್ಯಕ್ಷೆ ಭಾರತಿ ಮದಭಾವಿ, ನಿಕಟಪೂರ್ವ ಅಧ್ಯಕ್ಷ ಮಹಾಂತೇಶ ತಾವಂಶಿ, ಸಾಹಿತಿ ಚಂದ್ರಶೇಖರ ಅಕ್ಕಿ ಇತರರಿದ್ದರು.