ಇಲ್ಲಿನ ಕನ್ನಡ ಸಾಹಿತ್ಯ ಭವನದಲ್ಲಿ ಹೊಂಬೆಳಕು ಸಾಂಸ್ಕೃತಿಕ ಸಂಘ ಹಾಗೂ ಧಾರವಾಡದ ಚನ್ನಲೀಲಾ ಟ್ರಸ್ಟ್ ಸಂಯುಕ್ತ ಆಶ್ರಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ 2024ನೇ ಸಾಲಿನ ರಾಜ್ಯಮಟ್ಟದ ರಾಷ್ಟ್ರಕೂಟ ಸಾಹಿತ್ಯ ಪ್ರಶಸ್ತಿ ಹಾಗೂ ರಾಜ್ಯಮಟ್ಟದ ಚನ್ನಶ್ರೀ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಹಾವೇರಿಯ ಹಿರಿಯ ಸಾಹಿತಿ ಸಂಕಮ್ಮ ಸಂಕಣ್ಣವರ ಮಾತನಾಡಿ, ಎಲೆಮರೆಯ ಕಾಯಿಯಂತಿರುವ ಪ್ರತಿಭಾವಂತ ಸಾಧಕರನ್ನು ಪ್ರಶಸ್ತಿಗೆ ಆಯ್ಕೆ ಮಾಡಿರುವ ಸಂಘ ಹಾಗೂ ಟ್ರಸ್ಟ್ ಕಾರ್ಯ ಶ್ಲಾಘನೀಯ ಎಂದರು. ಡಾ.ಎ.ಬಿ.ವಗ್ಗರ ಅಧ್ಯಕ್ಷತೆ ವಹಿಸಿದ್ದರು. ರಾಜ್ಯಮಟ್ಟದ ಚನ್ನಶ್ರೀ ಪ್ರಶಸ್ತಿಯನ್ನು ಡಾ.ಉಜ್ವಲಾ ಹಿರೇಮಠ, ಎಂ.ಬಿ.ಗೌಡಪ್ಪನವರ, ಆರ್.ಆರ್.ಸೌದತ್ತೆ ಹಾಗೂ ರಾಜ್ಯಮಟ್ಟದ ರಾಷ್ಟ್ರಕೂಟ ಸಾಹಿತ್ಯ ಶ್ರೀ ಪ್ರಶಸ್ತಿಯನ್ನು 11 ಜನ ಕವಿ, ಸಾಹಿತಿಗಳಿಗೆ ಪ್ರದಾನ ಮಾಡಲಾಯಿತು. ಬಸವರಾಜ ಕುಪ್ಪಸಗೌಡರ ನಿರೂಪಿಸಿದರು. ಹೊಂಬೆಳಕು ಸಂಘದ ಅಧ್ಯಕ್ಷ ಸ.ರಾ.ಸುಳಕೂಡೆ, ಪ್ರೊ.ಶಶಿಕಲಾ ಪಾವಸೆ, ಚನ್ನಲೀಲಾ ಟ್ರಸ್ಟ್ ಅಧ್ಯಕ್ಷೆ ಲೀಲಾ ಕಲಕೋಟಿ ಇತರರಿದ್ದರು.