ಗೋಕಾಕ, ಬೈಲಹೊಂಗಲ, ಕಿತ್ತೂರು, ನಿಪ್ಪಾಣಿ, ಚಿಕ್ಕೋಡಿ, ಅಥಣಿ, ರಾಯಬಾಗ, ರಾಮದುರ್ಗ ತಾಲೂಕಿನ ನಗರಸಭೆ, ಪುರಸಭೆಗಳಲ್ಲಿ ನಿತ್ಯ 15 ರಿಂದ 20 ಟನ್ ಉತ್ಪತ್ತಿಯಾಗುವ ಪ್ಲಾಸ್ಟಿಕ್ ಪ್ರತ್ಯೇಕಿಸಿ ವಿಲೇವಾರಿ ಮಾಡುವುದು ದೊಡ್ಡ ಸವಾಲಿನ ಕೆಲಸವಾಗಿದೆ. ಕೆಲವೊಮ್ಮ ಹಸಿ ತ್ಯಾಜ್ಯದ ಜತೆಗೆ ಮಿಶ್ರಣವಾಗಿ ಗೊಬ್ಬರ ರೂಪದಲ್ಲಿ ಭೂಮಿ ಸೇರ್ಪಡೆಯಾಗುತ್ತಿದೆ. ಪ್ಲಾಸ್ಟಿಕ್ ಬಳಕೆಗೆ ಕಡಿವಾಣ ಹಾಕಲು ಜಾಗೃತಿ ಅಭಿಯಾನ, ದಾಳಿ ಹಾಗೂ ದಂಡದಂತಹ ಕ್ರಮಗಳನ್ನು ಕೈಗೊಂಡಿದ್ದರೂ, ಏಕಬಳಕೆ ಪ್ಲಾಸ್ಟಿಕ್ ಬಳಕೆ ಕಡಿಮೆಯಾಗುತ್ತಿಲ್ಲ.ದಿನದಿಂದ ದಿನಕ್ಕೆ ಬಳಕೆ ಪ್ರಮಾಣ ಹೆಚ್ಚಾಗುತ್ತಿದೆ. ಕೆಲವು ಕಡೆ ಪ್ಲಾಸ್ಟಿಕ್ ಉತ್ಪಾದಿಸುವಕೈಗಾರಿಕೆಗಳಿಗೆ ನೋಟೀಸ್ ನೀಡಿದರು ಪ್ರಯೋಜನವಾಗುತ್ತಿಲ್ಲ ಎಂದು ನಗರ ಸ್ಥಳೀಯ ಸಂಸ್ಥೆಯ ಪರಿಸರ ವಿಭಾಗ ಇಂಜಿನಿಯರ್‌ಗಳು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.