ಬಾಲ್ಯದಲ್ಲೇ ಮಕ್ಕಳಿಗೆ ಸಂಸ್ಕಾರ ಅಗತ್ಯ

ಗೋಧೋಳಿ ಗ್ರಾಮದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮ ಜರುಗಿತು.
ಗೋಧೋಳಿ ಗ್ರಾಮದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮ ಜರುಗಿತು.
Published on

ಕಕ್ಕೇರಿ: ಬಾಲ್ಯದಲ್ಲೇ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಿದಲ್ಲಿ ಛತ್ರಪತಿ ಶಿವಾಜಿ ಮಹಾರಾಜರಂತಹ ನಾಯಕರಾಗಲು ಸಾಧ್ಯವಾಗುತ್ತದೆ ಎಂದು ಕಕ್ಕೇರಿ ಸಿದ್ಧಾರೂಢ ಮಠದ ರಾಮಾನಂದ ಸ್ವಾಮೀಜಿ ಹೇಳಿದರು.

ಸಮೀಪದ ಗೋಧೋಳಿ ಗ್ರಾಮದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಛತ್ರಪತಿ ಶಿವಾಜಿ ಮಹಾರಾಜರ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಶಾಸಕ ವಿಠ್ಠಲ ಹಲಗೇಕರ ಮಾತನಾಡಿ, ಕ್ಷೇತ್ರದ ಅಭಿವೃದ್ಧಿಗಾಗಿ ಸರ್ಕಾರ 25 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದೆ ಎಂದರು.

ನಂದಗಡ ವಿರಕ್ತಮಠದ ಚನ್ನವೀರ ದೇವರು, ಸುರಪುರ-ಕೇರವಾಡ ಅಡಿವಿಸಿದ್ಧೇಶ್ವರ ಮಠದ ಪ್ರಭು ಅಡವಿಸಿದ್ಧೇಶ್ವರ ಸ್ವಾಮೀಜಿ, ಜೆಡಿಎಸ್ ಮುಖಂಡ ನಾಸೀರ್ ಭಾಗವಾನ, ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಧ್ಯಕ್ಷ ಸೂರ್ಯಕಾಂತ ಕುಲಕರ್ಣಿ, ಸಾವಿತ್ರಿ ಮಾದರ, ಶ್ರೇಯಾ ದಳವಿ, ಹಂಡಿ ಬಡಗನಾಥ ಪೀರನಾಥಮಠದ ಪಿರಯೋಗಿ ಮೋಹನನಾಥ ಮಹಾರಾಜ ಸ್ವಾಮೀಜಿ, ಪರುಶುರಾಮ ಕದಂ, ಪಿಕೆಪಿಎಸ್ ಅಧ್ಯಕ್ಷ ಬಲರಾಮ ಪಾಟೀಲ, ಪದ್ಮಶ್ರೀ ಪಾಟೀಲ, ಸಮೀರ ಗಾವಡೆ, ಭಾರತಿ ಬೊವಾಳಕರ, ಕರ್ನಾಟಕ ರೈತ ಸಂಘದ ಉಪಾಧ್ಯಕ್ಷ ಕಿಶೋರ ಮಿಠಾರಿ, ಕೇದಾರಿ ಬಿಡಕರ, ಶಂಕರ ಕರಿಕಟ್ಟಿ, ದತ್ತಾತ್ರೇಯ ಕದಂ, ವೆಂಕಟೇಶ್ವರ ನವಲೇಕರ, ಜಯರಾಮ ಕದಂ, ಮನೋಹರ ಕದಂ, ರಾಮಾ ಕದಂ, ದತ್ತಾ ಬಿಡಕರ ಇತರಿರದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net