ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಶಿಬಿರಗಳು ಪ್ರಯೋಜನಕಾರಿ

ಸವದಿ ಗ್ರಾಮದ ಸಂಗನಬಸವ ಮಠದಲ್ಲಿ ಗುರು ಮಹಾಂತ ಸ್ವಾಮೀಜಿ ಅವರನ್ನು ಸನ್ಮಾನಿಸಲಾಯಿತು. ಮಲ್ಲನಗೌಡ ಪಾಟೀಲ, ಮಲ್ಲಪ್ಪ ಅವಟಿ, ರಾಚುಗೌಡ ಪಾಟೀಲ, ಗುರುಲಿಂಗ ಗಾಳಿ, ಸಂಗನಗೌಡ ಪಾಟೀಲ, ಎಂ.ಜಿ.ದಾಸರ ಇತರರು ಇದ್ದರು.
ಸವದಿ ಗ್ರಾಮದ ಸಂಗನಬಸವ ಮಠದಲ್ಲಿ ಗುರು ಮಹಾಂತ ಸ್ವಾಮೀಜಿ ಅವರನ್ನು ಸನ್ಮಾನಿಸಲಾಯಿತು. ಮಲ್ಲನಗೌಡ ಪಾಟೀಲ, ಮಲ್ಲಪ್ಪ ಅವಟಿ, ರಾಚುಗೌಡ ಪಾಟೀಲ, ಗುರುಲಿಂಗ ಗಾಳಿ, ಸಂಗನಗೌಡ ಪಾಟೀಲ, ಎಂ.ಜಿ.ದಾಸರ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಗುರು ಮಹಾಂತ ಸ್ವಾಮೀಜಿ ಅಭಿಮತ
  • ಶಿವಾನುಭವಗೋಷ್ಠಿ, ಭಕ್ತರಿಂದ ಸನ್ಮಾನ ಸ್ವೀಕಾರ
ನಂದೇಶ್ವರ: ಲಿಂ.ಡಾ.ಮಹಾಂತ ಶಿವಯೋಗಿಗಳ ೮ನೇ ವರ್ಷದ ಪುಣ್ಯ ಸ್ಮರಣೋತ್ಸವ ಅಂಗವಾಗಿ ಮೇ ೧೬ರಿಂದ ೧೮ರವರೆಗೆ ಇಳಕಲ್ಲದಲ್ಲಿ ವಿದ್ಯಾರ್ಥಿಗಳಿಗಾಗಿ ವ್ಯಕ್ತಿತ್ವ ವಿಕಸನ ಶಿಬಿರ ಆಯೋಜಿಸಲಾಗಿದೆ ಎಂದು ಸವದಿ-ಇಳಕಲ್ಲ ಮಠದ ಗುರು ಮಹಾಂತ ಸ್ವಾಮೀಜಿ ಹೇಳಿದರು.
ಸಮೀಪದ ಸವದಿ ಗ್ರಾಮದ ಶ್ರೀ ಸಂಗನ ಬಸವ ಮಠದಲ್ಲಿ ಭಾನುವಾರ ಶಿವಾನುಭವಗೋಷ್ಠಿ ಹಾಗೂ ಬಾಗಲಕೋಟೆ ವಿವಿಯಿಂದ ಗೌರವ ಡಾಕ್ಟರೇಟ್ ಪದವಿ ಪಡೆದ ಹಿನ್ನೆಲೆಯಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ, ಕಾರ್ಯಕ್ರಮದಲ್ಲಿ ವಿವಿಧ ಪೂಜ್ಯರು, ಗಣ್ಯರು ಪಾಲ್ಗೊಳ್ಳುವರು. ಮಕ್ಕಳು ವ್ಯಕ್ತಿತ್ವ ವಿಕಸನ ಶಿಬಿರದ ಪ್ರಯೋಜನ ಪಡೆಯಬೇಕು. ಸವದಿ ಗ್ರಾಮದ ಬಸವ ಭಕ್ತರು ಅಭಿಮಾನದಿಂದ ಗೌರವಿಸಿದ್ದು ಎಂದಿಗೂ ಬೆಲೆ ಕಟ್ಟಲು ಸಾಧ್ಯವಿಲ್ಲ. ಮೂರು ದಿನಗಳು ಜರುಗುವ ಶಿಬಿರ ಮೇ ೧೯ರಂದು ಸಮಾರೋಪಗೊಳ್ಳಲಿದೆ ಎಂದರು.
ಮಲ್ಲನಗೌಡ ಪಾಟೀಲ, ಮಲ್ಲಪ್ಪ ಅವಟಿ, ರಾಚುಗೌಡ ಪಾಟೀಲ, ಗುರುಲಿಂಗ ಗಾಳಿ, ಸಂಗನಗೌಡ ಪಾಟೀಲ, ನಿವೃತ್ತ ಡಿಡಿಪಿಐ ಎಂ.ಜಿ.ದಾಸರ, ವಕೀಲರಾದ ಭೀಮನಗೌಡ ಪಾಟೀಲ, ಡಿ.ಬಿ.ಠಕಣ್ಣವರ, ರವಿ ಯಡಹಳ್ಳಿ, ಸಂಗಣ್ಣ ಗೂಗವಾಡ, ಚೆಲುವರಾಜ ರಾಜಮನೆ, ಸಂಗಪ್ಪ ಕೊಪ್ಪದ, ಪ್ರಕಾಶ ಪಾಟೀಲ, ಮಲ್ಲಿಕಾರ್ಜುನ ಠಕಣ್ಣವರ, ಮಲ್ಲಣ್ಣ ಅಥಣಿ, ತಮ್ಮಣ್ಣ ರಬಕವಿ, ಸಂಗೌಡ ಪಾಟೀಲ, ಸಿದ್ದಪ್ಪ ಸುರಗೋಣ, ಪ್ರಕಾಶ ಬಾಳಿಕಾಯಿ, ಸುರೇಶ ನೇಮಗೌಡ ಇತರರಿದ್ದರು. ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಸಂಗಣ್ಣ ಗೂಗವಾಡ ನಿರೂಪಿಸಿದರು. ಪ್ರಕಾಶ ಪಾಟೀಲ ವಂದಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net