ಪ್ರಗತಿಯತ್ತ ಬೋರಗಾಂವ ಪಿಕೆಪಿಎಸ್

ಬೋರಗಾಂವನಲ್ಲಿ ಹಮ್ಮಿಕೊಂಡಿದ್ದ ವಿವಿಧೋದ್ದೇಶಗಳ ಪ್ರಾಥಮಿಕ ಗ್ರಾಮೀಣ ಕೃಷಿ ಸಂಘದ 50ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಸಂಘದ ಅಧ್ಯಕ್ಷ ಉತ್ತಮ ಪಾಟೀಲ ಮಾತನಾಡಿದರು. ಅಭಿನಂದನ ಪಾಟೀಲ, ಸುಮಿತ ರೊಡ್ಡ, ಆರ್.ಟಿ.ಚೌಗುಲೆ ಇತರರಿದ್ದರು.
ಬೋರಗಾಂವನಲ್ಲಿ ಹಮ್ಮಿಕೊಂಡಿದ್ದ ವಿವಿಧೋದ್ದೇಶಗಳ ಪ್ರಾಥಮಿಕ ಗ್ರಾಮೀಣ ಕೃಷಿ ಸಂಘದ 50ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಸಂಘದ ಅಧ್ಯಕ್ಷ ಉತ್ತಮ ಪಾಟೀಲ ಮಾತನಾಡಿದರು. ಅಭಿನಂದನ ಪಾಟೀಲ, ಸುಮಿತ ರೊಡ್ಡ, ಆರ್.ಟಿ.ಚೌಗುಲೆ ಇತರರಿದ್ದರು.
Published on

ಬೋರಗಾಂವ:

ಐದು ದಶಕಗಳಲ್ಲಿ ಬೋರಗಾಂವ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘ ಸಹಕಾರ ತತ್ತ್ವ ಮೂಲಕ ರೈತರನ್ನು ಒಟ್ಟುಗೂಡಿಸುವ ಪ್ರಯತ್ನ ಮಾಡಿದೆ. ಪಾರದರ್ಶಕ ಆಡಳಿತ, ಶಿಸ್ತು, ಸದಸ್ಯರ ವಿಶ್ವಾಸದಿಂದ ರಾಜ್ಯದ ಸಹಕಾರ ವಲಯಕ್ಕೆ ಮಾದರಿಯಾಗಿದೆ ಎಂದು ಸಂಘದ ಅಧ್ಯಕ್ಷ ಉತ್ತಮ ಪಾಟೀಲ ಹೇಳಿದರು.

ಪಟ್ಟಣದ ಅರಿಹಂತ ಸಭಾಗೃಹದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸಂಘದ 50ನೇ ವಾರ್ಷಿಕ ಸಭೆಯಲ್ಲಿ ಮಾತನಾಡಿ, ಸಹಕಾರ ಕ್ಷೇತ್ರ ಗ್ರಾಮೀಣಾಭಿವೃದ್ಧಿಗೆ ಪರಿಣಾಮಕಾರಿ ಸಾಧನವಾಗಿದೆ. ಕಳೆದ ಐವತ್ತು ವರ್ಷಗಳಿಂದ ರೈತರ ಆರ್ಥಿಕ ಉನ್ನತಿಗಾಗಿ ಪ್ರಯತ್ನಿಸುತ್ತಿದ್ದೇವೆ. ಇಂದು ಕೃಷಿ ಎದುರು ಹಲವಾರು ಸವಾಲುಗಳಿದ್ದು, ಬದಲಾಗುತ್ತಿರುವ ಹವಾಮಾನ, ಹೆಚ್ಚುತ್ತಿರುವ ಉತ್ಪಾದನಾ
ವೆಚ್ಚ, ಮಾರುಕಟ್ಟೆ ಬೆಲೆಗಳಲ್ಲಿನ ಏರಿಳಿತ ಮತ್ತು ಆಧುನಿಕ ತಂತ್ರಜ್ಞಾನದ ಅಗತ್ಯ ಪರಿಗಣಿಸಿ ರೈತರನ್ನು ಸಬಲೀಕರಣಗೊಳಿಸಬೇಕಾಗಿದೆ ಎಂದರು.
ಸಂಸ್ಥೆ ಬೆಳಗಾವಿ ಜಿಲ್ಲೆಯಲ್ಲಿ ಮೊದಲ ಸ್ಥಾನದಲ್ಲಿದೆ. 3,068 ಸದಸ್ಯರು, 2.62 ಕೋಟಿ ರೂ. ಷೇರು ಬಂಡವಾಳ, 12 ಕೋಟಿ 33 ಲಕ್ಷ ರೂ. ನಿಧಿಗಳು, 66.46 ಕೋಟಿ ರೂ. ಠೇವಣಿ, 5.60 ಕೋಟಿ ರೂ. ಗುಂತಾವಣೆ, 52.72 ಕೋಟಿ ರೂ. ಸಾಲ ವಿತರಿಸಿ, 1.63 ಕೋಟಿ ರೂ. ಲಾಭ ಗಳಿಸಿದೆ ಎಂದು ಹೇಳಿದರು.
ಸಂಘದ ಸಿಇಒ ಆರ್.ಟಿ.ಚೌಗುಲೆ ಲಾಭ-ನಷ್ಟ ವರದಿಗೆ ಮಂಜೂರಾತಿ ಪಡೆದರು. ಅರಿಹಂತ ಸಂಸ್ಥೆ ಅಧ್ಯಕ್ಷ ಅಭಿನಂದನ ಪಾಟೀಲ, ಉಪಾಧ್ಯಕ್ಷ ಸುಮಿತ ರೊಡ್ಡ, ನಿರ್ದೇಶಕರಾದ ರಾಜೇಂದ್ರ ಪಾಟೀಲ, ಪ್ರದೀಪ ಮಾಳಿ, ರಾಜೇಂದ್ರ ಐದಮಾಳೆ, ಪ್ರವೀಣ ಪಾಟೀಲ, ಸುನೀತಾ ಬಂಕಾಪುರೆ, ಪ್ರಜಕ್ತಾ ಪಾಟೀಲ, ತೈಮೂರ್
ಮುಜಾವರ್, ರಾಜು ಗಜರೆ, ಅಶೋಕ ಬಂಕಾಪುರೆ, ನಿರಂಜನ ಪಾಟೀಲ, ಸಹಾಯಕ ವ್ಯವಸ್ಥಾಪಕ ರಾಕೇಶ ಫಿರ್ಗನವರ ಇತರರಿದ್ದರು. ಸಚಿನ ಹಂಚನಾಳೆ ನಿರೂಪಿಸಿದರು. ರಾವಸಾಬ ಸಾವಂತ ವಂದಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net