ಹತ್ತರಗಿ ಸರ್ವಾಂಗೀಣ ಅಭಿವೃದ್ಧಿಗೆ ಬದ್ಧ

ಹತ್ತರಗಿ ಗ್ರಾಪಂ ಕಟ್ಟಡ ನಾಮಲಕವನ್ನು ಸಚಿವ ಸತೀಶ ಜಾರಕಿಹೊಳಿ, ಹತ್ತರಗಿ ಗುರುಸಿದ್ಧೇಶ್ವರ ಸ್ವಾಮೀಜಿ,  ಡಾ.ಆನಂದ ಮಹಾರಾಜ ಗೋಸಾವಿ ಉದ್ಘಾಟಿಸಿದರು.  ರವೀಂದ್ರ ಜಿಂಡ್ರಾಳಿ, ಮಹಾದೇವ ಪಟೋಳಿ, ಸಮೀರ ಬೇಪಾರಿ, ಪ್ರವೀಣ ಮಠಪತಿ ಇತರರು ಇದ್ದರು.
ಹತ್ತರಗಿ ಗ್ರಾಪಂ ಕಟ್ಟಡ ನಾಮಲಕವನ್ನು ಸಚಿವ ಸತೀಶ ಜಾರಕಿಹೊಳಿ, ಹತ್ತರಗಿ ಗುರುಸಿದ್ಧೇಶ್ವರ ಸ್ವಾಮೀಜಿ, ಡಾ.ಆನಂದ ಮಹಾರಾಜ ಗೋಸಾವಿ ಉದ್ಘಾಟಿಸಿದರು. ರವೀಂದ್ರ ಜಿಂಡ್ರಾಳಿ, ಮಹಾದೇವ ಪಟೋಳಿ, ಸಮೀರ ಬೇಪಾರಿ, ಪ್ರವೀಣ ಮಠಪತಿ ಇತರರು ಇದ್ದರು.
Published on
ಉಳ್ಳಾಗಡ್ಡಿ-ಖಾನಾಪುರ: ಆಡಳಿತಾತ್ಮಕ ದಷ್ಟಿಯಿಂದ ಹತ್ತರಗಿ ಗ್ರಾಪಂ ಕಟ್ಟಡವು ಸುಸಜ್ಜಿತ ಹಾಗೂ ಕ್ರಮಬದ್ಧವಾದ ಕಟ್ಟಡವಾಗಿದ್ದು, ಗ್ರಾಮಸ್ಥರು ಸದುಪಯೋಗ ಪಡೆದುಕೊಳ್ಳಬೇಕು. ಹತ್ತರಗಿ ಗ್ರಾಮದ ಸವಾರ್ಂಗೀಣ ಅಭಿವದ್ಧಿಗೆ ಬದ್ಧ ಎಂದು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ಸಮೀಪದ ಹತ್ತರಗಿಯಲ್ಲಿ ಸುಮಾರು 83.14 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾದ ಗ್ರಾಪಂ ಸ್ವರಾಜ್ಯ ಸೌಧ ಕಟ್ಟಡವನ್ನು ಸೋಮವಾರ ಉದ್ಘಾಟಿಸಿ ಮಾತನಾಡಿ, ಕಳೆದ 20 ವರ್ಷಗಳಿಂದ ಹತ್ತರಗಿ ಗ್ರಾಪಂ ವ್ಯಾಪ್ತಿಯ ಹಳ್ಳಿಗಳಲ್ಲಿ ಸರ್ಕಾರದ ಪ್ರತಿಯೊಂದು ಯೋಜನೆ ಯಶಸ್ವಿಯಾಗಿ ಅನುಷ್ಠಾನಗೊಳಿಸಿ ಕಾರ್ಯರೂಪಕ್ಕೆ ತರಲಾಗಿದೆ. ಐದು ಗ್ರಾಮಗಳ ಜನ ಒಗ್ಗಟ್ಟಿನಿಂದ ಇದ್ದು, ನಾಲ್ಕನೆಯ ಬಾರಿಗೆ ಈ ಸದಸ್ಯರನ್ನು ಆಯ್ಕೆಮಾಡಿದ್ದು ಈ ಗ್ರಾಮಗಳ ಸರ್ವಾಂಗೀಣ ಅಭಿವದ್ಧಿಗೆ ಬದ್ಧ ಎಂದರು.
ಹತ್ತರಗಿಯ ಗುರುಸಿದ್ಧೇಶ್ವರ ಸ್ವಾಮೀಜಿ ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿ, ಬ್ರಿಟಿಷ್ ಕಾಲದಿಂದ ಇತಿಹಾಸವಿರುವ ಹತ್ತರಗಿಯಲ್ಲಿ ಗ್ರಾಪಂ ಸೌಧ ನಿರ್ಮಿಸಿದ್ದು ಯಮಕನಮರಡಿ ಕ್ಷೇತ್ರವನ್ನು ಅಭಿವೃದ್ಧಿಯತ್ತ ಕೊಂಡೊಯ್ಯುತ್ತಿದೆ ಎಂದರು,
ಸಾನ್ನಿಧ್ಯವಹಿಸಿದ್ದ ಹತ್ತರಗಿಯ ಹರಿ ಮಂದಿರದ ಡಾ.ಆನಂದ ಮಹಾರಾಜ ಗೋಸಾವಿ ಆಶೀರ್ವಚನ ನೀಡಿದರು. ಯುವಧುರೀಣರಾದ ರವೀಂದ್ರ ಜಿಂಡ್ರಾಳಿ, ಗ್ರಾಪಂ ಮಾಜಿ ಅಧ್ಯಕ್ಷ ಮಹಾದೇವ ಪಟೋಳಿ ಮಾತನಾಡಿದರು, ಗ್ರಾಪಂ ಅಧ್ಯಕ್ಷ ಸಮೀರ ಬೇಪಾರಿ ಅಧ್ಯಕ್ಷತೆ ವಹಿಸಿದ್ದರು. ಕಾ.ನಿ. ಅಭಿಯಂತ ಪ್ರವೀಣ ಮಠಪತಿ, ಹುಕ್ಕೇರಿ ತಾಪಂ ಕಾರ್ಯನಿರ್ವಾಹಕ ಅಧಿಕಾರಿ
ಟಿ.ಆರ್.ಮಲ್ಲಾಡ, ಉಪಾಧ್ಯಕ್ಷೆ ಅಕ್ಷತಾ ಭೀಮಗೋಳ, ದಸ್ತಗೀರ ಬಸ್ಸಾಪೂರಿ, ಎ.ಬಿ.ಪಟ್ಟಣಶೆಟ್ಟಿ, ಅಭಿಯಂತ ಎಸ್.ಎ.ಭೋಸಗೋಳ, ಶಂಕರ ಗುಡಸಿ, ಜೋಮಲಿಂಗ ಪಟೋಳಿ, ವಿಠ್ಠಲ ಕಡಗಾವಿ, ಹನುಮಂತ ಗಾಡಿವಡ್ಡರ, ಸಿದ್ದಯ್ಯ ಹಾಲದೇವರಮಠ, ಮಹಾದೇವ ಮಜತಿ, ಪಿಡಿಒ ಆನಂದ ಹೊಳೆನ್ನವರ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net