ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಮೂಡಲಗಿ ತಾಲ್ಲೂಕಿನ 25 ಗ್ರಾಮಗಳಲ್ಲಿ ಬೆಳೆ ಹಾನಿ ಸಮೀಕ್ಷೆ ನಡೆಸುವ ಸಂದರ್ಭದಲ್ಲಿ ಅಧಿಕಾರಿಗಳು ನಿಯಮಗಳನ್ನು ಗಾಳಿಗೆ ತೂರಿ 368 ಅನರ್ಹ ವ್ಯಕ್ತಿಗಳ ಖಾತೆಗೆ 1,13,00,759ಪರಿಹಾರದ ಹಣ ಜಮೆಯಾಗಿದೆ. ಆದರೆ, ನಿಜವಾದ ಸಂಕಷ್ಟದಲ್ಲಿರುವ ನೂರಾರು ಅರ್ಹ ರೈತರು ಇಂದಿಗೂ ಪರಿಹಾರದಿಂದ ವಂಚಿತರಾಗಿದ್ದಾರೆ.