ರಾಯಬಾಗ ಸಾರ್ವಜನಿಕ ಆಸ್ಪತ್ರೆಯಲ್ಲಿ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮಕ್ಕೆ ಶಾಸಕ ಡಿ.ಎಂ.ಐಹೊಳೆ ಚಾಲನೆ ನೀಡಿದರು. ಡಾ.ವಿನೋದ ಗಸ್ತಿ, ಡಾ.ಎಸ್.ಎಸ್.ಕರಗಾಂವೆ, ನಂದಕುಮಾರ ಪಾಟೀಲ ಇತರರಿದ್ದರು.
Published on:
Copied
Follow Us
ರಾಯಬಾಗ: ಪೋಲಿಯೋಮುಕ್ತ ಭಾರತ ನಿರ್ಮಾಣಕ್ಕೆ ಎಲ್ಲ ಪಾಲಕರು ೫ ವರ್ಷದೊಳಗಿನ ಮಗುವಿಗೆ ತಪ್ಪದೇ ಪಲ್ಸ್ ಪೋಲಿಯೋ ಹನಿ ಹಾಕಿಸಬೇಕು ಎಂದು ಶಾಸಕ ಡಿ.ಎಂ.ಐಹೊಳೆ ಹೇಳಿದರು.
ಸಾರ್ವಜನಿಕ ಆಸ್ಪತ್ರೆಯಲ್ಲಿ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮಕ್ಕೆ ಭಾನುವಾರ ಚಾಲನೆ ನೀಡಿ ಮಾತನಾಡಿ, ಮಕ್ಕಳ ಆರೋಗ್ಯವೇ ದೇಶದ ಅಮೂಲ್ಯ ಸಂಪತ್ತು, ಪೋಲಿಯೋ ಎಂಬ ಮಾರಕ ಕಾಯಿಲೆಯನ್ನು ಸಂಪೂರ್ಣ ನಿರ್ಮೂಲನೆ ಮಾಡಲು ಎಲ್ಲರೂ ಆರೋಗ್ಯ ಇಲಾಖೆಯೊಂದಿಗೆ ಕೈಜೋಡಿಸಬೇಕೆಂದು ಕರೆ ನೀಡಿದರು.
ಮುಖ್ಯ ವೈದ್ಯಾಧಿಕಾರಿ ಡಾ.ವಿನೋದ ಗಸ್ತಿ ಮಾತನಾಡಿ, ಇಂದಿನಿಂದ ಜು.೧ರವರೆಗೆ ಎಲ್ಲ ಲಸಿಕಾ ಕೇಂದ್ರಗಳಲ್ಲಿ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮ ನಡೆಯಲಿದ್ದು, ೫ ವರ್ಷದೊಳಗಿನ ಮಗು ಲಸಿಕೆಯಿಂದ ವಂಚಿತವಾಗದಂತೆ ಪಾಲಕರು ಕ್ರಮವಹಿಸಬೇಕು. ತಾಲೂಕಿನಲ್ಲಿ ೪೭,೫೩೩ ೫ ವರ್ಷದೊಳಗಿನ ಮಕ್ಕಳಿವೆ. ಲಸಿಕೆ ಹಾಕಲು ಒಟ್ಟು ೨೧೭ ಬೂತ್ ಸ್ಥಾಪಿಸಿದ್ದು, ೫೩ ಮೇಲ್ವಿಚಾರಕರು, ೪೩೦ ತಂಡ ಹಾಗೂ ೮೬೮ ಲಸಿಕೆದಾರರು ಕಾರ್ಯ ನಿರ್ವಹಿಸಲಿದ್ದಾರೆ ಎಂದರು.