ಈಗಾಗಲೇ ಜಿಲ್ಲೆಯ್ಯದ್ಯಂತ ಬೆಳಗಾವಿ ತಾಲೂಕಿನ ಹಲಗಾ, ಧಾಮಣೆ.ಎಸ್., ರಾಯಬಾಗ ತಾಲೂಕಿನ ಕಪ್ಪಲಗುದ್ದಿ ಗ್ರಾಮದಲ್ಲಿ ಡಿಜಿಟಲ್ ಡಿಟಾಕ್ಸ್ ಜಾರಿಗೊಳಿಸಲು ಆಯಾ ಗ್ರಾಪಂ ಆಡಳಿತ ಮಂಡಳಿ ಠರಾವು ಕೈಗೊಂಡು ಜಾರಿಗೊಳಿಸಿವೆ. ಇದಕ್ಕೆ ಸರ್ಕಾರಿ ಶಾಲೆಗಳ ಎಸ್‌ಡಿಎಂಸಿ, ಖಾಸಗಿ ಶಾಲೆಗಳ ಆಡಳಿತ ಮಂಡಳಿ ಸಹ ಕೈಜೋಡಿಸಿವೆ. ಹೀಗಾಗಿ 2 ಸಾವಿರಕ್ಕೂ ಅಧಿಕ ಮಕ್ಕಳಲ್ಲಿ ಕಲಿಕಾ ಆಸಕ್ತಿ ಹೆಚ್ಚಿಸುವುದರ ಜತೆಗೆ ಪಠ್ಯೇತರ ಚಟುವಟಿಕೆಗಳಾದ ಕ್ರೀಡೆ, ಕೃಷಿ, ಪರಿಸರ ಸಂರಕ್ಷಣೆ, ಗಿಡಗಳ ಬೆಳೆಸುವುದರ ಕಡೆ ಆಸಕ್ತಿ ವಹಿಸುತ್ತಿದ್ದಾರೆ. ಹೀಗಾಗಿ ಡಿಜಿಟಲ್ ಡಿಟಾಕ್ಸ್ ಮಕ್ಕಳ ಮೇಲೆ ಪರಿಣಾಮ ಬೀರಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