ಆಸ್ಪತ್ರೆಯಲ್ಲಿಇಬ್ಬರು ವೈದ್ಯರು ಮಾತ್ರ ಕಾರ್ಯನಿರ್ವಹಿಸುತ್ತಿದ್ದು, ಮೂರು ಹುದ್ದೆ ಖಾಲಿ ಇವೆ. ಗ್ರಾಮ ಸುಮಾರು 18,000 ಜನಸಂಖ್ಯೆ ಹೊಂದಿದೆ. ಸಿದ್ಧಸಮುದ್ರ, ಲಿಂಗದಳ್ಳಿ, ಬಿದರಗಡ್ಡಿ ಹಾಗೂ ಕೆಂಗಾನೂರ ಗ್ರಾಮಗಳು ಕೂಡ ಈ ಆರೋಗ್ಯ ಕೇಂದ್ರದ ವ್ಯಾಪ್ತಿಗೆ ಒಳಪಡುತ್ತವೆ. ಹೀಗಾಗಿ, ಈ ಭಾಗದ ಸಹಸ್ರಾರು ಜನರು ಚಿಕಿತ್ಸೆಗಾಗಿ ಇದೇ ಆಸ್ಪತ್ರೆಗೆ ಬರುತ್ತಾರೆ. ಆದರೆ, ವೈದ್ಯರ ಕೊರತೆಯಿಂದ ರೋಗಿಗಳು ಪರದಾಡುವಂತಾಗಿದೆ.