ಚಿಕ್ಕೋಡಿ: ಒಂದೆಡೆ ಮಹಾರಾಷ್ಟ್ರ ಸರ್ಕಾರ ಕೃಷ್ಣಾ ನದಿಗೆ ಸರಿಯಾಗಿ ನೀರು ಬಿಡದೆ ಕರ್ನಾಟಕದಲ್ಲಿ ನೀರಿನ ಅಭಾವಕ್ಕೆ ಕಾರಣವಾಗಿದ್ದರೆ, ಇನ್ನೊಂದೆಡೆ ಕೃಷ್ಣಾ ನದಿಯಿಂದ ಇಂಚಲಕರಂಜಿ ನಗರಕ್ಕೆ ನೀರು ಸರಬರಾಜು ಯೋಜನೆ ರೂಪಿಸಿದ್ದು, ಗಡಿ ಭಾಗದ ಜನರಲ್ಲಿ ಆತಂಕ ಮೂಡಿಸಿದೆ.
ಕರ್ನಾಟಕ, ಮಹಾರಾಷ್ಟ್ರ ಮತ್ತು ವಿಭಜಿತ ಆಂಧ್ರಪ್ರದೇಶದಲ್ಲಿ ಹರಿಯುವ ಕೃಷ್ಣಾ ಅಂತಾರಾಜ್ಯ ನದಿಯಾಗಿದೆ. ಕೃಷ್ಣಾ ನದಿ ನೀರು ಹಂಚಿಕೆ ಮತ್ತು ಆಲಮಟ್ಟಿ ಜಲಾಶಯ ಎತ್ತರ ಹೆಚ್ಚಳ ವಿಷಯದಲ್ಲೂ ಕ್ಯಾತೆ ತೆಗೆದಿರುವ ಮಹಾರಾಷ್ಟ್ರ, ಈಗ ಕರ್ನಾಟಕದ ಪಾಲಿನ ನದಿ ನೀರನ್ನು ಅಕ್ರಮವಾಗಿ ಬಳಸಿಕೊಳ್ಳಲು ಮುಂದಾಗಿದೆ.
ಇಂಚಲಕರಂಜಿ ನಗರದ ಪಕ್ಕದಲ್ಲೇ ದೂಧಗಂಗಾ ನದಿ ಹರಿಯುತ್ತಿದ್ದರೂ ಅಲ್ಲಿಂದ 30 ಕಿ.ಮೀ. ದೂರದ ದಾನವಾಡ ಬಳಿ ಜಾಕವೆಲ್ ನಿರ್ಮಿಸಿ 4 ಟಿಎಂಸಿ ನೀರು ಕೊಂಡೊಯ್ಯುವ ರಾಧಾಕೃಷ್ಣ ನೀರಾವರಿ ಯೋಜನೆಯನ್ನು ಈಗಾಗಲೇ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಡ್ನವೀಸ್ ೋಷಿಸಿದ್ದಾರೆ.
ಸಮಸ್ಯೆ ಏನು?: ಮಹಾರಾಷ್ಟ್ರದ ದಾನವಾಡದಿಂದ 1 ಕಿ.ಮೀ. ದೂರದಲ್ಲಿರುವ ಚಿಕ್ಕೋಡಿ ತಾಲೂಕು ಕಲ್ಲೋಳ ಗ್ರಾಮದ ಬಳಿ ಕೃಷ್ಣಾ ನದಿಗೆ ಅಡ್ಡಲಾಗಿ ಕರ್ನಾಟಕ ಬ್ಯಾರೇಜ್ ನಿರ್ಮಿಸಿದೆ. ಈ ಬ್ಯಾರೇಜ್‌ನಲ್ಲಿ 1.5 ಟಿಎಂಸಿ ನೀರು ಸಂಗ್ರವಾಗುತ್ತದೆ.
ಈ ನೀರು ಚಿಕ್ಕೋಡಿ ತಾಲೂಕಿನ ನೂರಾರು ಹೆಕ್ಟೇರ್ ಕೃಷಿಭೂಮಿ ಹಾಗೂ ಚಿಕ್ಕೋಡಿ ಪಟ್ಟಣ ಸೇರಿದಂತೆ 10ಕ್ಕೂ ಹೆಚ್ಚು ಹಳ್ಳಿಗಳಿಗೆ ಜಲಮೂಲವಾಗಿದೆ.
