ಬೆಳಗಾವಿಯ ಕೆಎಲ್‌ಇ ಸಂಸ್ಥೆಯ ಡಾ.ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದಲ್ಲಿ ಈಚೆಗೆ ಜರುಗಿದ ಪರಿಸರ ಜಾಗೃತಿ ಕಾರ್ಯಕ್ರಮದಲ್ಲಿ ಡಾ.ಕರ್ನಲ್ ಎಂ.ದಯಾನಂದ ಸಸಿಗೆ ನೀರೆರೆದರು. ಡಾ.ಆರೀಫ್ ಮಾಲ್ದಾರ, ಡಾ.ಪ್ರೀತಿ ಮಾಸ್ತೆ, ಡಾ.ಬಸವರಾಜ ಬಿಜ್ಜರಗಿ, ಪ್ರಶಾಂತ ದೇಸಾಯಿ ಇತರರಿದ್ದರು.
ಬೆಳಗಾವಿ : ತಂತ್ರಜ್ಞಾನದ ಬಳಕೆಯಿಂದಲೂ ಪರಿಸರಕ್ಕೆ ಹೆಚ್ಚಿನ ಕೊಡುಗೆ ನೀಡಬಹುದು. ಮುಖ್ಯವಾಗಿ ಆಸ್ಪತ್ರೆ ಹಾಗೂ ಇನ್ನಿತರ ಸಂಸ್ಥೆಗಳು ಕಾಗದ ರಹಿತ ಆಡಳಿತಕ್ಕೆ ಹೆಚ್ಚಿನ ಉತ್ತೇಜನ ನೀಡಬೇಕು. ಸಾರ್ವಜನಿಕ ಸಾರಿಗೆಯನ್ನು ಉಪಯೋಗಿಸಬೇಕು. ಚಿಕ್ಕ ಚಿಕ್ಕ ಅರಣ್ಯ ಹಾಗೂ ಪ್ರತಿಯೊಬ್ಬರೂ ತಾಯಿಯ ಹೆಸರಿನಲ್ಲಿ ಸಸಿ ನೆಟ್ಟು ಪೋಷಿಸಬೇಕು ಎಂದು ಕೆಎಲ್‌ಇ ಸಂಸ್ಥೆಯ ಡಾ.ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದ ವೈದ್ಯಕೀಯ ನಿರ್ದೇಶಕ ಡಾ.ಕರ್ನಲ್ ಎಂ.ದಯಾನಂದ ಹೇಳಿದರು.
ವಿಶ್ವ ಪರಿಸರ ದಿನದ ಅಂಗವಾಗಿ ಕೆಎಲ್‌ಇ ಸಂಸ್ಥೆಯ ಡಾ.ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದಲ್ಲಿ ಈಚೆಗೆ ಏರ್ಪಡಿಸಿದ್ದ ಪರಿಸರ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಳೆದ 23 ವರ್ಷಗಳಿಂದ ಆಸ್ಪತ್ರೆಯಲ್ಲಿ ಕಸವನ್ನು ಬೇರ್ಪಡಿಸಿ ವಿಲೆವಾರಿ ಮಾಡಲಾಗುತ್ತಿದೆ. ಅಪಾಯಕಾರಿ ವಸ್ತುಗಳನ್ನು ಸೂಕ್ತ ರೀತಿಯಲ್ಲಿ ವಿಲೆವಾರಿ ಮಾಡಿ, ಪರಿಸರಕ್ಕೆ ಹಾನಿಯಾಗದಂತೆ ಎಚ್ಚರಿಕೆ ವಹಿಸಲಾಗುತ್ತಿದೆ. ಪ್ರತಿಯೊಂದು ಸಂಸ್ಥೆಗಳು ಹಸಿರು ಕ್ಯಾಂಪಸ್ ಅಳವಡಿಸಿಕೊಂಡು ಪರಿಸಕ್ಕೆ ಅವಶ್ಯವಿರುವ ಕೊಡುಗೆಯನ್ನು ನೀಡಬೇಕು ಎಂದು ತಿಳಿಸಿದರು.
ಆಸ್ಪತ್ರೆಯ ಕ್ಲಿನಿಕಲ್ ಡೈರೆಕ್ಟರ ಭಾರತದಲ್ಲಿಯೇ ಅತ್ಯಂತ ಒಳ್ಳೆಯ ಕ್ಯಾಂಪಸ್ ಎಂಬ ಬಿರದು ಪಡೆದುಕೊಂಡಿರುವ ಆಸ್ಪತ್ರೆಯು ಪರಿಸರಕ್ಕೆ ಅನುಕೂಲವಾಗುವ ಅನೇಕ ಯೋಜನೆಗಳನ್ನು ರೂಪಿಸಿದೆ. ಕ್ಯಾನ್ಸರಕಾರಕ ಹಾಗೂ ಮರುಬಳಕೆಯಾಗದ ಪ್ಲಾಸ್ಟಿಕ ತ್ಯಜಿಸಬೇಕು. ಪರಿಸರ ರಕ್ಷಣೆ ಹಾಗೂ ಅದನ್ನು ಪೋಷಿಸುವ ನಿಟ್ಟಿನಲ್ಲಿ ಸ್ವಯಂ ಜಾಗೃತರಾಗಲು ಮೊದಲ ಆದ್ಯತೆ ನೀಡಿ, ನಂತರ ಇನ್ನೊಬ್ಬರನ್ನು ಜಾಗೃತಗೊಳಿಸಬೇಕು ಎಂದು ಸಲಹೆ ನೀಡಿದರು.
ಕೆಎಲ್‌ಇ ಶತಮಾನೋತ್ಸವ ಚಾರಿಟಬಲ್ ಆಸ್ಪತ್ರೆಯ ವೈದ್ಯಕೀಯ ನಿರೀಕ್ಷಕ ಡಾ.ಆರೀಫ್ ಮಾಲ್ದಾರ, ಮೈಕ್ರೊಬಯಾಲಾಜಿಸ್ಟ ಡಾ. ಪ್ರೀತಿ ಮಾಸ್ತೆ, ಡಾ.ಬಸವರಾಜ ಬಿಜ್ಜರಗಿ, ಪ್ರಶಾಂತ ದೇಸಾಯಿ ಇತರರಿದ್ದರು. ಡಾ.ದೀಪಕ ಕರನಮ್ ಸ್ವಾಗತಿಸಿದರು. ಡಾ.ವಿದ್ಯಾ ನಿರೂಪಿಸಿದರು. ಡಾ.ವೀಣಾ ವಂದಿಸಿದರು.