ಮಲ್ಲಟ್ಟಿ&ಸುತಗಟ್ಟಿ ನಡುವೆ ಟಪ್ರಭಾ ನದಿಗೆ ನಿರ್ಮಿಸುತ್ತಿರುವ ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಾಣಕ್ಕೆ ಸಚಿವ ಸತೀಶ ಜಾರಕಿಹೊಳಿ ಚಾಲನೆ ನೀಡಿದರು. ಮೊಹಮ್ಮದ್ ರೋಷನ್, ಭೂಷಣ ಬೋರಸೆ, ರಾಹುಲ್ ಶಿಂಧೆ, ಪಿ.ಆರ್.ಮಲ್ಲಾಡದ, ಕಿರಣ ರಜಪೂತ ಇತರರಿದ್ದರು.
ಬೆಳಗಾವಿ: ರೈತರ ಬಹುದಿನದ ಬೇಡಿಕೆ ಮಲ್ಲಟ್ಟಿ&ಸುತಗಟ್ಟಿ ನಡುವೆ ಟಪ್ರಭಾ ನದಿಗೆ ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಾಣದಿಂದ 15ಕ್ಕೂ ಅಧಿಕ ಗ್ರಾಮಗಳ ರೈತರಿಗೆ ಅನುಕೂಲವಾಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ತಾಲೂಕಿನ ಮಲ್ಲಟ್ಟಿ&ಸುತಗಟ್ಟಿ ನಡುವೆ ಟಪ್ರಭಾ ನದಿಗೆ ಅಡ್ಡಲಾಗಿ 7.96 ಕೋಟಿ ರೂ.ವೆಚ್ಚದಲ್ಲಿ ನಿರ್ಮಿಸುತ್ತಿರುವ ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಾಣ ಕಾಮಗಾರಿಗೆ ಸೋಮವಾರ ಚಾಲನೆ ನೀಡಿ, ಈ ಬ್ರಿಡ್ಜ್ ನಿರ್ಮಾಣದಿಂದ ಮಲ್ಲಟ್ಟಿ ಮತ್ತು ಸುತಗಟ್ಟಿ ಗ್ರಾಮಗಳ ನಡುವಿನ ಸಂಪರ್ಕ ಸುಲಭವಾಗಲಿದ್ದು, ಸಾರಿಗೆ ವ್ಯವಸ್ಥೆ ಸಮಸ್ಯೆ ಬಗೆಹರಿಯಲಿದೆ. ನದಿಯಲ್ಲಿ ನೀರು ಸಂಗ್ರಹಿಸಿಟ್ಟುಕೊಳ್ಳುವುದರಿಂದ ಸುತ್ತಮುತ್ತಲಿನ ಕೃಷಿ ಭೂಮಿಗೆ ನೀರಾವರಿ ಸೌಲಭ್ಯ ಸಿಗಲಿದೆ. ಅಂತರ್ಜಲ ಹೆಚ್ಚಳವಾಗಿ ರೈತರ ಆರ್ಥಿಕ ಪ್ರಗತಿಗೂ ಸಹಕಾರಿಯಾಗಲಿದೆ ಎಂದರು.
ವಿವಿಧ ಕಾಮಗಾರಿಗೆ ಚಾಲನೆ: ಹೊಸ ವಂಟಮೂರಿ ಗ್ರಾಮದಲ್ಲಿ ಕೆಆರ್ಡಿಎಲ್ ಯೋಜನೆಯಡಿ 1 ಕೋಟಿ ರೂ. ವೆಚ್ಚದಲ್ಲಿ ಹೊಸ ವಂಟಮೂರಿ& ಮಳ್ಳೊಳ್ಳಿ ಸಂಪರ್ಕ ಕಲ್ಪಿಸುವ ಸೇತುವೆ, ಹೊಸ ವಂಟಮೂರಿ ಗ್ರಾಮದಿಂದ ಹಾಲಬಾವಿ ಐಟಿಬಿಪಿವರೆಗೆ 10 ಲ ರೂ. ವೆಚ್ಚದ ಬೀದಿ ದೀಪ ಅಳವಡಿಕೆ ಕಾಮಗಾರಿಗೆ ಜಾರಕಿಹೊಳಿ ಚಾಲನೆ ನೀಡಿದರು.