ಈ ಬ್ಯಾರೇಜ್‌ನ ಹಿನ್ನೀರು ವ್ಯಾಪಿಸಿರುವ ಮಹಾರಾಷ್ಟ್ರದ ದಾನವಾಡದ ಬಳಿ ಕೃಷ್ಣಾ ಹಾಗೂ ದೂಧಗಂಗಾ ನದಿಗಳು ಸಂಗಮವಾಗುತ್ತವೆ. ಈ ಎರಡೂ ನದಿಗಳ ನೀರಿನ ಲಾಭ ಪಡೆಯಲು ದಾನವಾಡ ಬಳಿ ಜಾಕವೆಲ್ ನಿರ್ಮಿಸಿ ನೀರು ಸಾಗಿಸುವ ಉದ್ದೇಶ ಮಹಾರಾಷ್ಟ್ರ ಸರ್ಕಾರದ್ದಾಗಿದೆ. ಈ ಯೋಜನೆ ಅನುಷ್ಠಾನಗೊಂಡರೆ ಕಲ್ಲೋಳ ಬ್ಯಾರೇಜ್‌ನಲ್ಲಿ ನೀರಿನ ಕೊರತೆ ಉಂಟಾಗಲಿದೆ.
ಜನಪ್ರತಿನಿಧಿಗಳ ಮೌನ: ಮಹಾರಾಷ್ಟ್ರ ಸರ್ಕಾರ ದೊಡ್ಡ ಮಟ್ಟದ ನೀರಾವರಿ ಯೋಜನೆಗೆ ಚಾಲನೆ ನೀಡಿದ್ದರೂ ಈ ಕುರಿತು ಕರ್ನಾಟಕ ಸರ್ಕಾರಕ್ಕೆ ಮಾಹಿತಿ ನೀಡಿಲ್ಲ. ಅಂತಾರಾಜ್ಯ ನೀರು ಹಂಚಿಕೆ ನಿಯಮ ಮೀರಿ ಈ ಯೋಜನೆ ಜಾರಿಗೊಳಿಸುತ್ತಿದೆ. ಈ ಕುರಿತು ಜನಪ್ರತಿನಿಧಿಗಳೂ ಚಕಾರವೆತ್ತುತ್ತಿಲ್ಲ. ಕರ್ನಾಟಕ ಸರ್ಕಾರ ಕೂಡಲೇ ಗಮನಹರಿಸಿ ಯೋಜನೆಗೆ ತಡೆಯೊಡ್ಡಬೇಕು ಹಾಗೂ ಮಹಾರಾಷ್ಟ್ರದಿಂದ ಹೆಚ್ಚುವರಿ ನೀರು ಬಿಡಿಸಿಕೊಳ್ಳುವ ಶಾಶ್ವತ ಒಡಂಬಡಿಕೆ ಮಾಡಿಕೊಳ್ಳಬೇಕೆಂಬ ಆಗ್ರಹ ಈ ಭಾಗದ ಜನರದ್ದಾಗಿದೆ.
"
ಮಹಾರಾಷ್ಟ್ರ ಸರ್ಕಾರ ರಾಧಾಕೃಷ್ಣ ನೀರು ಸರಬರಾಜು ಯೋಜನೆ ಘೋಷಿಸಿದೆ. ಇದಕ್ಕೆ ಕೃಷ್ಣಾ ನದಿ ಕೇಂದ್ರ ನೀರು ನಿರ್ವಹಣಾ ಮಂಡಳಿ ಪರವಾನಗಿ ಪಡೆಯಬೇಕು. ಯೋಜನೆಯ ಸಾಧಕ-ಬಾಧಕ ನೋಡಿಕೊಂಡು ಸಿಡಬ್ಲುೃಸಿ ಕಮಿಟಿ ಯೋಜನೆಗೆ ಅನುಮತಿ ನೀಡಲಿದೆ.