ಪಾಲಿಕೆಯ 92.32. ಲಕ್ಷ ರೂ. ಉಳಿತಾಯ ಬಜೆಟ್ ಮಂಡನೆ

 ಬೆಳಗಾವಿ ನಗರದ ಪಾಲಿಕೆ ಪರಿಷತ್ ಸಭಾಂಗಣದಲ್ಲಿ ಬುಧವಾರ ಪ್ರಸಕ್ತ ಸಾಲಿನ ಬಜೆಟ್ ಪ್ರತಿಯನ್ನು ಮೇಯರ್ ಪವಾರ್, ಉಪಮೇಯರ್ ವಾಣಿ ಜೋಶಿ,  ಅಧ್ಯಕ್ಷೆ ರೇಖಾ ಹೂಗಾರ, ಆಯುಕ್ತ ಕಾರ್ತಿಕ್.ಎಂ. ಪ್ರದರ್ಶಿಸಿದರು.
ಬೆಳಗಾವಿ ನಗರದ ಪಾಲಿಕೆ ಪರಿಷತ್ ಸಭಾಂಗಣದಲ್ಲಿ ಬುಧವಾರ ಪ್ರಸಕ್ತ ಸಾಲಿನ ಬಜೆಟ್ ಪ್ರತಿಯನ್ನು ಮೇಯರ್ ಪವಾರ್, ಉಪಮೇಯರ್ ವಾಣಿ ಜೋಶಿ, ಅಧ್ಯಕ್ಷೆ ರೇಖಾ ಹೂಗಾರ, ಆಯುಕ್ತ ಕಾರ್ತಿಕ್.ಎಂ. ಪ್ರದರ್ಶಿಸಿದರು.
Published on
ಬೆಳಗಾವಿ :ಇಲ್ಲಿನ ಮಹಾನಗರ ಪಾಲಿಕೆಯು 2026-27ನೇ ಸಾಲಿನಲ್ಲಿ 92.32. ಲಕ್ಷ ರೂ. ಉಳಿತಾಯ ಬಜೆಟ್ ಮಂಡಿಸಿದೆ. ಒಟ್ಟು 442.54 ಕೋಟಿ ರೂ. ಆದಾಯ ನಿರೀಕ್ಷಿಸಿದ್ದು, ಅಭಿವೃದ್ಧಿಗಾಗಿ 441.62 ಕೋಟಿ ರೂ. ವೆಚ್ಚ ಮಾಡಲಿದೆ.
ಮಹಾನಗರ ಪಾಲಿಕೆ ಸಭಾಂಗಣದಲ್ಲಿ ಬುಧವಾರ ಮೇಯರ್ ಮಂಗೇಶ ಪವಾರ್ ಕರೆದಿದ್ದ ವಿಶೇಷ ಪರಿಷತ್ ಸಭೆಯಲ್ಲಿ ವಾರ್ಷಿಕ ಬಜೆಟ್ ಮಂಡಿಸಿದ ಸ್ಥಾಯಿ ಸಮಿತಿ ಅಧ್ಯಕ್ಷೆ ರೇಖಾ ಹೂಗಾರ ವಿವಿಧ ತೆರಿಗೆ ಆದಾಯ. 15 ಮತ್ತು 16ನೇ ಹಣಕಾಸು ಆಯೋಗ, ಕೇಂದ್ರ, ರಾಜ್ಯ ಸರ್ಕಾರದ ವಿವಿಧ ಯೋಜನೆಯಡಿ ವಿಶೇಷ ಅನುದಾನ ನಿರೀಕ್ಷೆ ಆಧಾರದ ಮೇಲೆ ಪ್ರಸಕ್ತ ಸಾಲಿನ ಅಂದಾಜು ಆಯವ್ಯಯ ಮಂಡಿಸಿದರು.
