ರಾಣಿ ಚನ್ನಮ್ಮ, ಭಗತ್ ಸಿಂಗ್, ಛತ್ರಪತಿ ಶಿವಾಜಿ ಮಹಾರಾಜ್ ಮತ್ತು ಕ್ಯಾಪ್ಟನ್ ವಿಕ್ರಮ್ ಬಾತ್ರಾರಂತಹ ವೀರರು, ಶ್ರೀಕೃಷ್ಣ, ರಾಮ ಮತ್ತು ಶಿವನಂತಹ ದೈವೀ ಶಕ್ತಿಗಳು, ಮಕ್ಕಳಿಗೆ ಸಂಬಂಧಗಳ ಮಹತ್ವ ತಿಳಿಸುವ ಉದ್ದೇಶದ ಮೌಲ್ಯಕ್ಕೆ ಅನುಗುಣವಾದ ಕವಿತೆಗಳು ನನ್ನ ಕೃತಿಯಲ್ಲಿವೆ. ನನ್ನ ಸುತ್ತಲಿನ ಪ್ರಪಂಚ, ಶಾಲೆ ಮತ್ತು ಬೆಳಗಾವಿಯ ಬಗ್ಗೆ ನನಗಿರುವ ಆಲೋಚನೆಗಳ ಪ್ರತಿಬಿಂಬವಾಗಿಯೂ ಅನೇಕ ಪಂದ್ಯಗಳಿವೆ. ಚಿಕ್ಕಂದಿನಿಂದ ನನ್ನ ತಾಯಿ ವೀರರ ಕುರಿತು ಕತೆಗಳನ್ನು ಹೇಳಿದ್ದರು. ಅದಕ್ಕೆ ಪೂರಕವಾಗಿ ಕೆಲ ಕಿರು ಪುಸ್ತಕಗಳನ್ನು ಓದಿ, ಅರ್ಥೈಸಿಕೊಂಡು ಪಂದ್ಯ ರಚಿಸಿದ್ದೇನೆ. . ಶೀಘ್ರವೇ ಕೃತಿಯನ್ನು ಅಧಿಕೃತವಾಗಿ ಬಿಡುಗಡೆಗೊಳಿಸಲಾಗುವುದು ಎಂದು ಲಾವಣ್ಯ ತಿಳಿಸಿದಳು.