ಈ ಬಗ್ಗೆ ನಗರ ಪೊಲೀಸ್ ಆಯುಕ್ತ ಭೂಷಣ ಬೋರಸೆ ಪ್ರತಿಕ್ರಿಯೆಸಿದ್ದು, ರಾಯಣ್ಣನ ಪ್ರತಿಮೆಗೆ ಯಾರೋ ಏನೋ ಹಾಕಿದ್ದಾರೆ ಎಂಬ ದೂರು ನಮಗೆ ಬಂದಿದೆ. ತಕ್ಷಣ ಎಲ್ಲಾ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಬಂದೋಬಸ್ತ್ ವಹಿಸಿದ್ದಾರೆ. ಪ್ರತಿಮೆ ಸ್ಥಳದಿಂದ ಮಾದರಿಯನ್ನು ಸಂಗ್ರಹಿಸಲಾಗಿದೆ. ವಿಧಿವಿಜ್ಞಾನ ತಂಡವೂ ಸ್ಥಳಕ್ಕೆ ಭೇಟಿ ನೀಡಿದೆ. ಪ್ರತಿಮೆಯಿಂದ ಕೇವಲ 10 ಮೀ ದೂರದಲ್ಲಿ ಸಿಸಿಟಿವಿ ಇದೆ. ನಮ್ಮ ತಂಡವು ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದೆ. ನಾವು ದೂರು ಪಡೆದುಕೊಡಿದ್ದು ತನಿಖೆ ಪ್ರಗತಿಯಲ್ಲಿದೆ ಎಂದು ತಿಳಿಸಿದ್ದಾರೆ.