ಸವದತ್ತಿ ಉಪವಿಭಾಗವು ಸವದತ್ತಿ ಮತ್ತು ಯರಗಟ್ಟಿ ತಾಲೂಕುಗಳ ವ್ಯಾಪ್ತಿಯಲ್ಲಿ 131 ಗ್ರಾಮಗಳು, 45 ಗ್ರಾಮ ಪಂಚಾಯಿತಿಗಳು, ಒಂದು ನಗರಸಭೆ, ಒಂದು ಪುರಸಭೆ ಹಾಗೂ ಒಂದು ಪಟ್ಟಣ ಪಂಚಾಯಿತಿಯನ್ನು ಒಳಗೊಂಡಿರುವ ವಿಶಾಲ ಪ್ರದೇಶವಾಗಿದೆ. ಇಲ್ಲಿ 1.29 ಲಕ್ಷಕ್ಕೂ ಅಧಿಕ ವಿದ್ಯುತ ಸಂಪರ್ಕಗಳು, 102 ಎಚ್‌ಟಿ ಸ್ಥಾವರಗಳು, 16 ವಿದ್ಯುತ ವಿತರಣಾ ಕೇಂದ್ರಗಳು ಹಾಗೂ 10,055 ಪರಿವರ್ತಕಗಳು ಕಾರ್ಯನಿರ್ವಹಿಸುತ್ತಿವೆ.