ಬಾವಿಯಲ್ಲಿ ಬಿದ್ದು ಬೈಕ್ ಸವಾರ ಸಾವು

ಸವಾರ ಸಾವು
ಸವಾರ ಸಾವು
Published on
ಅಥಣಿ ಗ್ರಾಮೀಣ: ಮೇವು ತರಲು ಬೈಕ್ ಮೇಲೆ ಹೋಗಿದ್ದ ಅಥಣಿ ತಾಲೂಕಿನ ಹಲ್ಯಾಳ ಗ್ರಾಮದ ಲಕ್ಕಪ್ಪ ಸುಬಾನ ಕೋಳಿ (50) ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಬಾವಿಯಲ್ಲಿ ಬಿದ್ದು ಮಂಗಳವಾರ ಮೃತಪಟ್ಟಿದ್ದಾರೆ.
ಅಥಣಿ ಪುರಸಭೆಯಲ್ಲಿ ವಾಟರ್‌ಮನ್ ಆಗಿ ಸೇವೆ ಸಲ್ಲಿಸುತ್ತಿದ್ದ ಲಕ್ಕಪ್ಪ ಬೆಳಗ್ಗೆ 5 ಗಂಟೆಗೆ ಕೃಷ್ಣಾ ನದಿ ತೀರದ ಪುರಸಭೆಗೆ ಸಂಬಂಧಿಸಿದ ಪಂಪ್‌ಸೆಟ್ ಪ್ರಾರಂಭಿಸಿ ಜಾನುವಾರುಗಳಿಗೆ ಮೇವು ತರಲೆಂದು ಹೊರಟಾಗ ಈ ಘಟನೆ ನಡೆದಿದೆ.
ವಿಷಯ ತಿಳಿದ ಯುವಕರು ಬಾವಿಯೊಳಗೆ ಇಳಿದು ಮೇಲೆತ್ತಲು ಯತ್ನಿಸಿದರೂ ಪ್ರಯೋಜನವಾಗಿಲ್ಲ. ಅಥಣಿ ಅಗ್ನಿಶಾಮಕ ದಳ ಸಿಬ್ಬಂದಿ ಮೃತದೇಹ ಹೊರ ತೆಗೆದಿದ್ದಾರೆ ಎಂದು ಪ್ರಕರಣ ದಾಖಲಿಸಿಕೊಂಡಿರುವ ಅಥಣಿ ಠಾಣೆ ಪೊಲೀಸರು ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net