ಬಸವೇಶ್ವರ ಉದ್ಯಾನದಲ್ಲಿ ಕಂಚಿನ ಪ್ರತಿಮೆ ಅನಾವರಣ ಶೀಘ್ರ

 ಬೆಳಗಾವಿಯ ಬಸವೇಶ್ವರ ವೃತ್ತದ ಉದ್ಯಾನದಲ್ಲಿ ಕಂಚಿನ ಪ್ರತಿಮೆ ಪ್ರತಿಷ್ಠಾಪನೆ ಕಾಮಗಾರಿಗೆ ಶುಕ್ರವಾರ ಡಾ.ಪ್ರಭಾಕರ ಕೊರೆ ಭೂಮಿಪೂಜೆ ನೆರವೇರಿಸಿದರು.
ಬೆಳಗಾವಿಯ ಬಸವೇಶ್ವರ ವೃತ್ತದ ಉದ್ಯಾನದಲ್ಲಿ ಕಂಚಿನ ಪ್ರತಿಮೆ ಪ್ರತಿಷ್ಠಾಪನೆ ಕಾಮಗಾರಿಗೆ ಶುಕ್ರವಾರ ಡಾ.ಪ್ರಭಾಕರ ಕೊರೆ ಭೂಮಿಪೂಜೆ ನೆರವೇರಿಸಿದರು.
Published on
ಬೆಳಗಾವಿ: ನಗರದ ಬಸವೇಶ್ವರ ವೃತ್ತ(ಗೋವಾವೆಸ್ ಸರ್ಕಲ್) ಉದ್ಯಾನದಲ್ಲಿ ಪ್ರತಿಷ್ಠಾಪಿಸುವ ವಿಶ್ವಗುರು ಬಸವೇಶ್ವರರ ಪ್ರತಿವೆ ಮೂರು ವರ್ಷಗಳಿಂದ ತಯಾರಾಗಿದ್ದರೂ ಅನಿವಾರ್ಯ ಕಾರಣಾಂತರಗಳಿಂದ ಕಾಮಗಾರಿಯು ನನೆಗುದಿಗೆ ಬಿದ್ದಿತ್ತು. ಆದರೆ ಈಗ ಶೀಘ್ರವೇ ನೆರವೇರಲಿದೆ ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ರಾಷ್ಟ್ರೀಯ ಉಪಾಧ್ಯಕ್ಷ ಡಾ.ಪ್ರಭಾಕರ ಕೋರೆ ಹೇಳಿದರು.
ನಗರದ ಬಸವೇಶ್ವರ ವೃತ್ತದ ಉದ್ಯಾನದಲ್ಲಿ ನೂತನ ಕಂಚಿನ ಮೂರ್ತಿ ಪ್ರತಿಷ್ಠಾಪನೆ ಕಾಮಗಾರಿಗೆ ಶುಕ್ರವಾರ ಭೂಮಿ ಪೂಜೆಯನ್ನು ನೆರವೇರಿಸಿ ಮಾತನಾಡಿದ ಅವರು, ಸೊಲ್ಲಾಪುರದಲ್ಲಿ 15 ಅಡಿ ಎತ್ತರದ ಕಂಚಿನ ಮೂರ್ತಿ ಸಿದ್ಧಗೊಂಡಿದೆ. ಇದಕ್ಕಾಗಿ ಕೆಎಲ್ಇ ಸಂಸ್ಥೆಯು ಅಡಿಗಲ್ಲು ನಿರ್ಮಿಸಲಿದ್ದು, ಇದರ ಮೇಲೆ ಮೂರ್ತಿ ಪ್ರತಿಷ್ಠಾಪನೆಗೊಳ್ಳಲಿದೆ. ಬೆಳಗಾವಿ ಪ್ರಪ್ರಥಮ ಎತ್ತರದ ಬಸವಣ್ಣವರ ಪ್ರತಿಮೆ ಇದಾಗಲಿದೆ. ಇದು ಸಮಸ್ತ ಬಸವ ಅಭಿಮಾನಿಗಳಿಗೆ ಹೆಮ್ಮೆಯ ಸಂಗತಿ ಎಂದರು.
ಶಾಸಕ ಅಭಯ ಪಾಟೀಲ, ಮೇಯರ್ ಪ್ರೀತಿ ಕಾಮಕರ, ಉಪ ಮೇಯರ್ ಹನುಮಂತ ಕೊಂಗಾಲಿ, ವೀರಶೈವ ಲಿಂಗಾಯತ ಮಹಾಸಭೆ ಜಿಲ್ಲಾ ಅಧ್ಯಕ್ಷೆ ರತ್ನಪ್ರಭಾ ಬೆಲ್ಲದ, ಎಂ.ಬಿ.ಝಿರಲಿ, ಚಂದ್ರಶೇಖರ ಬೆಂಬಳಗಿ, ಸೋಮಲಿಂಗ ಮಾವಿನಕಟ್ಟಿ, ಜ್ಯೋತಿ ಬಾದಾಮಿ, ಶಿವನಗೌಡ ಪಾಟೀಲ, ಆರ್.ಪಿ.ಪಾಟೀಲ, ವಿ.ಕೆ.ಪಾಟೀಲ, ಮಹಾಂತೇಶ ವಕ್ಕುಂದ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net