ಸಾವಿನಲ್ಲೂ ಸಾರ್ಥಕ್ಯ ಮೇರೆದ ಲಿಂಗರಾಜ ಪಾಟೀಲ

ಸಾವಿನಲ್ಲಿ ಸಾರ್ಥಕತೆ ಮೆರೆದ ಲಿಂಗರಾಜ ಪಾಟೀಲ
ಸಾವಿನಲ್ಲಿ ಸಾರ್ಥಕತೆ ಮೆರೆದ ಲಿಂಗರಾಜ ಪಾಟೀಲ
Published on

ಪ್ರಮುಖ ಮುಖ್ಯಾಂಶಗಳು

  • ಸಾವಿನಲ್ಲಿ ಸಾರ್ಥಕ್ಯ ಮೆರೆದ ಬ್ಯಾಂಕ್ ನೌಕರ
  • ಚಿಕ್ಕೋಡಿ ತಾಲೂಕಿನ ಸಿದ್ಧಾಪೂರವಾಡಿ ಲಿಂಗರಾಜ ಪಾಟೀಲ ದೇಹದಾನ
  • ಮೃತರ ಇಚ್ಛೆಯಂತೆ ಮೃತದೇಹ ಆಸ್ಪತ್ರೆಗೆ ಹಸ್ತಾಂತರ
ಸಾವಿನಲ್ಲಿಯೂ ಸಾರ್ಥಕತೆ ಮರೆದ ಲಿಂಗರಾಜ ಪಾಟೀಲ
ವಿಜಯವಾಣಿ ಸುದ್ದಿಜಾಲ ಚಿಕ್ಕೋಡಿ:

ತಾಲೂಕಿನ ಸಿದ್ಧಾಪೂರವಾಡಿ ಗ್ರಾಮದ ನಿವಾಸಿ ನಿವೃತ್ತ ಬ್ಯಾಂಕ್ ನೌಕರರಾಗಿದ್ದ ಲಿಂಗರಾಜ ಅಪ್ಪಯ್ಯಗೌಡ ಪಾಟೀಲ(೬೮) ಸಾವಿನಲ್ಲಿಯೂ ಸಾರ್ಥಕತೆ ಮೆರೆದಿದ್ದಾರೆ.
ಲಿಂಗರಾಜ ಪಾಟೀಲ ಸೋಮವಾರ ನಿಧನಹೊಂದಿದ್ದಾರೆ. ಮೃತರ ಇಚ್ಛೆಯಂತೆ ಮೃತದೇಹವನ್ನು ಬೈಲಹೊಂಗಲ ಡಾ.ರಾಮಣ್ಣವರ ಚಾರಿಟೆಬಲ್ ಮೂಲಕ ಬೆಳಗಾವಿ ಕೆಎಲ್‌ಇ ಸಂಸ್ಥೆಯ ಬಿ.ಎಂ ಕಂಕಣವಾಡಿ ಆಯರ್ವೇದ ವೈದ್ಯಕೀಯ ಮಹಾವಿದ್ಯಾಲಯಕ್ಕೆ ಕುಟುಂಬಸ್ಥರು ದಾನ ಮಾಡಿದರು.
ಟ್ರಸ್ಟಿನ ಕಾರ್ಯದರ್ಶಿ ಡಾ.ಮಹಾಂತೇಶ ರಾಮಣ್ಣವರ, ಸುನೀತಾ ಪಾಟೀಲ, ರಾಜಶೇಖರ ಪಾಟೀಲ, ಮಹೇಶ ಪಾಟೀಲ, ಲಕ್ಷ್ಮಿ ಪಿರಾಜೆ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net