ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಂತೋಷ ಅವರೊಂದಿಗೆ ಜಾರಕಿಹೊಳಿ ಚರ್ಚೆ

ನಗರದ ಖಾಸಗಿ ಹೋಟೆಲ್‌ನಲ್ಲಿ ಬಿ.ಎಲ್.‌ಸಂತೋಷ ಅವರನ್ನು ಜಾರಕಿಹೊಳಿ‌, ಈರಣ್ಣಾ ಕಡಾಡಿ, ಮಹಾಂತೇಶ ಕವಟಗಿಮಠ ಬರಮಾಡಿಕೊಂಡರು..
ನಗರದ ಖಾಸಗಿ ಹೋಟೆಲ್‌ನಲ್ಲಿ ಬಿ.ಎಲ್.‌ಸಂತೋಷ ಅವರನ್ನು ಜಾರಕಿಹೊಳಿ‌, ಈರಣ್ಣಾ ಕಡಾಡಿ, ಮಹಾಂತೇಶ ಕವಟಗಿಮಠ ಬರಮಾಡಿಕೊಂಡರು..
Published on
ಬೆಳಗಾವಿ : ನಗರದ ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಮಂಗಳವಾರ ಬೆಳಗಾವಿ ನಗರಕ್ಕೆ ಆಗಮಿಸಿರುವ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ ಅವರೊಂದಿಗೆ ಶಾಸಕ, ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ‌ ಮಾತುಕತೆ ನಡೆಸಿದರು.
ಇದಕ್ಕು‌ಮೊದಲು ನಗರದಲ್ಲಿ ಶಾಸಕ ಬಾಲಚಂದ್ರ ಜಾರಕಿಹೊಳಿ  ಬರಮಾಡಿಕೊಂಡರು.
ನಂತರ ಬಿಜೆಪಿ ಸ್ಥಳೀಯ ಮುಖಂಡರು, ಶಾಸಕರೊಂದಿಗೆ  ಉಪಹಾರ ಸೇವಿಸಿದ ಬಿ.ಎಲ್. ಸಂತೋಷ ಅವರು ರಾಜಕೀಯ ಬೆಳವಣಿಗೆ ಹಾಗೂ ಜಿಲ್ಲೆಯ ವಿದ್ಯಮಾನಗಳ ಕುರಿತು ಮಾಹಿತಿ ಪಡೆದುಕೊಂಡರು. 
ರಾಜ್ಯಸಭಾ ಸದಸ್ಯ ಈರಪ್ಪ ಕಡಾಡಿ,  ಶಾಸಕ ಅಭಯ ಪಾಟೀಲ, ಬೆಳಗಾವಿ ವಿಭಾಗೀಯ ಉಸ್ತುವಾರಿ ಸಂಜಯ ಪಾಟೀಲ, ಮಾಜಿ ಶಾಸಕರಾದ ಅನಿಲ ಬೆನಕೆ, ಜಗದೀಶ ಮೆಟಗುಡ್ಡ, ವಿಧಾನ ಪರಿಷತ್ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ,  ಬೆಳಗಾವಿ ಗ್ರಾಮಾಂತರ ಜಿಲ್ಲಾಧ್ಯಕ್ಷ ಸುಭಾಸ ಪಾಟೀಲ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net