ರಾಜಕೀಯ ಅಧಿಕಾರಕ್ಕಾಗಿ ಜಾತಿ ಜೀವಂತ

ಬೆಳಗಾವಿಯಲ್ಲಿ ಹಮ್ಮಿಕೊಂಡಿದ್ದ  ಮೊದಲ ಬೆಳಗಾವಿ ಸಾಹಿತ್ಯೋತ್ಸವವನ್ನು ಕೃತಿ ಬಿಡುಗಡೆ ಮೂಲಕ ರಾಘವೇಂದ್ರ ಪಾಟೀಲ ಉದ್ಘಾಟಿಸಿದರು. ಮಕ್ತುಂಸಾಬ್ ಹೊಸಳ್ಳಿ, ಶಿರೀಶ್ ಜೋಶಿ, ಡಾ.ಗುರುದೇವಿ ಹುಲೆಪ್ಪನವರಮಠ ಇದ್ದರು.
ಬೆಳಗಾವಿಯಲ್ಲಿ ಹಮ್ಮಿಕೊಂಡಿದ್ದ ಮೊದಲ ಬೆಳಗಾವಿ ಸಾಹಿತ್ಯೋತ್ಸವವನ್ನು ಕೃತಿ ಬಿಡುಗಡೆ ಮೂಲಕ ರಾಘವೇಂದ್ರ ಪಾಟೀಲ ಉದ್ಘಾಟಿಸಿದರು. ಮಕ್ತುಂಸಾಬ್ ಹೊಸಳ್ಳಿ, ಶಿರೀಶ್ ಜೋಶಿ, ಡಾ.ಗುರುದೇವಿ ಹುಲೆಪ್ಪನವರಮಠ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಸಾಹಿತಿ ರಾಘವೇಂದ್ರ ಪಾಟೀಲ ಕಳವಳ
  • ಚೊಚ್ಚಲ ಬೆಳಗಾವಿ ಸಾಹಿತ್ಯೋತ್ಸವ
ಬೆಳಗಾವಿ: ಸಮಾಜದಲ್ಲಿ ಹಿಂದೆಂದಿಗಿಂತಲೂ ಹೆಚ್ಚಾಗಿ ಜಾತಿ ಭೂತ ಅಕ್ರಮಿಸಿಕೊಂಡಿದೆ. ಕೆಲ ಪಟ್ಟಭದ್ರರು ರಾಜಕೀಯ ಅಧಿಕಾರಕ್ಕಾಗಿ ಜಾತಿಯತೆಯನ್ನು ಜೀವಂತವಾಗಿರಿಸಿದ್ದಾರೆ. ಇದರಿಂದ ಸಮಾಜ ವಿಘಟನೆಯತ್ತ ಸಾಗುತ್ತಿದೆ ಎಂದು ಹಿರಿಯ ಸಾಹಿತಿ ರಾಘವೇಂದ್ರ ಪಾಟೀಲ ಕಳವಳ ವ್ಯಕ್ತಪಡಿಸಿದರು.
ಪರಿಮಳ ಪ್ರಕಾಶನ ವಿವಿಧ ಸಾಹಿತ್ಯಿಕ ಸಂಸ್ಥೆಗಳ ಸಹಯೋಗದೊಂದಿಗೆ ಹಿಂದವಾಡಿಯ ಐಎಂಇಆರ್ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಚೊಚ್ಚಲ ಬೆಳಗಾವಿ ಸಾಹಿತ್ಯೋತ್ಸವವನ್ನು ಡಾ.ಗುರುದೇವಿ ಹುಲೆಪ್ಪನವರಮಠ ರಚಿಸಿರುವ ‘ರವಿವಾರಾಯ ನಮಃ’ ಕೃತಿ ಲೋಕಾರ್ಪಣೆ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಆಧುನಿಕತೆ, ತಂತ್ರಜ್ಞಾನ ಮಾನವೀಯತೆಯನ್ನು ಮರೆಯಾಗಿಸುತ್ತಿದೆ. ಮಾನವರ ಕೃತಿ ಮತ್ತು ಮಾತಿನ ನಡುವೆ ಕಂದಕ ಸೃಷ್ಟಿಯಾಗಿದೆ. ಪ್ರಕೃತಿ ಆರಾಧನೆ, ಪ್ರೀತಿ, ಅನುಕಂಪ, ಪೋಷಣೆ ಗುಣದ ಸ್ತ್ರಿಪ್ರಜ್ಞೆ ಕಡಿಮೆಯಾಗಿ, ಕ್ರೌರ್ಯ, ದಾಢಸೀತನದ ಪುರುಷ ಪ್ರಜ್ಞೆ ಹೆಚ್ಚುತ್ತಿದೆ. ಸಿನಿಮಾಗಳಲ್ಲಿ ಹಿಂಸಾರಾಧನೆ ಹೆಚ್ಚಾಗುತ್ತಿದೆ. ಚಿಕ್ಕ ಮಕ್ಕಳ ಕೈಯಲ್ಲಿ ಆಟಿಕೆಗಳು ಮಾಯವಾಗಿ ಗನ್, ನೆಲ ಅಗೆಯುವ ಮಾದರಿ ಆಟಿಕೆಗಳು ಮಕ್ಕಳ ಕೈಸೇರಿವೆ. ಈ ರಾಕ್ಷಸಿ ಪ್ರವೃತ್ತಿಯನ್ನು ನಿವಾರಿಸುವ ಔಷಧ ಸಂಗೀತ ಮತ್ತು ಸಾಹಿತ್ಯದಲ್ಲಿದ್ದು, ಮಕ್ಕಳಲ್ಲಿ ಸಂಗೀತ ಮತ್ತು ಸಾಹಿತ್ಯದ ರುಚಿ ಬೆಳೆಸಬೇಕು ಎಂದರು.
\
\ಅಧ್ಯಕ್ಷತೆ ವಹಿಸಿದ್ದ ಚಂದ್ರಕಾಂತ ಪೋಕಳೆ ಮಾತನಾಡಿ, ಬೆಳಗಾವಿ ಬಹುಭಾಷೆ ಮತ್ತು ಬಹು ಸಂಸ್ಕೃತಿಯ ನೆಲೆಯಾಗಿದೆ. ಇಲ್ಲಿನ ಭಾಷಾ ವೈಶಿಷ್ಟ್ಯ ಮತ್ತು ಸಂಸ್ಕೃತಿ ಬಗ್ಗೆ ಹೆಚ್ಚಿನ ಸಂಶೋಧನೆಗಳಾಗಬೇಕಿದೆ ಎಂದರು. ಡಾ.ಗುರುದೇವಿ ಹುಲೆಪ್ಪನವರಮಠ ಮಾತನಾಡಿದರು.
ಶಿರೀಶ್ ಜೋಶಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಮಕ್ತುಂಸಾಬ್ ಹೊಸಳ್ಳಿ ನಿರೂಪಿಸಿದರು. ಉದ್ಘಾಟನೆ ಬಳಿಕ ಪ್ರೊ.ಎಂ.ಎಸ್.ಇಂಚಲ ಉಪಸ್ಥಿತಿಯಲ್ಲಿ ಡಾ.ಪಿ.ಜಿ.ಕೆಂಪಣ್ಣವರ ಜಿಲ್ಲೆಯ ಕಾವ್ಯ ಪರಂಪರೆ ಕುರಿತು ಉಪನ್ಯಾಸ ನೀಡಿದರು.
ಮಾಧ್ಯಮಗಳ ಸಾಂಸ್ಕೃತಿಕ ಹೊಣೆ ಗೋಷ್ಠಿಯಲ್ಲಿ ಪತ್ರಕರ್ತರಾದ ಎಂ.ಕೆ.ಹೆಗಡೆ ಮತ್ತು ದೇವು ಪತ್ತಾರ ಮಾತನಾಡಿದರು. ನಾಕುತಂತಿ ಕೃತಿಗೆ ಜ್ಞಾನಪೀಠ ಲಭಿಸಿದ ಸುವರ್ಣ ಸಂಭ್ರಮ ಹಿನ್ನೆಲೆ ನಾಕುತಂತಿ ಕುರಿತು ಡಾ.ಎನ್.ಎಸ್.ಶ್ರೀಧರಮೂರ್ತಿ ಉಪನ್ಯಾಸ ನೀಡಿದರು. ಕವಿತಾ ವಾಚನ, ಸಾಹಿತಿಗಳ ಸಂಗ ಮೋಜಿನ ಪ್ರಸಂಗ, ವರ್ತಮಾನದ ರಂಗಭೂಮಿ, ನಾನು ಮತ್ತು ನನ್ನ ಪುಸ್ತಕ, ಕುವೆಂಪು ಕಾದಂಬರಿಗಳ ವಿಷಯವಾಗಿ ಗೋಷ್ಠಿಗಳು ಜರುಗಿದವು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net