ಮುರಗೋಡ: ಸೊಯಾಬೀನ್ ಬೆಳೆಯಲ್ಲಿ ಬರುವ ರೋಗ ಮತ್ತು ಕೀಟಗಳ ಸಮಗ್ರ ಬೆಳೆ ನಿರ್ವಹಣೆ ಬಗ್ಗೆ ರೈತರು ಮಾಹಿತಿ ಹೊಂದಿರಬೇಕು ಎಂದು ಕೆವಿಕೆ ಸಸ್ಯ ಸಂರಕ್ಷಣಾ ವಿಜ್ಞಾನಿ ಡಾ.ಎಸ್.ಎಸ್.ಹಿರೇಮಠ ಹೇಳಿದರು.
ಮರಕುಂಬಿ ಗ್ರಾಮದಲ್ಲಿ ಕೃಷಿ ಇಲಾಖೆ, ಕೆವಿಕೆ ಆಶ್ರಯದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಕಷಿ ಅಧಿಕಾರಿ ಎಂ.ಎ.ಅಮಠೆ, ಪ್ರಗತಿ ಪರ ರೈತರಾದ ರವಿ ಕುರಬೆಟ್ಟ, ಬಳಿಕ ರೈತರು, ವಿಜ್ಞಾನಿಗಳು ಸೋಯಾಬೀನ್ ಬೆಳೆದ ಜಮೀನುಗಳಿಗೆ ತೆರಳಿ ರೋಗ ಮತ್ತು ಕೀಟಗಳ ಪ್ರಾಯೋಗಿಕ ಗುರುತಿಸುವ ಕುರಿತು ವಿವರಿಸಿದರು.