ಜಿಲ್ಲಾ ನ್ಯಾಯಾಲಯಕ್ಕೆ ಬಾಂಬ್ ಬೆದರಿಕೆ

ಬೆಳಗಾವಿ ನ್ಯಾಯಾಲಯ ಆವರಣದಲ್ಲಿ ಮಂಗಳವಾರ ಶ್ವಾನ ದಳದಿಂದ ಬಾಂಬ್ ಪತ್ತೆ ಕಾರ್ಯ ಕೈಗೊಳ್ಳಲಾಯಿತು
ಬೆಳಗಾವಿ ನ್ಯಾಯಾಲಯ ಆವರಣದಲ್ಲಿ ಮಂಗಳವಾರ ಶ್ವಾನ ದಳದಿಂದ ಬಾಂಬ್ ಪತ್ತೆ ಕಾರ್ಯ ಕೈಗೊಳ್ಳಲಾಯಿತು
Published on
ಬೆಳಗಾವಿ : ಇಲ್ಲಿನ ಜಿಲ್ಲಾ ನ್ಯಾಯಾಲಯದಲ್ಲಿ ಬಾಂಬ್ ಇರಿಸಿರುವುದಾಗಿ ನಗರ ಪೊಲೀಸ್ ಆಯುಕ್ತರ ಕಚೇರಿಗೆ ಈಮೇಲ್ ಬಂದ ಹಿನ್ನೆಲೆ ಮಂಗಳವಾರ ತಪಾಸಣೆ ನಡೆಸಲಾಯಿತು.
ಜಿಲ್ಲಾ ನ್ಯಾಯಾಲಯದಲ್ಲಿ ಬಾಂಬ್ ಇಟ್ಟಿರುವುದಾಗಿ ಮೇಲ್ ಬಂದ ತಕ್ಷಣವೇ ಡಿಸಿಪಿ ನಾರಾಯಣ ಬರಮನಿ ನೇತೃತ್ವದಲ್ಲಿ ಬಾಂಬ್ ಪತ್ತೆ ದಳ ಮತ್ತು ಶ್ವಾನ ದಳ ಸಿಬ್ಬಂದಿ ಸ್ಥಳಕ್ಕಾಗಮಿಸಿ ನ್ಯಾಯಾಲಯ ಸಂಕೀರ್ಣವನ್ನು ಇಂಚಿಂಚು ತಪಾಸಿದರು. ಈ ವೇಳೆ ಕಲಾಪಗಳಿಗೆ ವಿರಾಮ ನೀಡಲಾಗಿತ್ತು. ಎಲ್ಲೂ ಬಾಂಬ್ ಇರುವಿಕೆ ಪತ್ತೆಯಾಗಲಿಲ್ಲ. ಇದೊಂದು ಹುಸಿ ಬಾಂಬ್ ಕರೆ ಎಂದು ನಿರ್ಧರಿಸಲಾಯಿತು. ಬಳಿಕ ಕಲಾಪಗಳು ಎಂದಿನಂತೆ ಮುಂದುವರೆದವು.
ನಮ್ಮ ಕಚೇರಿಗೆ ಮೇಲ್ ಬಂದ ತಕ್ಷಣವೇ ಕೋರ್ಟ್‌ಗೆ ತೆರಳಿ ತಪಾಸಿಸಿದ್ದೇವೆ. ಯಾವುದೇ ಸ್ಪೋಟಕ ವಸ್ತು ಪತ್ತೆಯಾಗಿಲ್ಲ. ಮೇಲ್ ಮಾಡಿದವರನ್ನು ಪತ್ತೆ ಮಾಡುವ ಕಾರ್ಯ ಪ್ರಗತಿಯಲ್ಲಿದೆ ಎಂದು ಡಿಸಿಪಿ ನಾರಾಯಣ ಬರಮನಿ ವಿಜಯವಾಣಿಗೆ ತಿಳಿಸಿದರು.
.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net