ಕೇಂದ್ರದ ಸಿಟೀಸ್-2 ಯೋಜನೆಗೆ 5 ಕೋಟಿ ರೂ., ಎಸ್‌ಸಿ,ಎಸ್‌ಟಿ ವರ್ಗ, ಮಹಿಳೆಯರು, ಪೌರ ಕಾರ್ಮಿಕರಿಗೆ, ಪಾಲಿಕೆ ಸಿಬ್ಬಂದಿಗೆ ಆರೋಗ್ಯ ವಿಮೆ, ಉಪಹಾರ ವ್ಯವಸ್ಥೆ, ಸ್ವಚ್ಛ ನಗರ, ವೈಜ್ಞಾನಿಕ ಘನತ್ಯಾಜ್ಯ ವಿಲೇವಾರಿ ಹೀಗೆ ವಿವಿಧ ಯೋಜನೆ ಕುರಿತು ಆಯವ್ಯಯದಲ್ಲಿ ಘೋಷಿಸಿದ್ದಾರೆ. ಸರ್ಕಾರಿ ನಿಯಮಾವಳಿಯ ಪ್ರಕಾರ ಪರಿಸರ ಸ್ನೇಹಿ ಕಟ್ಟಡಗಳಿಗೆ, ಆಸ್ತಿ ತೆರಿಗೆಯಲ್ಲಿ ವಿನಾಯಿತಿ ಹಾಗೂ ಸ್ವಾತಂತ್ರ್ಯ ಯೋಧರಿಗೆ ಶೇ.10 ರಷ್ಟು ರಿಯಾಯಿತಿ ಈ ವರ್ಷವೂ ಮುಂದುವರಿಯಲಿದೆ.
ಆಯವ್ಯಯದಲ್ಲಿ ಅಳವಡಿಸಿದ ಎಲ್ಲ ಕಾರ್ಯಕ್ರಮಗಳು ನಿಗಧಿತ ವೇಳೆಯಲ್ಲಿ ಅನುಷ್ಠಾನಗೊಳಿಸಲಾಗುವುದು. 2024-25 ನೇ ಸಾಲಿನಲ್ಲಿ ಬೆಳಗಾವಿ ನಗರದ ಸಮಗ್ರ ಮೂಲಭೂತ ಸೌಕರ್ಯಗಳನ್ನು ಹಾಗೂ ನಾಗರೀಕರ ನಿರೀಕ್ಷೆಯನ್ನು ತಲುಪಲು ಮತ್ತು ಅನುಷ್ಠಾನಗೊಳಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುವುದು ಎಂದು ತೆರಿಗೆ, ಹಣಕಾಸು ಮತ್ತು ಅಪೀಲುಗಳ ಸ್ಥಾಯಿ ಸಮಿತಿ ಅಧ್ಯಕ್ಷೆ ಅಧ್ಯಕ್ಷೆ ರೇಖಾ ಹೂಗಾರ ಭರವಸೆ ನೀಡಿದರು.
ಮೇಯರ್ ಮಂಗೇಶ ಪವಾರ್, ಉಪಮೇಯರ್ ವಾಣಿ ಜೋಶಿ, ಆಯುಕ್ತ ಕಾರ್ತಿಕ್ ಎಂ., ಆಡಳಿತ ಪಕ್ಷದ ನಾಯಕ ಹಣಮಂತ ಕೊಂಗಾಲಿ, ಉಪ ಆಯುಕ್ತರಾದ ಉದಯಕುಮಾರ ತಳವಾರ, ಡಾ.ಸಿದ್ದಪ್ಪ ಹುಲ್ಲೋಳಿ ಇತರರಿದ್ದರು.
ಬಾಕ್ಸ್
ಪಾಲಿಕೆಗೆ ವಿವಿಧ ಮೂಲಗಳಿಂದ ಆದಾಯ ನಿರೀಕ್ಷೆ
*ಪಾಲಿಕೆ ವ್ಯಾಪ್ತಿಯಲ್ಲಿ ವಿವಿಧ ಆಸ್ತಿಗಳಿಂದ ವಾರ್ಷಿಕ 85 ಕೋಟಿ ರೂ. ತೆರಿಗೆ ಆದಾಯ ಗುರಿ.
