ಶತಮಾನೋತ್ಸವ ಸಮಾರೋಪ ಸೋಮವಾರ

 ಸುದ್ದಿಗೋಷ್ಠಿಯಲ್ಲಿ ಎಂ.ಬಿ.ಝಿರಲಿ ಮಾತನಾಡಿದರು. ಹನುಮಂತ ಕೊಂಗಾಲಿ, ಡಾ.ಬಿ.ಎಸ್.ನಾವಿ, ರಾಮಚಂದ್ರ ಜಕಾತಿ, ಸುಬ್ರಹ್ಮಣ್ಯ ಭಟ್ ಇತರರಿದ್ದರು.
ಸುದ್ದಿಗೋಷ್ಠಿಯಲ್ಲಿ ಎಂ.ಬಿ.ಝಿರಲಿ ಮಾತನಾಡಿದರು. ಹನುಮಂತ ಕೊಂಗಾಲಿ, ಡಾ.ಬಿ.ಎಸ್.ನಾವಿ, ರಾಮಚಂದ್ರ ಜಕಾತಿ, ಸುಬ್ರಹ್ಮಣ್ಯ ಭಟ್ ಇತರರಿದ್ದರು.
Published on
ಬೆಳಗಾವಿ : ಅಕಾಡೆಮಿ ಆಫ್ ಕಂಪ್ಯಾರೇಟಿವ್ ಫಿಲಾಸಫಿ ಆ್ಯಂಡ್ ರಿಲಿಜನ್ ಶತಮಾನೋತ್ಸವ ಪ್ರಯುಕ್ತ ಎರಡು ವರ್ಷಗಳಿಂದ ಆಯೋಜಿಸಿದ್ದ ಕಾರ್ಯಕ್ರಮ ಸರಣಿಯ ಸಮಾರೋಪ ಜೂ.29ರಂದು ಬೆಳಗ್ಗೆ 11ಕ್ಕೆ ಗೋಮಟೇಶ ಕಾಲೇಜಿನ ಕೆ.ಕೆ.ವೇಣುಗೋಪಾಲ ಸಭಾಭವನದಲ್ಲಿ ಜರುಗಲಿದೆ. ಈ ಪ್ರಯುಕ್ತ ಅಂದು ಇಡೀ ದಿನ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಅಕಾಡೆಮಿ ಕಾರ್ಯದರ್ಶಿ ಎಂ.ಬಿ.ಝಿರಲಿ ತಿಳಿಸಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಾರೋಪದಲ್ಲಿ ಗುರುದೇವ ಡಾ.ಆರ್.ಡಿ.ರಾನಡೆ ರಚನೆಯ 28 ಹಾಗೂ ಎರಡು ಅನುವಾದಿತ ಕೃತಿ ಬಿಡುಗಡೆಗೊಳಿಸಲಾಗುವುದು. ಇದಕ್ಕೂ ಮೊದಲು 30 ಗ್ರಂಥಗಳನ್ನು ಪಲ್ಲಕ್ಕಿಯಲ್ಲಿಟ್ಟು ಗ್ರಂಥ ದಿಂಡಿ ಉತ್ಸವ ಮಾಡಲಾಗುವುದು ಎಂದರು.
ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಕೇಂದ್ರ ಸಚಿವ ಗಜೇಂದ್ರಸಿಂಗ ಶೇಖಾವತ್ ಕೃತಿಗಳನ್ನು ಬಿಡುಗಡೆಗೊಳಿಸುವರು. ಆರ್‌ಎಸ್‌ಎಸ್ ಅಖಿಲ ಭಾರತೀಯ ವ್ಯವಸ್ಥಾ ಪ್ರಮುಖ ಮಂಗೇಶ ಭೇಡೆ ಸಮಾರೋಪ ಭಾಷಣ ಮಾಡುವರು. ಆರ್‌ಎಸ್‌ಎಸ್ ಕರ್ನಾಟಕ ಉತ್ತರ ಪ್ರಾಂತ ಕಾರ್ಯಕಾರಿಣಿ ಸದಸ್ಯ ಅರವಿಂದರಾವ್ ದೇಶಪಾಂಡೆ, ಸಂಸದ ಜಗದೀಶ ಶೆಟ್ಟರ, ಶಾಸಕ ಅಭಯ ಪಾಟೀಲ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಗುರುದೇವ ರಾನಡೆ ಮೊಮ್ಮಗ ದೀಪಕ ಅಪ್ಟೆ, ನವದೆಹಲಿಯ ದೀನದಿಯಾಳ ಉಪಾಧ್ಯಾಯ ಶಿಕ್ಷಣ ಸಂಸ್ಥೆಯ ಡೀನ್ ಅತುಲ ಜೈನ ಪಾಲ್ಗೊಳ್ಳುವರು ಎಂದು ವಿವರಿಸಿದರು.
ರಾಣಿ ಚನ್ನಮ್ಮ ವಿವಿ ಹೊರತಂದಿರುವ ಕೃತಿ, ರಾಷ್ಟ್ರಮಟ್ಟದ ವಿಚಾರ ಸಂಕಿರಣದಲ್ಲಿ ಮಂಡಿಸಲಾದ ವಿಚಾರಗಳ ಕುರಿತಾದ ಕೃತಿ ಬಿಡುಗಡೆಗೊಳಿಸಲಾಗುತ್ತಿದೆ ಎಂದರು.
ಉಪಮೇಯರ್ ಹನುಮಂತ ಕೊಂಗಾಲಿ, ರಾಣಿ ಚನ್ನಮ್ಮ ವಿವಿ ಪ್ರಾಧ್ಯಾಪಕ ಡಾ.ಬಿ.ಎಸ್.ನಾವಿ, ರಾಮಚಂದ್ರ ಜಕಾತಿ, ಡಾ.ರಾಜೇಂದ್ರ ಮಠದ, ಶ್ರೀನಿವಾಸ ಬಿಸನಕೊಪ್ಪ, ಸುಬ್ರಹ್ಮಣ್ಯ ಭಟ್, ಸುಹಾಸ ಜೋಶಿ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net