ಸಂಕಷ್ಟದಲ್ಲಿ ಬೆಳಗಾವಿ ಹೋಟೆಲ್ ಉದ್ಯಮ

ಗ್ಯಾಸ್ ಸಿಲಿಂಡರ್
ಗ್ಯಾಸ್ ಸಿಲಿಂಡರ್
Published on
ಬೆಳಗಾವಿ: ವಾಣಿಜ್ಯ ಬಳಕೆಯ ಗ್ಯಾಸ್ (ಸಿಲಿಂಡರ್) ಸಮರ್ಪಕ ಪೂರೈಕೆ ಇಲ್ಲದಿರುವ ಕಾರಣ ನಗರ ಸೇರಿ ಜಿಲ್ಲಾದ್ಯಂತ ಹೋಟೆಲ್ ಉದ್ಯಮ ಸಂಕಷ್ಟಕ್ಕೆ ಸಿಲುಕಿದೆ.
ಎರಡು ದಿನದಿಂದ ಗ್ಯಾಸ್ ಸಿಲಿಂಡರ್ ಪೂರೈಕೆ ಕಡಿಮೆಯಾಗಿರುವುದು ಮತ್ತು ಬುಕ್ಕಿಂಗ್ ಸ್ಥಗಿತಗೊಂಡಿರುವುದರಿಂದ ನಗರದಲ್ಲಿನ ರೆಸ್ಟೋರೆಂಟ್, ಹೋಟೆಲ್, ಧಾಬಾ, ರಸ್ತೆ ಬದಿಯ ಎಗ್‌ರೈಸ್ ಅಂಗಡಿಗಳ ಚಟುವಟಿಕೆ ಅಸ್ತವ್ಯಸ್ತಗೊಂಡಿದೆ. ಬೆಲೆಯೂ ಹೆಚ್ಚಿದ್ದರಿಂದ ಹೋಟೆಲ್ ಮಾಲೀಕರಿಗೆ ಹೊರೆಯಾಗಿದೆ.
ಈ ಮೊದಲು ಮಹಾನಗರ ಸೇರಿ ವಿವಿಧ ಭಾಗಗಳಲ್ಲಿ ದಿನಕ್ಕೆ 4ರಿಂದ 5 ಸಾವಿರ ಸಿಲಿಂಡರ್ ಪೂರೈಕೆಯಾಗುತ್ತಿದ್ದವು. ಈಗ 2ರಿಂದ 3 ಸಾವಿರ ಸಿಲಿಂಡರ್ ದೊರೆಯುತ್ತಿವೆ. ಹೀಗಾಗಿ ಕಟ್ಟಿಗೆ ಒಲೆ, ಎಲೆಕ್ಟ್ರಿಕ್ ಸ್ಟೌ ಬಳಕೆ ಮಾಡುತ್ತಿರುವುದರಿಂದ ಗ್ರಾಹಕರಿಗೆ ಎಲ್ಲ ರೀತಿಯ ಆಹಾರ ಪೂರೈಸಲು ಸಾಧ್ಯವಾಗುತ್ತಿಲ್ಲ. ಈ ಕಾರಣಕ್ಕೆ ನಿತ್ಯ ತರಕಾರಿ ಸೇರಿ ವಿವಿಧ ದವಸಧಾನ್ಯಗಳ ಖರೀದಿ ಕಡಿಮೆ ಮಾಡಲಾಗುತ್ತಿದೆ.
ಗೋವಾ, ಮಹಾರಾಷ್ಟ್ರದಿಂದ 5ರಿಂದ 10 ಸಾವಿರ ವಾಣಿಜ್ಯ ಗ್ಯಾಸ್ ಪಡೆಯಲು ಪ್ರಯತ್ನಿಸಲಾಗುತ್ತಿದೆ. ಆದರೆ, ಅಲ್ಲಿನ ಗ್ಯಾಸ್ ವಿತರಕರು ಒಪ್ಪದಿರುವ ಹಿನ್ನೆಲೆ ಸಮಸ್ಯೆ ಎದುರಾಗಿದೆ ಎಂದು ಹೋಟೆಲ್ ಮಾಲೀಕರು ತಿಳಿಸಿದ್ದಾರೆ.
"

ಬೆಳಗಾವಿ ನಗರ ಸೇರಿ ಜಿಲ್ಲಾದ್ಯಂತ 90 ಗ್ಯಾಸ್ ವಿತರಕರ ಬಳಿ 22 ಸಾವಿರ ಗೃಹಬಳಕೆ ಸಿಲಿಂಡರ್ ಮತ್ತು 3,400 ವಾಣಿಜ್ಯ ಸಿಲಿಂಡರ್ ಲಭ್ಯವಿರುವುದರಿಂದ ಗ್ಯಾಸ್ ಸಮಸ್ಯೆಇಲ್ಲ. ವಾಣಿಜ್ಯಸಿಲಿಂಡರ್ ಬೇಡಿಕೆ ಹೆಚ್ಚುತ್ತಿರುವ ಹಿನ್ನೆಲೆ ಗ್ಯಾಸ್ ಬುಕ್ಕಿಂಗ್ ಮಾಡುತ್ತಿಲ್ಲ. ನೆರೆ ರಾಜ್ಯಗಳಿಂದ ವಾಣಿಜ್ಯ ಗ್ಯಾಸ್ ಆಮದು ಮಾಡಿಕೊಳ್ಳತ್ತಿರುವ ವಿಷಯ ಗೊತ್ತಿಲ್ಲ.

"

ವಾಣಿಜ್ಯ ಸಿಲಿಂಡರ್ ಲಭ್ಯವಾಗದಿರುವ ಹಿನ್ನೆಲೆ ಪರ್ಯಾಯವಾಗಿ ಕಟ್ಟಿಗೆ ಸಂಗ್ರಹಿಸಿ ಒಲೆ ಉರಿಸುವ ಸಿದ್ಧತೆ ಮಾಡಿಕೊಳ್ಳಲಾಗಿದೆ. ಕೆಲವರು ಎಲೆಕ್ಟ್ರಿಕ್ ಸ್ಟೌ ಬಳಸುತ್ತಿದ್ದಾರೆ. ಹೀಗಾಗಿ, ಸರ್ಕಾರದ ಬೆಂಬಲಕ್ಕಾಗಿ ಎದುರು ನೋಡುತ್ತಿದ್ದೇವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net