ಪ್ರತಿ ಠಾಣೆಗೆ ‘ಗಾಂಜಾ ಸೇವನೆ ಪರೀಕ್ಷಾ ಕಿಟ್’

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರ ಕೆ.ರಾಮರಾಜನ್
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರ ಕೆ.ರಾಮರಾಜನ್
Published on
ಬೆಳಗಾವಿ:ಜಿಲ್ಲೆಯಲ್ಲಿ ಗಾಂಜಾ ಮಾರಾಟ, ಸೇವನೆಗೆ ಸಂಪೂರ್ಣ ಕಡಿವಾಣ ಹಾಕುವ ನಿಟ್ಟಿನಲ್ಲಿ ಎಲ್ಲ ಪೊಲೀಸ್ ಠಾಣೆಗೆ ‘ಗಾಂಜಾ ಸೇವನೆ ಪರೀಕ್ಷಾ ಕಿಟ್’ ವಿತರಣೆ ಮಾಡಲಾಗಿದೆ. ಗಾಂಜಾ ಪ್ರಕರಣದಲ್ಲಿ ಮಾರಾಟಗಾರ ಜತೆಗೆ ಸೇವನೆ ಮಾಡಿದವರ ಮೇಲೆ ಕೇಸ್ ದಾಖಲಿಸಲಾಗುತ್ತಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರ ಕೆ.ರಾಮರಾಜನ್ ಹೇಳಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರ, ಗ್ರಾಮೀಣ ಭಾಗದಲ್ಲಿ ಗಾಂಜಾ ಪ್ರಕರಣ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆ ಎಲ್ಲೆಡೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಎಲ್ಲರಿಗೂ ಕಟ್ಟುನಿಟ್ಟಿನ ನಿರ್ದೇಶನ ನೀಡಲಾಗಿದೆ. ಜಿಲ್ಲೆಯ 34 ಠಾಣೆಗಳಿಗೆ ತಲಾ 40 ರಿಂದ 50 ರಂತೆ ಒಟ್ಟು 1,550 ಗಾಂಜಾ ಸೇವನೆ ಪರೀಕ್ಷಾ ಕಿಟ್‌ಗಳನ್ನು ವಿತರಣೆ ಮಾಡಲಾಗಿದೆ. ಚಿಕ್ಕೋಡಿ, ರಾಯಬಾಗ, ಖಾನಾಪುರ ತಾಲೂಕಿನಲ್ಲಿ ಮಹಿಳೆ ಸೇರಿ ಹತ್ತು ಜನ ಮಾರಾಟಗಾರರು ಬಂಧಿಸಲಾಗಿದೆ.
ಗೋವಾ, ಮಹಾರಾಷ್ಟ್ರ , ಜಿಲ್ಲೆಯ ವಿವಿಧ ಭಾಗಗಳಿಂದ ಗಾಂಜಾ ಸಾಗಾಟ, ಮಾರಾಟಗಾರರನ್ನು ಪತ್ತೆ ಹಚ್ಚುವ ಕಾರ್ಯ ಆರಂಭಿಸಲಾಗಿದೆ. ಇಂತಹ ಪ್ರಕರಣದಲ್ಲಿ ಯಾರನ್ನು ರಕ್ಷಿಸುವ ಪ್ರಶ್ನೆಯೇ ಇಲ್ಲ. ಮಾರಾಟಗಾರರನ್ನು ಶಿಕ್ಷೆಗೆ ಒಳಪಡಿಸಲು ಸಾಕ್ಷಿಗಾಗಿ ಗಾಂಜಾ ಸೇವನೆ ಮಾಡಿದವರ ಮೇಲೆ ಕೇಸ್ ಹಾಕಲಾಗುತ್ತಿದೆ. ಒಂಂದು ವೇಳೆ ನ್ಯಾಯಾಲಯದಿಂದ ಜಾಮೀನು ಪಡೆದು ಹೊರಬಂದ ಬಳಿಕ ಮತ್ತೆ ಅಕ್ರಮ ಚಟುವಟಿಕೆ ನಡೆಸಿದರೆ ಗಡಿಪಾರು ಮಾಡಲಾಗುವುದು ಎಂದರು.
ನಗರ, ಗ್ರಾಮೀಣ ಭಾಗದಲ್ಲಿ ರಸ್ತೆ ಅಪಘಾತ ತಡೆಗಟ್ಟಲು ಮೊದಲ ಹಂತದಲ್ಲಿ ಮದ್ಯ ಸೇವಿಸಿ ವಾಹನ ಚಲಾವಣೆ ಮಾಡಿರುವುದು ಖಚಿತಪಟ್ಟರೆ ಅವರ ಮೇಲೆ ಕೊಲೆ ಕೇಸ್ ದಾಖಲು ಮಾಡಲಾಗುವುದು. ರಸ್ತೆಯ ಬದಿಯಲ್ಲಿ ದಾಬಾ, ಹೋಟೆಲ್ ಹಾಗೂ ಹಳ್ಳಿಗಳಲ್ಲಿರುವ ಕಿರಾಣಿ ಅಂಗಡಿಗಳಲ್ಲಿ ಮದ್ಯ ಮಾರಾಟ ಮಾಡುವವರನ್ನು ಬಂಧಿಸಿ ಕೇಸ್ ದಾಖಲಾಗಿಸಲಾಗುವುದು. ಜತೆಗೆ ವ್ಯಾಪಾರ ಪರವಾನಗಿ ರದ್ದುಪಡಿಸಲಾಗುತ್ತಿದೆ. ಈ ಕುರಿತು ಸಾರ್ವಜನಿಕರು ಮುಕ್ತವಾಗಿ ಮಾಹಿತಿ ಹಂಚಿಕೆ ಮಾಡುವಂತೆ ವಿನಂತಿಸಿದರು.
ಜಿಲ್ಲೆಯ್ಯದ್ಯಂತ ಮದ್ಯದ ಅಂಗಡಿ, ಹೋಟೆಲ್, ದಾಬಾಗಳ ಮಾಲೀಕರು ಕಡ್ಡಾಯವಾಗಿ ಒಳಗೆ ಮತ್ತು ಹೊರಗೆ ಸಿಸಿ ಕ್ಯಾಮೆರಾ ಅಳವಡಿಸಬೇಕು. ಮದ್ಯ ಸೇವನೆ ಮಾಡಿ ವಾಹನ ಚಲಾವನೆ ಮಾಡುವವ ಚಾಲಕರ ಮಾಹಿತಿ ನೀಡಬೇಕು. ಒಂದು ವೇಳೆ ಮದ್ಯ ಸೇವನೆ ಮಾಡಿರುವ ಚಾಲಕನಿಂದ ಅಪಘಾಥ ಸಂಭವಿಸಿದರೆ ಮದ್ಯದ ಅಂಗಡಿಗಳ ಮಾಲೀಕರ ಮೇಲೆ ಕೇಸ್ ದಾಖಲಾಗುವುದು. ಹೀಗಾಗಿ ರಸ್ತ ಅಪಘಾತ ತಡೆಗಟ್ಟಲು ಸಾರ್ವಜನಿಕರು ಪೊಲೀಸರೊಂದಿಗೆ ಕೈಜೋಡಿಸಬೇಕು ಎಂದು ಹೇಳಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net