ಗೃಹಲಕ್ಷ್ಮಿ ಹಣ ದುರ್ಬಳಕೆ ಪಕ್ಕಾ: ಬಿಜೆಪಿ ಪ್ರತಿಭಟನೆ

ಬೆಳಗಾವಿ ನಗರದ ಚನ್ನಮ್ಮ ವೃತ್ತದಲ್ಲಿ ಶುಕ್ರವಾರ ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ಗೀತಾ ಸುತಾರ, ಶಿಲ್ಪಾ ಕೇಕರೆ, ದೀಪಾ ಕುಡಚಿ ಇತರರಿದ್ದರು.
ಬೆಳಗಾವಿ ನಗರದ ಚನ್ನಮ್ಮ ವೃತ್ತದಲ್ಲಿ ಶುಕ್ರವಾರ ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ಗೀತಾ ಸುತಾರ, ಶಿಲ್ಪಾ ಕೇಕರೆ, ದೀಪಾ ಕುಡಚಿ ಇತರರಿದ್ದರು.
Published on
ಬೆಳಗಾವಿ: ರಾಜ್ಯ ಸರ್ಕಾರದ ಗೃಹಲಕ್ಷಿ$್ಮ ಯೋಜನೆಯ ಫೆಬ್ರವರಿ, ಮಾರ್ಚ್​ ತಿಂಗಳ ಬಾಕಿ ಹಣ ಬಿಡುಗಡೆಗೆ ಆಗ್ರಹಿಸಿ ಶುಕ್ರವಾರ ನಗರದ ಚನ್ನಮ್ಮ ವೃತ್ತದಲ್ಲಿ ಬಿಜೆಪಿ ಮಹಿಳಾ ಮೋರ್ಚಾ ಕಾರ್ಯಕರ್ತೆಯರು ಪ್ರತಿಭಟನೆ ನಡೆಸಿದರು.
ನಗರದ ಚನ್ನಮ್ಮ ವೃತ್ತದಲ್ಲಿ ಬಿಜೆಪಿ ಮಹಿಳಾ ಮೋರ್ಚಾದ ನೂರಾರು ಕಾರ್ಯಕರ್ತೆಯರು, "ಅಕ್ಕಾ ತಿಂದಿದ್ದು ಪಕ್ಕಾ', "ಅಕ್ಕ ಅಕ್ಕ ಎಲ್ಲಿದಾವ ರೊಕ್ಕ', "ಗೃಹಲಕ್ಷ್ಮಿ ಅಕ್ಕ ರೊಕ್ಕ ಕೊಡು', "ಕೃಷ್ಣಪ್ಪ ಸರ್ಕಾರಿ ಜಾಗ ಬಿಡು' ಎಂದು ಉಲ್ಲೇಖಿಸಿದ್ದ ಭಿತ್ತಿಪತ್ರಗಳನ್ನು ಪ್ರದರ್ಶಿಸಿ ಗೃಹಲಕ್ಷಿ$್ಮ ಹಣ ಮಹಿಳೆಯರು ಕೈ ಸೇರುವ ಬದಲು ಸರ್ಕಾರದ ಪ್ರಚಾರಕ್ಕೆ ಬಳಕೆಯಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷಿ$್ಮ ಹೆಬ್ಬಾಳ್ಕರ್​ ಗೃಹಲಕ್ಷ್ಮಿ ಯೋಜನೆ ಕುರಿತು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ. ಯೋಜನೆಯ ಸಾವಿರಾರೂ ಕೋಟಿ ರೂ. ಹಣ ದುರ್ಬಳಕೆಯಾಗಿದೆ. ಸರಿಯಾದ ಲೆಕ್ಕ ಕೊಡುವಲ್ಲಿ ವಿಫಲವಾಗಿರುವ ಸಚಿವೆ ರಾಜೀನಾಮೆ ನೀಡಬೇಕು. ಬಾಕಿ ಉಳಿಸಿಕೊಂಡಿರುವ ಎರಡು ತಿಂಗಳು ಹಣ ಬಿಡುಗಡೆ ಮಾಡಬೇಕು. ಇಲ್ಲದಿದ್ದರೆ ರಾಜ್ಯದಾದ್ಯಂತ ಉಗ್ರ ಹೋರಾಟ ನಡೆಸುತ್ತೇವೆ ಎಂದು ಎಚ್ಚರಿಸಿದರು.
ಬಿಜೆಪಿ ನಗರದ ಟಕದ ಅಧ್ಯಕ್ಷೆ ಗೀತಾ ಸುತಾರ, ಮಹಿಳಾ ಮೋರ್ಚಾ ಅಧ್ಯಕ್ಷೆ ಶಿಲ್ಪಾ ಕೇಕರೆ, ದೀಪಾ ಕುಡಚಿ, ಪಾಲಿಕೆ ಸದಸ್ಯರಾದ ಸವಿತಾ ಕಾಂಬಳೆ, ರೇಷ್ಮಾ ಪಾಟೀಲ, ಸಾರಿಕಾ ಪಾಟೀಲ, ಶೀಲಾ ಗಡಕರಿ, ಸವಿತಾ ಗುಡ್ಡಾಕಾಯ, ಇಂದಿರಾ ಬಾಳಿಕಾಯಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net