ಎಸ್‌ಐಆರ್ ಕೇಂದ್ರಗಳಿಗೆ ಆಯುಕ್ತರ ಭೇಟಿ

 ಬೆಳಗಾವಿ ನಗರದಲ್ಲಿ ಸೋಮವಾರ ಎಸ್‌ಐಆರ್ ಕೇಂದ್ರಗಳಿಗೆ ಕಾರ್ತಿಕ್.ಎಂ. ಭೇಟಿ ನೀಡಿ ಪರಿಶೀಲಿಸಿದರು.
ಬೆಳಗಾವಿ ನಗರದಲ್ಲಿ ಸೋಮವಾರ ಎಸ್‌ಐಆರ್ ಕೇಂದ್ರಗಳಿಗೆ ಕಾರ್ತಿಕ್.ಎಂ. ಭೇಟಿ ನೀಡಿ ಪರಿಶೀಲಿಸಿದರು.
Published on
ಬೆಳಗಾವಿ :ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯು ಪ್ರಾರಂಭವಾಗಿದ್ದು ಬೂತ ಮಟ್ಟದ ಅಧಿಕಾರಿಗಳು (ಬಿಎಲ್‌ಒ) ಮನೆ ಮನೆಗೆ ಭೇಟಿ ನೀಡಿ ವಿತರಣೆ ಮಾಡಿರುವ ಗಣತಿ ನಮೂನೆ (ಇಎಫ್)ಮತದಾರರು ನಿಗದಿತ ಸಮಯದಲ್ಲಿಯೇ ವಾಪಸ್ ನೀಡಬೇಕು ಎಂದು ಪಾಲಿಕೆ ಆಯುಕ್ತ ಕಾರ್ತಿಕ್ ಎಂ. ತಿಳಿಸಿದ್ದಾರೆ.
ನಗರದಲ್ಲಿರುವ ಬೆಳಗಾವಿ ಉತ್ತರ, ದಕ್ಷಿಣ ವಿಧಾನಸಭಾ ಕ್ಷೇತ್ರಗಳಲ್ಲಿರುವ ಎಸ್‌ಐಆರ್ ಕೇಂದ್ರಗಳಿರುವ ಮತಗಟ್ಟೆಗಳು ಹಾಗೂ ಯುಸಿಎಫ್ ಯೋಜನೆ ಅಳವಡಿಸಲಿರುವ ಸ್ಥಳಗಳಿಗೆ ಭೇಟಿ ಪರಿಶೀಲಿಸಿದ ಬಳಿಕ ಮಾತನಾಡಿದ ಅವರು, ಈಗಾಗಲೇ ಬಿಎಲ್‌ಇಗಳು ಮತದಾರರ ಮನೆಗೆ ತೆರಳಿ ಇಎಫ್ ಅರ್ಜಿಗಳನ್ನು ನೀಡಿದ್ದಾರೆ. ಆದರೆ, ಬಹುತೇಕ ಮತದಾರರು ಅರ್ಜಿಗಳನ್ನು ಭರ್ತಿ ಮಾಡಿ ವಾಪಸ್ ನೀಡಿಲ್ಲ. ಇದರಿಂದಾಗಿ ಮುಂದಿನ ಪ್ರಕ್ರಿಯೇ ವಿಳಂಬವಾಗುವ ಸಾಧ್ಯತೆಯಿದೆ ಎಂದರು.
ಉತ್ತರ ಮತ್ತು ದಕ್ಷಿಣ ವಿಧಾನಸಭಾ ಕ್ಷೇತ್ರಗಳಲ್ಲಿ ಎಸ್‌ಐಆರ್ ಕಾರ್ಯ ಭರದಿಂದ ಸಾಗಿದ್ದು, ವೀರಸೌಧ, ಎಳ್ಳೂರ, ವಡಗಾಂವ ಸೇರಿದಂತೆ ವಿವಿಧೆಡೆ ಎಸ್‌ಐಆರ್ ಕೇಂದ್ರಗಳಲ್ಲಿ ಕಾರ್ಯ ಎಸ್‌ಐಆರ್ ಕಾರ್ಯ ವೇಗ ಪಡೆದುಕೊಳ್ಳಬೇಕು. ಬಿಎಲ್‌ಒ ಸೇರಿ ವಿವಿದಕ್ಕೆ ನಿಯೋಜನೆಗೊಂಡಿರುವ ಎಸ್‌ಐಆರ್ ಸಿಬ್ಬಂದಿ ಯಾವುದೇ ಕೆಲಸ ನಿರ್ಲಕ್ಷೃ ಮಾಡಬೇಡಿ. ಮತದಾರರ ಅನುಕೂಲಕ್ಕೆ ಅನುಗುಣವಾಗಿ ಕೆಲಸ ಮಾಡಬೇಕು. ಯಾವುದೇ ಕಾರಣಕ್ಕೂ ನಿರ್ಲಕ್ಷೃ ಮಾಡಬೇಡಿ ಎಂದು ತಿಳಿಸಿದರು.
...................
ಬಾಕ್ಸ್
ಜು.27 ರ ವರೆಗಿನ ಎಸ್.ಆಯ್.ಆರ್.ವರದಿ
ಜಿಲ್ಲೆಯಲ್ಲಿ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಪ್ರಕ್ರಿಯೆಯು ಈಗಾಗಲೇ ಪ್ರಾರಂಭವಾಗಿದ್ದು ಜಿಲ್ಲೆಯ 18 ವಿಧಾನಸಭಾ ಮತಕ್ಷೇತ್ರಗಳ ಭೂತ್ ಮಟ್ಟದ ಅಧಿಕಾರಿಗಳು ಮನೆ ಮನೆಗೆ ಭೇಟಿ ನೀಡಿ ಎನ್ಯುಮರೇಷನ್ ಫಾರ್ಮಗಳನ್ನು ಮತದಾರರಿಗೆ ವಿತರಿಸುತ್ತಿದ್ದಾರೆ. ಒಟ್ಟು 41,07,000 ಮತದಾರರು ಮತದಾರರ ಪಟ್ಟಿಯಲ್ಲಿದ್ದು, ಜು 27 ರ ವರೆಗೆ 41,07,000 ಎನ್ಯುಮರೇಶನ್ ಫಾರ್ಮಗಳನ್ನು ವಿತರಿಸಲಾಗಿದ್ದು, 34,44,137 ಫಾರ್ಮ ಗಣಕೀಕರಣಗೊಳಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಮೊಹಮ್ಮದ ರೋಷನ್ ತಿಳಿಸಿದ್ದಾರೆ.
....................
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net