ಖಾನಾಪುರ ಪೊಲೀಸರ ನಡೆಗೆ ಖಂಡನೆ

ಖಾನಾಪುರದಲ್ಲಿ ಗುರುವಾರ ಪೊಲೀಸ್ ಠಾಣೆ ಶಾಂತಿ ಸಭೆಯಲ್ಲಿ ಅಪರಾಧ ಹಿನ್ನೆಲೆವುಳ್ಳವರಿಗೆ ಮಣೆ ಹಾಕಿರುವುದನ್ನು ಖಂಡಿಸಿ ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟಿಸಿದರು.
ಖಾನಾಪುರದಲ್ಲಿ ಗುರುವಾರ ಪೊಲೀಸ್ ಠಾಣೆ ಶಾಂತಿ ಸಭೆಯಲ್ಲಿ ಅಪರಾಧ ಹಿನ್ನೆಲೆವುಳ್ಳವರಿಗೆ ಮಣೆ ಹಾಕಿರುವುದನ್ನು ಖಂಡಿಸಿ ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟಿಸಿದರು.
Published on
ಬೆಳಗಾವಿ : ಅಪರಾಧ ಚಟುವಟಿಕೆಗಳ ಹಿನ್ನೆಲೆವುಳ್ಳವರಿಗೆ ಖಾನಾಪುರ ಪೊಲೀಸ್ ಠಾಣೆಯಲ್ಲಿ ಈಚೆಗೆ ಜರುಗಿದ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಶಾಂತಿ ಸಭೆಯಲ್ಲಿ ಪ್ರಾತಿನಿಧ್ಯ ನೀಡಿರುವುದನ್ನು ಖಂಡಿಸಿ ಖಾನಾಪುರ ಪಟ್ಟಣದಲ್ಲಿ ಗುರುವಾರ ತಾಲೂಕು ಬ್ಲಾಕ್ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ತಹಸೀಲ್ದಾರ ಕಚೇರಿ ಎದುರು ಪ್ರತಿಭಟನೆ ನಡೆಸಿದ ಕಾರ್ಯಕರ್ತರು, ತಪ್ಪಿತಸ್ಥ ಪೊಲೀಸರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ತಹಸೀಲ್ದಾರಿಗೆ ಮನವಿ ಸಲ್ಲಿಸಿದರು.
ಸಮಾಜಕ್ಕೆ ಸಂಬಂಧಿಸಿದಂತೆ ಯಾವುದೇ ಒಂದು ಸಭೆಗಳಿದ್ದಾಗ, ಆಯಾ ಊರಿನ ಅಥವಾ ಸಮುದಾಯದ ಹಿರಿಯರನ್ನು ಆಹ್ವಾನಿಸುವ ಬಗ್ಗೆ ಪೊಲೀಸರು ಆಲೋಚಿಸಬೇಕಿತ್ತು. ಆದರೆ ಪ್ರಸ್ತುತ ತಾಲ್ಲೂಕಿನಲ್ಲಿ ರೌಡಿ ಶೀಟರ್‌ಗಳು ಮತ್ತು ಪೊಲೀಸರ ನಡುವೆ ಅಸಭ್ಯ ಮೈತ್ರಿ ಕಂಡು ಬರುತ್ತಿದ್ದು, ಕನಿಷ್ಠ ಪೊಲೀಸ್ ಆಡಳಿತಕ್ಕೆ ತಾವು ಯಾರನ್ನು ಗೌರವಿಸುತ್ತಿದ್ದೇವೆ ಎಂಬುದು ತಿಳಿದಿರಬೇಕಿತ್ತು. ಪೊಲೀಸರ ನಡೆ ತಪ್ಪಾಗಿದ್ದು, ಈ ಬಗ್ಗೆ ಕಠಿಣ ಕ್ರಮವಾಗಬೇಕು ಎಂದು ಆಗ್ರಹಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಈಶ್ವರ ಘಾಡಿ, ಮಹಾಂತೇಶ ರಾವುತ, ಲಕ್ಷ್ಮಣ ಮದಾರ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net