19ರಂದು ಬಿಜೆಪಿ ಕಾರ್ಯಕಾರಿಣಿ

ಬೆಳಗಾವಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಬಿ.ವೈ.ವಿಜಯೇಂದ್ರ ಮಾತನಾಡಿದರು. ಮಹಾದೇವಪ್ಪ ಯಾದವಾಡ, ಡಾ.ವಿಶ್ವನಾಥ ಪಾಟೀಲ, ಅನಿಲ ಬೆನಕೆ, ಸುಭಾಷ ಪಾಟೀಲ, ಮುರುೇಂದ್ರಗೌಡ ಪಾಟೀಲ, ಗೀತಾ ಸುತಾರ ಇತರರಿದ್ದರು.
ಬೆಳಗಾವಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಬಿ.ವೈ.ವಿಜಯೇಂದ್ರ ಮಾತನಾಡಿದರು. ಮಹಾದೇವಪ್ಪ ಯಾದವಾಡ, ಡಾ.ವಿಶ್ವನಾಥ ಪಾಟೀಲ, ಅನಿಲ ಬೆನಕೆ, ಸುಭಾಷ ಪಾಟೀಲ, ಮುರುೇಂದ್ರಗೌಡ ಪಾಟೀಲ, ಗೀತಾ ಸುತಾರ ಇತರರಿದ್ದರು.
Published on
ಬೆಳಗಾವಿ: ಬೆಂಗಳೂರಿನ ಅರಮನೆ ಮೈದಾನದ ಗಾಯತ್ರಿ ಗ್ರಾೃಂಡ್‌ನಲ್ಲಿ ಫೆ.19ರಂದು ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆ ಆಯೋಜಿಸಲಾಗಿದೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪಕ್ಷ ಸಂಘಟನೆ ಜತೆಗೆ ತಾಪಂ, ಜಿಪಂ, ಗ್ರೇಟರ್ ಬೆಂಗಳೂರು ಹಾಗೂ ವಿವಿಧ ಉಪಚುನಾವಣೆಗಳು, ವಿಧಾನ ಪರಿಷತ್ ಸದಸ್ಯ ಸ್ಥಾನಗಳ ಬಗ್ಗೆ ಚರ್ಚಿಸಲಾಗುವುದು. ಸಭೆಯನ್ನು ಕೇಂದ್ರದ ಪ್ರಮುಖ ಸಚಿವರೊಬ್ಬರು ಉದ್ಘಾಟಿಸುವರು. ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ ಸಮಾರೋಪ ಭಾಷಣ ಮಾಡುವರು ಎಂದರು.
ಲೆಕ್ಕ ಕೊಡಲಿ: ಬೇರೆ ರಾಜ್ಯಕ್ಕೆ ವಾಲ್ಮೀಕಿ ನಿಗಮದ ಹಣ ಬಳಸಿದ ರೀತಿಯಲ್ಲೇ ಗೃಹಲಕ್ಷ್ಮಿಯ ಐದು ಸಾವಿರ ಕೋಟಿ ರೂ. ಬಳಸಿದಂತಿದೆ. ಹಣಕಾಸು ಖಾತೆ ಹೊಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಳಗಾವಿ ಮತ್ತು ಬೆಂಗಳೂರು ಅಧಿವೇಶನದಲ್ಲೂ ಈ ಬಗ್ಗೆ ಲೆಕ್ಕಕೊಟ್ಟಿಲ್ಲ. ಇದಕ್ಕೆ ಶೀಘ್ರ ಉತ್ತರ ಕೊಡಬೇಕು. ಗೃಹಲಕ್ಷ್ಮಿ ಯೋಜನೆ ನಿಧಿ ವಿಷಯ ಇಲ್ಲಿಗೇ ಕೈಬಿಡುವುದಿಲ್ಲ. ಈ ವಿಚಾರದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಬಗ್ಗೆ ಯಾವುದೇ ಮೃದು ಧೋರಣೆ ಇಲ್ಲ. ಈ ಇಲಾಖೆಯಿಂದ ಕೇಂದ್ರಕ್ಕೆ ನಕಲಿ ದಾಖಲೆ ಸಲ್ಲಿಸಿರುವುದು ಗಮನಕ್ಕೆ ಬಂದಿದೆ. ಅದರ ವಿರುದ್ಧವೂ ಶೀಘ್ರ ಹೋರಾಟ ಮಾಡುತ್ತೇವೆ ಎಂದರು.
ಮಾಜಿ ಶಾಸಕರಾದ ಮಹಾದೇವಪ್ಪ ಯಾದವಾಡ, ಡಾ.ವಿಶ್ವನಾಥ ಪಾಟೀಲ, ಅನಿಲ ಬೆನಕೆ, ಗ್ರಾಮೀಣ ಜಿಲ್ಲಾಧ್ಯಕ್ಷ ಸುಭಾಷ ಪಾಟೀಲ, ರಾಜೇಂದ್ರ ಹರಕುಣಿ, ಗೀತಾ ಸುತಾರ, ಮುರುೇಂದ್ರಗೌಡ ಪಾಟೀಲ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net