ಜನಪರ ಆಡಳಿತದಿಂದ ಬಿಜೆಪಿಗೆ ಮಣೆ

ನಿಪ್ಪಾಣಿ ನಗರದಲ್ಲಿ ಪಾಲಿಕೆ ವತಿಯಿಂದ ರಸ್ತೆ ಅತಿಕ್ರಮಣ ತೆರವುಗೊಳಿಸಲಾಯಿತು.
ನಿಪ್ಪಾಣಿ ನಗರದಲ್ಲಿ ಪಾಲಿಕೆ ವತಿಯಿಂದ ರಸ್ತೆ ಅತಿಕ್ರಮಣ ತೆರವುಗೊಳಿಸಲಾಯಿತು.
Published on
ಹುಕ್ಕೇರಿ: ಅಸ್ಸಾಂ, ಪುದುಚೇರಿ ರಾಜ್ಯಗಳಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಜನಪರ ಹಾಗೂ ಅಭಿವೃದ್ಧಿ ಕಾರ್ಯಗಳೇ ಕಾರಣ ಎಂದು ಶಾಸಕ ನಿಖಿಲ ಕತ್ತಿ ಹೇಳಿದರು.
ಸ್ಥಳೀಯ ಪಿಕಾರ್ಡ್ ಬ್ಯಾಂಕ್ ಆವರಣದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಟಿಎಂಸಿ ಪಕ್ಷದ ದುರಾಡಳಿತ, ಜನ ವಿರೋಧಿ ನೀತಿ ಮತ್ತು ಗುಂಡಾಗಿರಿಗೆ ಬೇಸತ್ತ ಪಶ್ಚಿಮ ಬಂಗಾಳ ಮತದಾರರು ಬಿಜೆಪಿಗೆ ಮಣೆ ಹಾಕಿದ್ದಾರೆ. ಜನಪರ ಆಡಳಿತವನ್ನು ಮತದಾರರು ಬೆಂಬಲಿಸುತ್ತಾರೆ ಎಂಬುವುದಕ್ಕೆ ಅಸ್ಸಾಂ ಮತ್ತು ಪುದಿಚೇರಿ ಚುನಾವಣಾ ಫಲಿತಾಂಶ ಸ್ಪಷ್ಟ ನಿದರ್ಶನವಾಗಿದೆ. ತಮಿಳುನಾಡು ಮತ್ತು ಪಶ್ಚಿಮ ಬಂಗಾಳದಲ್ಲಿ ಆಡಳಿತ ಪಕ್ಷಗಳನ್ನು ಜನರು ತಿರಸ್ಕರಿಸಿದ್ದಾರೆ. ದಬ್ಬಾಳಿಕೆ ಹಾಗೂ ದುರಾಡಳಿತಕ್ಕೆ ತಕ್ಕ ಫಲವನ್ನು ಅಲ್ಲಿನ ಆಡಳಿತ ಪಕ್ಷಗಳು ಅನುಭವಿಸಿವೆ. ಈ ಫಲಿತಾಂಶದಂತೆ ಕರ್ನಾಟಕದ ಮತದಾರರು ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ತಿರಸ್ಕರಿಸಲಿದ್ದಾರೆ ಎಂದರು. ಬಿಜೆಪಿ ಕಾರ್ಯಕರ್ತರೊಂದಿಗೆ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡರು.
ಬಿಜೆಪಿ ಮುಖಂಡರಾದ ರಾಚಯ್ಯ ಹಿರೇಮಠ, ಸತ್ಯಪ್ಪ ನಾಯಿಕ, ರಾಯಪ್ಪ ಡೂಗ, ಗುರುರಾಜ ಕುಲಕರ್ಣಿ, ಶೀತಲ ಬ್ಯಾಳಿ, ಭೀಮಗೌಡ ಗಿರಿಗೌಡನವರ, ಬಾಹುಬಲಿ ನಾಗನೂರಿ, ಚನ್ನಪ್ಪ ಗಜಬರ, ಶಿವನಗೌಡ ಪಾಟೀಲ, ರಾಜು ಮುನ್ನೋಳಿ, ಮಹಾಂತೇಶ ತಳವಾರ, ಶಹಜಾನ್ ಬಡಗಾಂವಿ, ರತ್ನಾಕರ ಗೋಣಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net