ಅಥಣಿ ಗ್ರಾಮೀಣ: ಅಥಣಿ ತಾಲೂಕಿನ ಶಿನಾಳ ಗ್ರಾಮದ ಅಗ್ರಾಣಿ ಹಳ್ಳದಲ್ಲಿ ಬುಧವಾರ ವೃದ್ಧನ ಶವ ಪತ್ತೆಯಾಗಿದೆ. ತಾಲೂಕಿನ ಶಿನಾಳ ಗ್ರಾಮದ ಬಾಳಾಸಾಹೇಬ ಪಾಟೀಲ (68) ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ. ಇವರು ಮಾನಸಿಕ ಅಸ್ವಸ್ಥರಾಗಿದ್ದು, ಡಿ.7ರಂದು ಮನೆಯಿಂದ ಹೋದವರು ಮರಳಿ ಬಂದಿರಲಿಲ್ಲ ಎಂದು ದೂರು ದಾಖಲಿಸಿಕೊಂಡಿರುವ ಅಥಣಿ ಠಾಣೆ ಎಎಸ್‌ಐ ಪಿ.ಜಿ.ಸಾವೋಜಿ, ತನಿಖಾಸಹಾಯಕ ಶ್ರೀನಾಥ ಅವಟಿ ತಿಳಿಸಿದ್ದಾರೆ.