ಒಗ್ಗಟ್ಟಿನಿಂದಲೇ ಸದೃಢ ರಾಷ್ಟ್ರ ನಿರ್ಮಾಣ

ನಗರದ ಪಾಲಿಕೆಯ ಆವರಣದಲ್ಲಿ ಶನಿವಾರ ಸ್ವಾತಂತ್ರ್ಯ ದಿನ ಪ್ರೀತಿ ಕಾಮಕರ ಧ್ವಜಾರೋಹಣ ನೆರವೇರಿಸಿದರು. ಹನಮಂತ ಕೊಂಗಾಲಿ, ಕಾರ್ತಿಕ.ಎಂ. ಇತರರಿದ್ದರು.
ನಗರದ ಪಾಲಿಕೆಯ ಆವರಣದಲ್ಲಿ ಶನಿವಾರ ಸ್ವಾತಂತ್ರ್ಯ ದಿನ ಪ್ರೀತಿ ಕಾಮಕರ ಧ್ವಜಾರೋಹಣ ನೆರವೇರಿಸಿದರು. ಹನಮಂತ ಕೊಂಗಾಲಿ, ಕಾರ್ತಿಕ.ಎಂ. ಇತರರಿದ್ದರು.
Published on

ಬೆಳಗಾವಿ:

ಜಾತಿ, ಮತಗಳ ಭೇದಭಾವ ತೊರೆದು ಭಾರತೀಯರೆಲ್ಲರೂ ಒಗ್ಗಟ್ಟಿನಿಂದ ಬದುಕಿದಾಗ ಮಾತ್ರ ಸದೃಢ ಹಾಗೂ ಆದರ್ಶ ರಾಷ್ಟ್ರ ನಿರ್ಮಾಣ ಸಾಧ್ಯ ಎಂದು ಮಹಾನಗರ ಪಾಲಿಕೆಯ ಮಹಾಪೌರ ಪ್ರೀತಿ ಕಾಮಕರ ಹೇಳಿದರು.

ನಗರದ ಪಾಲಿಕೆಯ ಆವರಣದಲ್ಲಿ ಶನಿವಾರ ನಡೆದ 80ನೇ ಸ್ವಾತಂತ್ರ್ಯ ದಿನ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಸ್ವಾತಂತ್ರ್ಯ ಹೋರಾಟದ ಇತಿಹಾಸವನ್ನು ಪ್ರತಿಯೊಬ್ಬರೂ ಅರಿತುಕೊಂಡು ದೇಶದ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದರು.
ಉಪ ಮಹಾಪೌರ ಹನಮಂತ ಕೊಂಗಾಲಿ ಮಾತನಾಡಿ, ಇಂದು ನಾವು ಅನುಭವಿಸುತ್ತಿರುವ ಸ್ವಾತಂತ್ರ್ಯವು ಕೋಟ್ಯಂತರ ದೇಶಭಕ್ತರ ತ್ಯಾಗ ಮತ್ತು ಬಲಿದಾನದ ಫಲವಾಗಿದೆ. ಸ್ವಾತಂತ್ರ್ಯ ಹೋರಾಟಗಾರರ ಆದರ್ಶಗಳನ್ನು ಮೈಗೂಡಿಸಿಕೊಂಡು ಭಾರತವನ್ನು ವಿಶ್ವಗುರುವನ್ನಾಗಿಸಲು ಪ್ರತಿಯೊಬ್ಬರೂ ಶ್ರಮಿಸಬೇಕು ಎಂದರು.
ಆಯುಕ್ತ ಕಾರ್ತಿಕ ಎಂ. ಮಾತನಾಡಿ, ದೇಶದ ಅಭಿವೃದ್ಧಿಯಲ್ಲಿ ಪ್ರತಿಯೊಬ್ಬ ನಾಗರಿಕನ ಪಾತ್ರವೂ ಮಹತ್ವದ್ದಾಗಿದೆ. ವಿಶೇಷವಾಗಿ ಯುವ ಪೀಳಿಗೆಗೆ ಉತ್ತಮ ಮಾರ್ಗದರ್ಶನದ ಅಗತ್ಯವಿದೆ. ಭಾರತವು ಬಾಹ್ಯಾಕಾಶ, ವಿಜ್ಞಾನ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಗಮನಾರ್ಹ ಪ್ರಗತಿ ಸಾಧಿಸಿ ವಿಶ್ವಕ್ಕೆ ಮಾದರಿಯಾಗುತ್ತಿದೆ ಎಂದು ಹೇಳಿದರು.
ಇದಕ್ಕೂ ಮುನ್ನ ನಗರದ ವೀರಸೌಧದಲ್ಲಿ ಆಯುಕ್ತ ಕಾರ್ತಿಕ ಎಂ. ಧ್ವಜಾರೋಹಣ ನೆರವೇರಿಸಿದರು. ಓಂಕಾರ ಅಪ್ಟೇಕರ ನೇತೃತ್ವದ ಪೌರಕಾರ್ಮಿಕರ ತಂಡ ಸಮವಸ್ತ್ರದಲ್ಲಿ ಶಿಸ್ತುಬದ್ಧವಾಗಿ ನಡೆಸಿದ ಪರೇಡ್ ಗಮನ ಸೆಳೆಯಿತು.
ಆಡಳಿತ ಪಕ್ಷದ ನಾಯಕ ಸಂತೋಷ ಪೇಡ್ನೇಕರ, ವಿರೋಧ ಪಕ್ಷದ ನಾಯಕ ಸೋಹೈಲ ಸಂಗೊಳ್ಳಿ, ಉಪ ಆಯುಕ್ತ ಡಾ. ಸಿದ್ದು ಹುಲ್ಲೋಳಿ, ಉದಯಕುಮಾರ ಟಿ.ಬಿ.,ಲಕ್ಷ್ಮೀ ನಿಪ್ಪಾಣಿಕರ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net