*ಕಟ್ಟಡ ಪರವಾನಿಗೆ, ಅಭಿವೃದ್ಧಿ, ಸುಧಾರಣೆ ಶುಲ್ಕದಿಂದ 9.89 ಕೋಟಿ ರೂ.
*ಅವಶೇಷ ನಿರ್ಮೂಲನೆಗಳಿಂದ 1.69 ಕೋಟಿ ರೂ.
* ಪಾಲಿಕೆ ಖಾಲಿ ಪ್ರದೇಶಗಳ ಮಾರಾಟದಿಂದ 11 ಕೋಟಿ ರೂ.
* ಎಸ್‌ಎಫ್‌ಸಿ ಮುಕ್ತ ನಿಧಿ ಅನುದಾನದಡಿ 10 ಕೋಟಿ ರೂ. ನಿರೀಕ್ಷೆ
* ಎಸ್‌ಎಫ್‌ಸಿ ವಿದ್ಯುತ್‌ಶಕ್ತಿ ಅನುದಾನ 62.64 ಕೋಟಿ ರೂ. ಅನುದಾನ ನಿರೀಕ್ಷೆ
*16ನೇ ಹಣಕಾಸು ಆಯೋಗ ಅನುದಾನ 21 ಕೋಟಿ ರೂ. ನಿರೀಕ್ಷೆ
*ಪಾಲಿಕೆ ವ್ಯಾಪ್ತಿಯಲ್ಲಿ ರಸ್ತೆ ಅಗೆತದಿಂದ 1.50ಕೋಟಿ ರೂ.
*ಘನತ್ಯಾಜ್ಯ ವಸ್ತು ನಿರ್ವಹಣೆಯಿಂದ ಸಂಗ್ರಹಿಸುವ 9.75 ಕೋಟಿ ರೂ.
*ಸ್ಥಿರಾಸ್ತಿಗಳ ನೋಂದಣಿಯಿಂದ ಅದಿಭಾರ ಶುಲ್ಕ ದಿಂದ 1.30 ಕೋಟಿ ರೂ.
*ಆಸ್ತಿಗಳ ವರ್ಗಾವಣೆ ಫೀ, ದಂಡಗಳಿಂದ ಅಂದಾಜು ಸ್ವೀಕೃತಿದಿಂದ 7.55 ಕೋಟಿ ರೂ.
*ಕೈಗಾರಿಕೆ ಉದ್ದಿಮೆ ಪರವಾನಿಗೆಯಿಂದ 4.89 ಕೋಟಿ ರೂ.
* ಜಾಹಿರಾತು, ಫಲಕಗಳ ಮೇಲೆ ತೆರಿಗೆದಿಂದ 2 ಕೋಟಿ ರೂ.
*ಭೂ ಬಾಡಿಗೆದಿಂದ 2.65 ಕೋಟಿ ರೂ.
* ಬೀದಿ ಬದಿ ವ್ಯಾಪಾರಸ್ಥರಿಂದ 1.36 ಕೋಟಿ ರೂ.
* ವಾಹನಗಳ ಪಾರ್ಕಿಂಗ್‌ದಿಂದ 24.75 ಲಕ್ಷ ರೂ.
...........................
ಬಾಕ್ಸ್
ವಾರ್ಷಿಕ ವಿವಿಧ ಉದ್ದೇಶಕ್ಕೆ ಬಳಕೆ ಮಾಡುವ ವೆಚ್ಚಗಳ ವಿವರ
* ಪೌರಕಾರ್ಮಿಕರಿಗೆ ಪ್ರತಿದಿನ ಉಪಹಾರ ಭತ್ಯೆ 35 ರೂ. ರಂತೆ ವಾರ್ಷಿಕ 2 ಕೋಟಿ ರೂ.
