ಬೆಳಗಾವಿ: ಸಾಕಷ್ಟು ಸುಧಾರಣೆ ಕ್ರಮ ಕೈಗೊಂಡಿದ್ದರಿಂದ ದ್ವಿತೀಯ ಪಿಯುಸಿ ಪರೀಕ್ಷೆ.ಫಲಿತಾಂಶದಲ್ಲಿ ತುಸು ಸುಧಾರಣೆಯಾದರೂ ರಾಜ್ಯ ಮಟ್ಟದಲ್ಲಿ ಕಳೆದ ವರ್ಷದ.ಸ್ಥಾನಮಾನವನ್ನೇ ಎರಡೂ ಶೈಕ್ಷಣಿಕ ಜಿಲ್ಲೆಗಳು ಕಾಯ್ದುಕೊಂಡಿದ್ದು, ಬೆಳಗಾವಿ 26,.ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆ 24ನೇ ಸ್ಥಾನ ಪಡೆದಿದೆ..ಬೆಳಗಾವಿ ಶೈಕ್ಷಣಿಕ ಜಿಲ್ಲೆಯಲ್ಲಿ ಕಳೆದ ವರ್ಷದ ಫಲಿತಾಂಶ ಶೇ.65.37.ರಷ್ಟಾಗಿತ್ತು. ಈ ಸಲ ಶೇ.80.32ಕ್ಕೇರಿದೆ. ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಫಲಿತಾಂಶ.ಶೇ.66.76ರಿಂದ 83.10ಕ್ಕೇರಿದೆ. ಈ ಸಲವೂ ಎರಡೂ ಶೈಕ್ಷಣಿಕ ಜಿಲ್ಲೆಗಳಲ್ಲಿ ಖಾಸಗಿ.ಪದವಿ ಪೂರ್ವ ಕಾಲೇಜುಗಳೇ ಹೆಚ್ಚಿನ ಸಾಧನೆ ಮಾಡಿವೆ. ಕಲಾ, ವಾಣಿಜ್ಯ ಮತ್ತು.ವಿಜ್ಞಾನ ವಿಭಾಗದಲ್ಲಿ ರಾಜ್ಯ ಮಟ್ಟದಲ್ಲಿ ಆರು ವಿದ್ಯಾರ್ಥಿಗಳು ರ‌್ಯಾಂಕ್ ಗಳಿಸಿದ್ದಾರೆ..ಬೆಳಗಾವಿ ಜಿಲ್ಲೆಯಲ್ಲಿ 19,635ರಲ್ಲಿ 15,771 ವಿದ್ಯಾರ್ಥಿಗಳು ಪಾಸಾದರೆ,.3,864 ಮಕ್ಕಳು ಅನುತ್ತೀರ್ಣರಾಗಿದ್ದಾರೆ. ಕಲಾ (ಶೇ.69.87), ವಾಣಿಜ್ಯ.(ಶೇ.81.43) ವಿಭಾಗಗಳಿಗಿಂತ ವಿಜ್ಞಾನ (ಶೇ.88.41) ವಿಭಾಗ ಹೆಚ್ಚಿನ ಸಾಧನೆ.ಮಾಡಿದೆ. ಕಲಾ ವಿಭಾಗದಲ್ಲಿ 6,336ರಲ್ಲಿ 4,427 ವಿದ್ಯಾರ್ಥಿಗಳು, ವಾಣಿಜ್ಯದಲ್ಲಿ.5,928ರಲ್ಲಿ 4,827 ಹಾಗೂ ವಿಜ್ಞಾನದಲ್ಲಿ 7,371ರ ಪೈಕಿ 6517 ವಿದ್ಯಾರ್ಥಿಗಳು.ಪಾಸಾಗಿದ್ದಾರೆ..ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ 28,707ರ ಪೈಕಿ 22,806 ವಿದ್ಯಾರ್ಥಿಗಳು.ಪಾಸಾಗಿದ್ದು, 5,901 ಮಕ್ಕಳು ಫೇಲಾಗಿದ್ದಾರೆ. ಕಲಾ ವಿಭಾಗದಲ್ಲಿ 10,517ರ ಪೈಕಿ.7,849 (ಶೇ.74.63), ವಾಣಿಜ್ಯದಲ್ಲಿ 6,099ರ ಪೈಕಿ 5,384 (ಶೇ.88.28),.ವಿಜ್ಞಾನದಲ್ಲಿ 9,764ರ ಪೈಕಿ 8,680 (ಶೇ.88.99) ವಿದ್ಯಾರ್ಥಿಗಳು.ತೇರ್ಗಡೆಯಾಗಿದ್ದಾರೆ..ಕಲಾ ವಿಭಾಗದಲ್ಲಿ ಶಿವಾನಂದ ಬುರ್ಲಟ್ಟಿ ರಾಜ್ಯಕ್ಕೆ ದ್ವಿತೀಯ, ಜಿಲ್ಲೆಗೆ ಪ್ರಥಮ,.ವರ್ಷಾಂಜಲಿ ಕಾಂಬಳೆ, ಆಶಾ ಗಡದವರ ದ್ವಿತೀಯ, ಕಲ್ಪನಾ ಕಪ್ಪಲಗುದ್ದಿ ಮತ್ತು ಶ್ರುತಿ.ಜನಗೌಡ ತೃತೀಯ. ವಾಣಿಜ್ಯದಲ್ಲಿ ದಿವ್ಯಪ್ರಭಾ ಮನಿವಣ್ಣನ್ ರಾಜ್ಯಕ್ಕೆ 4ನೇ, ಜಿಲ್ಲೆಗೆ.ಪ್ರಥಮ, ಸೌಂದರ್ಯ ಪಂಡ್ರೊಳ್ಳಿ ದ್ವಿತೀಯ, ಐಶ್ವರ್ಯ ಹಿರೇಮಠ ಮತ್ತು ಅಮೃತಾ.ಚೌಗಲೆ ತೃತೀಯ. ವಿಜ್ಞಾನ ವಿಭಾಗದಲ್ಲಿ ಅಂಕಿತ ಕಾರಟಗಿ ರಾಜ್ಯಕ್ಕೆ ದ್ವಿತೀಯ,.ಜಿಲ್ಲೆಗೆ ಪ್ರಥಮ, ಪ್ರಜಕ್ತಾ ಜಾಧವ ದ್ವಿತೀಯ ಮತ್ತು ನಮೃತಾ ಚೌಗಲೆ ತೃತೀಯ ಸ್ಥಾನ.ಪಡೆದಿದ್ದಾರೆ.