ಪಂಜಾಬದಲ್ಲಿ ಬೆಳಗಾವಿ ಯೋಧ ಮೃತ

ಯೋಧ ಜಗದೀಶ ಮನೋಹರ ಶಿಂಧೆ
ಯೋಧ ಜಗದೀಶ ಮನೋಹರ ಶಿಂಧೆ
Published on
ಬೆಳಗಾವಿ: ಪಂಜಾಬ ರಾಜ್ಯದ ಬಂಟೀದಾ ನಗರದಲ್ಲಿ ಕರ್ತವ್ಯ ನಿಮಿತ್ತ ತೆರಳುತ್ತಿದ್ದಾಗ ಸಂಭವಿಸಿದ ಅಪಘಾತದಲ್ಲಿ ಮೂಲತಃ ಬೆಳಗಾವಿ ತಾಲೂಕಿನ ಕಂಗ್ರಾಳಿ ಕೆಎಚ್ ಗ್ರಾಮದ ಯೋಧ ಜಗದೀಶ ಮನೋಹರ ಶಿಂಧೆ (40) ಮೃತರಾಗಿದ್ದಾರೆ.
ಕಳೆದ 24 ವರ್ಷಗಳಿಂದ ಸೇನೆಯಲ್ಲಿದ್ದ ಜಗದೀಶ ನಾಲ್ಕು ತಿಂಗಳಿಗೆ ನಿವೃತ್ತರಾಗುವವರಿದ್ದರು. ಬಂಟೀದಾದ ಆರ್ಮಿ ಏರ್ ಡಿಫೆನ್ಸ್ ಸೇನಾ ಕೇಂದ್ರದ ಸೇವೆಯಲ್ಲಿದ್ದರು. ಕುಟುಂಬ ಸಮೇತ ಅಲ್ಲೇ ವಾಸಿಸುತ್ತಿದ್ದರು.
ಜಗದೀಶ ಪಾರ್ಥಿವ ಶರೀರ ದೆಹಲಿಯಿಂದ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಬುಧವಾರ ಬೆಳಗ್ಗೆ ಆಗಮಿಸಲಿದ್ದು, ಅಲ್ಲಿಂದ ಸ್ವಗ್ರಾಮಕ್ಕೆ ಕರೆದೊಯ್ಯಲಿದ್ದಾರೆ. ಪತ್ನಿ, ಇಬ್ಬರು ಪುತ್ರರು ಪಾರ್ಥಿವ ಶರೀರದ ಜತೆಗೆ ಆಗಮಿಸುತ್ತಿದ್ದಾರೆ.
ಮೃತ ಜಗದೀಶ ಸೋದರ ಸಹ ಸೇನೆಯಲ್ಲಿದ್ದಾರೆ. ಮೃತರಿಗೆ ತಂದೆ-ತಾಯಿ ಇದ್ದಾರೆ. ಬುಧವಾರ ಸ್ವಗ್ರಾಮದಲ್ಲಿ ಅಂತ್ಯಸಂಸ್ಕಾರ ನೆರವೇರಲಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net