*ಬೆಳಗಾವಿಯನ್ನು ಸ್ವಚ್ಚ ನಗರವನ್ನಾಗಿಡಲು ಹೊರಗುತ್ತಿಗೆ ಸ್ವಚ್ಚತಾ ವೆಚ್ಚಕ್ಕಾಗಿ 38.25ಕೋಟಿ ರೂ.
*ನೇರ ನೇಮಕಾತಿ ಹೊಂದಿದ ಪೌರಕಾರ್ಮಿಕರ ವೇತನಕ್ಕಾಗಿ 11 ಕೋಟಿ ರೂ.ಕಾಯ್ದಿರಿಸಲಾಗಿದೆ.
*ವೈಜ್ಞಾನಿಕ ಘನತ್ಯಾಜ್ಯ ವಿಲೇವಾರಿಗೆ 4 ಕೋಟಿ ರೂ.
*ಬೀದಿ ದೀಪಗಳ ನಿರ್ವಹಣೆಗಾಗಿ 50 ಲಕ್ಷ ರೂ.
*ರಸ್ತೆ, ಚರಂಡಿ, ಪಾದಾಚಾರಿ. ಮಳೆ ನೀರು ನಿರ್ವಹಣೆ, ರಸ್ತೆಗಳ ಮಾರ್ಗಸೂಚಿ ಅಳವಡಿಸಲು 6.95ಕೋಟಿ ರೂ.
*ಬೀದಿ ನಾಯಿಗಳ ನಿರ್ವಹಣೆಗಾಗಿ ಶೆಡ್ ನಿರ್ಮಾಣ ಹಾಗೂ ಶಸ್ತ್ರ ಚಿಕಿತ್ಸೆಗಾಗಿ 2.10 ಕೋಟಿ ರೂ.
* ಕ್ರೀಡೆಗಳಿಗಾಗಿ 14.43 ಲಕ್ಷ ರೂ.
*ಹೊಸದಾಗಿ ಯಂತ್ರೋಪಕರಣಗಳ ಖರೀದಿಗೆ 1.45 ಕೋಟಿ ರೂ.
* ಕುಡಿಯುವ ನೀರು ಸರಬರಾಜು, ತೆರೆದ ಬಾವಿ ಅಭಿವೃದ್ಧಿಗೆ 25ಲಕ್ಷ ರೂ.
* ಉದ್ಯಾನವ ಅಭಿವೃದ್ಧಿಗೆ 1.35 ಕೋಟಿ ರೂ.
................................
ಬಾಕ್ಸ್
ವಾರ್ಡ್ ಅಭಿವೃದ್ಧಿಗೆ 27 ಕೋಟಿ ರೂ. ವೆಚ್ಚ
ಪಾಲಿಕೆಯ 58 ವಾರ್ಡ್ ವ್ಯಾಪ್ತಿಯಲ್ಲಿ ಸಿ.ಸಿ.ರಸ್ತೆ, ಚರಂಡಿ ನಿರ್ಮಾಣ ಹೀಗೆ ವಿವಿಧ ಮೂಲಭೂತ ಸೌಕರ್ಯಕ್ಕಾಗಿ 27 ಕೋಟಿ ರೂ. ಅನುದಾನ ಮೀಸಲಿಡಲಾಗಿದೆ. ಪಾಲಿಕೆ ಆಸ್ತಿ ಮತ್ತು ಖಾಲಿ ಪ್ರದೇಶ ಸಂರಕ್ಷಿಸಲು 2 ಕೋಟಿ ರೂ., ಒಳಚರಂಡಿ ದುರಸ್ತಿ ಮತ್ತು ಹೊಸ ಒಳಚರಂಡಿ ನಿರ್ಮಾಣ ಹಾಗೂ ಸಾರ್ವಜನಿಕ ಶೌಚಗೃಹ ನಿರ್ಮಾಣಕ್ಕಾಗಿ 2 ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ.
..........
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net