ಬೆಳಗಾವಿ ಜಿಲ್ಲೆಗೆ ರಾಜ್ಯ ಮಟ್ಟದ ಪ್ರಥಮ ಸ್ಥಾನ

ಬೆಂಗಳೂರಿನಲ್ಲಿ  ಈಚೆಗೆ ನಡೆದ ಕಾರ್ಯಾಗಾರದಲ್ಲಿ  ಸಚಿವ ಚಲುವರಾಯ ಸ್ವಾಮಿ   ರಾಜ್ಯ ಮಟ್ಟದ ಪ್ರಥಮ ಸ್ಥಾನ ಪ್ರಶಸ್ತಿಯನ್ನು ಎಚ್.ಡಿ.ಕೋಳೇಕರ್ ಪ್ರದಾನ ಮಾಡಿದರು. ಕೆ.ರಾಜೇಂದ್ರ,ವಾಯ್.ಎಸ್.ಪಾಟೀಲ, ಜಿ.ಟಿ.ಪುತ್ರ ಇತರರಿದ್ದರು.
ಬೆಂಗಳೂರಿನಲ್ಲಿ ಈಚೆಗೆ ನಡೆದ ಕಾರ್ಯಾಗಾರದಲ್ಲಿ ಸಚಿವ ಚಲುವರಾಯ ಸ್ವಾಮಿ ರಾಜ್ಯ ಮಟ್ಟದ ಪ್ರಥಮ ಸ್ಥಾನ ಪ್ರಶಸ್ತಿಯನ್ನು ಎಚ್.ಡಿ.ಕೋಳೇಕರ್ ಪ್ರದಾನ ಮಾಡಿದರು. ಕೆ.ರಾಜೇಂದ್ರ,ವಾಯ್.ಎಸ್.ಪಾಟೀಲ, ಜಿ.ಟಿ.ಪುತ್ರ ಇತರರಿದ್ದರು.
Published on
ಬೆಳಗಾವಿ:ಸರ್ಕಾರದ ವಿವಿಧ ಕೃಷಿ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿ, ರೈತರಿಗೆ ಸರ್ಕಾರಿ ಸೌಲಭ್ಯಗಳನ್ನು ಸಮರ್ಪಕವಾಗಿ ಮುಟ್ಟಿಸುವಲ್ಲಿ ಕೃಷಿ ಇಲಾಖೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲೆಗೆ ರಾಜ್ಯ ಮಟ್ಟದ ಪ್ರಥಮ ಸ್ಥಾನ ಲಭಿಸಿದೆ.
ಬೆಳಗಾವಿ ಜಿಲ್ಲೆಯ ಕೃಷಿ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಸಮನ್ವಯದ ಕಾರ್ಯ, ಕೃಷಿ ಹೊಂಡ, ಫಸಲ್ ಬಿಮಾ ಯೋಜನೆ, ಕೃಷಿ ಸಿಂಚಾಯಿ, ತುಂತುರು, ಹನಿ ನೀರಾವರಿ, ರೈತಪರ ಯೋಜನೆಗಳ ಯಶಸ್ವಿ ಜಾರಿ, ತಂತ್ರಜ್ಞಾನ ಆಧಾರಿತ ಕೃಷಿ ಸೇವೆಗಳ ವಿಸ್ತರಣೆ ಹಾಗೂ ರೈತರ ಸಮಸ್ಯೆಗಳಿಗೆ ತ್ವರಿತ ಸ್ಪಂದನೆ ನೀಡಿದ ಕಾರ್ಯವನ್ನು ಪರಿಗಣಿಸಿ ಈ ಪ್ರಶಸ್ತಿ ನೀಡಲಾಗಿದೆ. ಬೆಳಗಾವಿ ಜಿಲ್ಲಾ ಕೃಷಿ ಇಲಾಖೆ ಅಧಿಕಾರಿ, ಸಿಬ್ಬಂದಿ ವರ್ಗಕ್ಕೆ ಜಿಲ್ಲಾಧಿಕಾರಿ ಮೊಹಮ್ಮದ ರೋಷನ್, ಜಿಪಂ ಮೊಹಮ್ಮದ ರೋಷನ್ ಅಭಿನಂದನೆ ಸಲ್ಲಿಸಿದೆ.
ಬೆಂಗಳೂರಿನಲ್ಲಿ ಮೇ 18ರಂದು ನಡೆದ ರಾಜ್ಯ ಮಟ್ಟದ ಮುಂಗಾರು ಹಂಗಾಮಿನ ಕಾರ್ಯಾಗಾರದಲ್ಲಿ ಕೃಷಿ ಸಚಿವ ಚಲುವರಾಯ ಸ್ವಾಮಿ ಅವರು ರಾಜ್ಯ ಮಟ್ಟದ ಪ್ರಥಮ ಸ್ಥಾನ ಪ್ರಶಸ್ತಿಯನ್ನು ಕೃಷಿ ಇಲಾಖೆ ಜಂಟಿ ನಿ ನಿರ್ದೇಶಕ ಎಚ್.ಡಿ.ಕೋಳೇಕರ್ ಅವರಿಗೆ ಪ್ರದಾನ ಮಾಡಿ ಗೌರವಿಸಿದರು. ಕೃಷಿ ಇಲಾಖೆಯ ಕಾರ್ಯದರ್ಶಿ ಕೆ.ರಾಜೇಂದ್ರ, ಕೃಷಿ ಆಯುಕ್ತ ವಾಯ್.ಎಸ್.ಪಾಟೀಲ, ಕೃಷಿ ನಿರ್ದೇಶಕ ಜಿ.ಟಿ.ಪುತ್ರ, ಜಿಲ್ಲಾ ಕೃಷಿ ಉಪನಿರ್ದೇಶಕ ಸಲೀಂ ಸಂಗತ್ರಾನ್, ಚಿಕ್ಕೋಡಿ ಉಪ ಕೃಷಿ ನಿರ್ದೇಶಕ ಸಹದೇವ ಯರಗೊಪ್ಪ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net