ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆಗೆ ಸಹಕರಿಸಿ

ಕಾಗವಾಡದ ಶ್ರೀ ಆಚಾರ್ಯ 108 ವಿದ್ಯಾಸಾಗರ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ತರಬೇತಿ ಶಿಬಿರದಲ್ಲಿ ರವೀಂದ್ರ ಹಾದಿಮನಿ ಮಾತನಾಡಿದರು. ರಶ್ಮಿ ಜಕಾತಿ, ಪಾಂಡುರಂಗ ಮದಭಾವಿ, ಮಹಾಂತೇಶ ಬಾದವಾಡಗಿ ಇತರರಿದ್ದರು.
ಕಾಗವಾಡದ ಶ್ರೀ ಆಚಾರ್ಯ 108 ವಿದ್ಯಾಸಾಗರ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ತರಬೇತಿ ಶಿಬಿರದಲ್ಲಿ ರವೀಂದ್ರ ಹಾದಿಮನಿ ಮಾತನಾಡಿದರು. ರಶ್ಮಿ ಜಕಾತಿ, ಪಾಂಡುರಂಗ ಮದಭಾವಿ, ಮಹಾಂತೇಶ ಬಾದವಾಡಗಿ ಇತರರಿದ್ದರು.
Published on
ಕಾಗವಾಡ: ಅರ್ಹ ಮತದಾರರು ಮತದಾನದಿಂದ ವಂಚಿತರಾಗದಂತೆ ಮತದಾರ ಪಟ್ಟಿಯ ಸಮಗ್ರ ಪರಿಷ್ಕರಣೆಗೆ ನೇಮಕಗೊಂಡ ಎಲ್ಲ ಬಿಎಲ್‌ಒ, ಮೇಲ್ವಿಚಾರಕರು ಎಚ್ಚರ ವಹಿಸಿ, ಕಾರ್ಯ ನಿರ್ವಹಿಸಬೇಕು ಎಂದು ತಹಸೀಲ್ದಾರ್ ರವೀಂದ್ರ ಹಾದಿಮನಿ ಹೇಳಿದರು.
ಶ್ರೀ ಆಚಾರ್ಯ 108 ವಿದ್ಯಾಸಾಗರ ಪ್ರೌಢಶಾಲೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕಾಗವಾಡ ವಿಧಾನಸಭಾ ಕ್ಷೇತ್ರದ ಕಾಗವಾಡ ಹೋಬಳಿಯ ಬಿಎಲ್‌ಒ ಹಾಗೂ ಬಿಎಲ್‌ಎ ಮೇಲ್ವಿಚಾರಕರ ತರಬೇತಿಯಲ್ಲಿ ಮಾತನಾಡಿ, ಭಾರತೀಯ ಚುನಾವಣಾ ಆಯೋಗ ಮತ್ತು ಮುಖ್ಯ ಚುನಾವಣಾ ಆಯೋಗದ ಆದೇಶದಂತೆ ಕಾಗವಾಡ ಕ್ಷೇತ್ರದಲ್ಲಿ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಕಾರ್ಯ ನಡೆಯುತ್ತಿದ್ದು, ಎಲ್ಲರ ಸಹಭಾಗಿತ್ವ ಮುಖ್ಯವಾಗಿರುತ್ತದೆ ಎಂದರು.
ಕಾಗವಾಡ ವಿಧಾನಸಭಾ ಕ್ಷೇತ್ರದಲ್ಲಿ 2.05 ಲಕ್ಷಕ್ಕೂ ಹೆಚ್ಚು ಮತದಾರರಿದ್ದು, ಅದರಲ್ಲಿ ಈಗಾಗಲೇ 1.96 ಲಕ್ಕಕ್ಕಿಂತ ಹೆಚ್ಚು ಮತದಾರರ ಪರಿಷ್ಕರಣೆ ಮಾಡಲಾಗಿದೆ. ಇನ್ನು ಉಳಿದ ಮತದಾರರನ್ನು ಪರಿಷ್ಕರಣೆ ಮಾಡಿದರೆ ಶೇ.100ರಷ್ಟು ಗುರಿ ಸಾಧಿಸಿದಂತಾಗುತ್ತದೆ ಎಂದು ಹೇಳಿದರು.
ಗ್ರೇಡ್-2 ತಹಸೀಲ್ದಾರ್ ರಶ್ಮಿ ಜಕಾತಿ, ಕ್ಷೇತ್ರ ಶಿಕ್ಷಣಾಧಿಕಾರಿ ಪಾಂಡುರಂಗ ಮದಭಾವಿ, ಚುನಾವಣಾ ವಿಷಯ ನಿರ್ವಾಹಕ ಮಹಾಂತೇಶ ಬಾದವಾಡಗಿ, ಶಿರಸ್ತೆದಾರ ವಿಜಯಕುಮಾರ ಚೌಗಲಾ, ಭರತ ಭಿಲವಾಡೆ, ಸತೀಶ ಕುರುಂದವಾಡೆ, ಭರತ ಟೋಣಗೆ, ರವೀಂದ್ರ ನಾಂದಣಿ, ವಿಜಯಕುಮಾರ ಅಕಿವಾಟೆ, ಅರುಣಕುಮಾರ ಗಣೇಶವಾಡಿ, ಪ್ರವೀಣ ಕೆಂಪವಾಡೆ, ಪ್ರವೀಣ ಪಾಟೀಲ, ಈಶ್ವರ ಕಾಂಬಳೆ, ಪ್ರಕಾಶ ಧೊಂಡಾರೆ, ಅಕ್ಷಯ ಪಾಟೀಲ, ಪಿಂಟು ಕಾಂಬಳೆ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net