ಡಿಜಿಪಿ ಅಲೋಕ್‌ಕುಮಾರ ಬೈಲಹೊಂಗಲದಲ್ಲಿ ಮಾಜಿ ಸಚಿವ ಶಿವಾನಂದ ಕೌಜಲಗಿ ಅವರ ನಿವಾಸಕ್ಕೆ ಭೇಟಿ ನೀಡಿ ಯೋಗಕ್ಷೇಮ ವಿಚಾರಿಸಿದರು. ಕುತುಬುದ್ದೀನ್ ಮುಲ್ಲಾ, ಉಮೇಶ ಬೊಳೆತ್ತಿನ ಇತರರಿದ್ದರು.
ಇಲ್ಲಿನ ಉಪ ಕಾರಾಗೃಹಕ್ಕೆ ಮಂಗಳವಾರ ಭೇಟಿ ನೀಡಿ ಕಾರಾಗೃಹದ ವ್ಯವಸ್ಥೆ, ಕೈದಿಗಳ ಸೌಲಭ್ಯ ಹಾಗೂ ಭದ್ರತಾ ಕ್ರಮಗಳ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು.
ಬಳಿಕ ಮಾತನಾಡಿದ ಅಲೋಕ್‌ಕುಮಾರ, ಉಪ ಕಾರಾಗೃಹದ ಸ್ಥಿತಿಗತಿ ಪರಿಶೀಲಿಸಲಾಗಿದೆ. ಈ ಕಾರಾಗೃಹದಲ್ಲಿ ಒಟ್ಟು 48 ಬಂಧಿಗಳನ್ನು ದಾಖಲು ಮಾಡುವ ಸಾಮರ್ಥ್ಯವಿದೆ. ಪ್ರಸ್ತುತ 21 ಬಂಧಿಗಳು ದಾಖಲಾಗಿದ್ದಾರೆ. ಬೆಳಗಾವಿ ಹಾಗೂ ಗೋಕಾಕದಿಂದ ಬಂಧಿಗಳನ್ನು ವರ್ಗಾವಣೆ ಮಾಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.
ಒಂದು ಕಾಲದಲ್ಲಿ ರಾಜ್ಯದಲ್ಲೇ ಬೈಲಹೊಂಗಲದಲ್ಲಿ ಅಪರಾಧ ಪ್ರಕರಣಗಳ ಪ್ರಮಾಣ ಹೆಚ್ಚಿತ್ತು. ಆದರೆ, ಇತ್ತೀಚಿನ ದಿನಗಳಲ್ಲಿ ಅಪರಾಧ ಪ್ರಕರಣ ಗಣನೀಯವಾಗಿ ಇಳಿಕೆಯಾಗಿರುವುದು ಉತ್ತಮ ಬೆಳವಣಿಗೆಯಾಗಿದೆ. ಇದು ಪೊಲೀಸರು ಹಾಗೂ ಸಾರ್ವಜನಿಕರ ಸಹಕಾರದಿಂದ ಸಾಧ್ಯವಾಗಿದೆ. ನಾನು ಐಪಿಎಸ್ ಉತ್ತೀರ್ಣವಾಗಿ ಮೊದಲ ಸೇವೆ ಆರಂಭಿಸಿದ್ದು ಕಿತ್ತೂರು ರಾಣಿ ಚನ್ನಮ್ಮ, ಸಂಗೊಳ್ಳಿ ರಾಯಣ್ಣ ಸೇರಿ ವಿವಿಧ ಶೂರರು ಜನಿಸಿದ ನಾಡಿನಲ್ಲಿ ಎಂಬುದು ಹೆಮ್ಮೆ ಎಂದರು. ಕಾರಾಗೃಹ ಸಿಬ್ಬಂದಿಗೆ ಪ್ರಶಂಸಣಾ ಪತ್ರ ವಿತರಿಸಲಾಯಿತು.
ಕಾರಾಗೃಹಗಳ ಉಪ ಮಹಾನಿರೀಕ್ಷಕ (ಉತ್ತರ ವಲಯ) ಟಿ.ಪಿ.ಶೇಷಾ, ಅಧೀಕ್ಷಕರಾದ ಯಲ್ಲಪ್ಪ ನಾಯ್ಕ, ಸಹಾಯಕ ಜೈಲರ್ ಜಗದೀಶ