ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನರೇಂದ್ರ ಮೋದಿ ಮೈದಾನದಲ್ಲಿ 80 ಸಾವಿರ ಜನರ ಸಾಮರ್ಥ್ಯವಿದೆ. ಇದು ಸೇರಿದಂತೆ ಇತರೆ ಮೈದಾನಗಳಿಗೆ ಹೋಲಿಸಿದಾಗ ಚಿನ್ನಸ್ವಾಮಿಯಲ್ಲಿ ಸಾಕಷ್ಟು ಕೊರತೆಗಳಿವೆ. 360 ಡಿಗ್ರಿ ವ್ಹೀವ್ ಇಲ್ಲ. ಹಲವು ಕಡೆ ಕುಳಿತವರಿಗೆ ಅರ್ಧ ಮೈದಾನವೇ ಕಾಣುವುದಿಲ್ಲ. ಆಟಗಾರರು, ಗಣ್ಯರು ಮತ್ತಿತರೆ ವಿಭಾಗಗಳಿಗೆ ಆಸನಗಳನ್ನು ಮೀಸಲಿಟ್ಟು, ಜನರಿಗೆ ಕೇವಲ 18ರಿಂದ 20 ಸಾವಿರ ಆಸನಗಳನ್ನು ಮಾತ್ರ ಸಿಗುತ್ತವೆ. ಇದನ್ನೆಲ್ಲ ಸುಧಾರಿಸಬೇಕಾಗಿದ್ದು ಮತ್ತೊಮ್ಮೆ ಅಭಿವೃದ್ಧಿ ಮಾಡುವುದಕ್ಕೆ ಮುಂದಾಗಿದ್ದೇವೆ ಎಂದು ಹೇಳಿದರು.