ಹಿಂದೂ ಸಮ್ಮೇಳನ ಪ್ರಚಾರಾರ್ಥ ವಿವಿಧ ಸ್ಪರ್ಧೆ

ಮಹಾಂತೇಶ ನಗರ ಗ್ಲಾಸ್‌ಹೌಸನಲ್ಲಿ ಈಚೆಗೆ ಹಿಂದೂ ಸಮ್ಮೇಳನ ಪ್ರಯುಕ್ತ ಜರುಗಿದ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ಮಕ್ಕಳು.
ಮಹಾಂತೇಶ ನಗರ ಗ್ಲಾಸ್‌ಹೌಸನಲ್ಲಿ ಈಚೆಗೆ ಹಿಂದೂ ಸಮ್ಮೇಳನ ಪ್ರಯುಕ್ತ ಜರುಗಿದ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ಮಕ್ಕಳು.
Published on
ಬೆಳಗಾವಿ: ಇಲ್ಲಿನ ಮಹಾಂತೇಶ ನಗರದಲ್ಲಿ ಹಿಂದೂ ಸಮ್ಮೇಳನ ಸಮಿತಿ ಮತ್ತು ಮಹಾಲಕ್ಷ್ಮೀ ಮಹಿಳಾ ಮಂಡಳಿ ಸಹಯೋಗದಲ್ಲಿ ಫೆ.6ರಂದು ಏರ್ಪಡಿಸಿರುವ ವಿರಾಟ ಹಿಂದೂ ಸಮ್ಮೇಳನದ ಪ್ರಚಾರಾರ್ಥ ಸನಾತನ ಸಂಸ್ಕೃತಿ ಬಿಂಬಿಸುವ ವಿವಿಧ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ.
ಗಾಯನ, ರಂಗೋಲಿ, ದೇಸಿ ಆಟಗಳು, ಲಲಿತ ಸಹಸ್ರನಾಮ ಪಠಣ ಮತ್ತು ಅಗ್ನಿ ರಹಿತ ಅಡುಗೆ ಸ್ಪರ್ಧೆಗಳನ್ನು ಆಯೋಜಿಸಲಾಗಿದ್ದು, ಈ ಪೈಕಿ ಈಚೆಗೆ ರಂಗೋಲಿ ಮತ್ತು ಗಾಯನ ಸ್ಪರ್ಧೆಗಳು ಮಹಾಂತೇಶ ನಗರದ ಗ್ಲಾಸ್‌ಹೌಸ್‌ನಲ್ಲಿ ಪೂರ್ಣಗೊಂಡವು.
ಗಾಯನ ಸ್ಪರ್ಧೆಯಲ್ಲಿ ಜಾನಪದ ಮತ್ತು ದೇಶಭಕ್ತಿ ಗೀತೆಗಳಿಗೆ ಪ್ರಾಮುಖ್ಯತೆ ಕೊಡಲಾಗಿತ್ತು. ಫೆ.6ರವರೆಗೆ ಹಂತ ಹಂತವಾಗಿ ವಿವಿಧ ಸ್ಪರ್ಧೆಗಳು ನಡೆಯಲಿದ್ದು, ಕೊನೆಯದಾಗಿ ಸಮ್ಮೇಳನದ ವೇದಿಕೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net